ಮನೆಯ ವಾಸ್ತು ದೋಷವೇ ? ಹಣ ಖರ್ಚಿಲ್ಲದೆ ಸರಿಪಡಿಸಬಹುದಾದ ಸರಳ ಉಪಾಯಗಳು ಇಲ್ಲಿವೆ
ಮನೆಯ ವಾಸ್ತು ಸರಿಯಾಗಿಲ್ಲ ಎಂದು ಕೆಲವರು ಹೇಳಿದಾಗ ಮತ್ತು ಅದು ನಮ್ಮ ಮನಸ್ಸಿಗೆ ಭಾವಿಸಿದಾಗ ಕಟ್ಟಿರುವ ಗೋಡೆಗಳನ್ನು ಒಡೆದು ಕಟ್ಟುವುದು ಅಥವಾ ದೊಡ್ಡ ಬದಲಾವಣೆಗಳನ್ನು ಮಾಡುವುದು ಅನಿವಾರ್ಯ ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಪ್ರತಿಯೊಂದು ಸಮಸ್ಯೆಗೆ ಒಂದು ಪರಿಹಾರ ಇದ್ದೆ ಇರುತ್ತದೆ. ಮನೆಯ ವಾಸ್ತುವಿಗೂ ಅಷ್ಟೇ ಹೆಚ್ಚು ವೆಚ್ಚ ಮಾಡುವ ಅಗತ್ಯವಿಲ್ಲ. ಮನೆಯಲ್ಲಿ ಕೆಲವು ಸರಳ ಕ್ರಮಗಳನ್ನು ಅನುಸರಿಸುವುದರಿಂದ ವಾಸ್ತು ದೋಷಗಳನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ಯಾವುದೇ ಹಣದ ಖರ್ಚಿಲ್ಲದೆ ಅನುಸರಿಸಬಹುದಾದ ವಿಧಾನಗಳು ಮನೆಯಲ್ಲಿನ ಶಾಂತಿ ಹಾಗೂ ಧನಾತ್ಮಕ ವಾತಾವರಣವನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ಮನೆಯ ಮುಖ್ಯ ದ್ವಾರವು ವಾಸ್ತುವಿನಲ್ಲಿ ತುಂಬಾ ಮಹತ್ತರವಾದ ಪಾತ್ರವಹಿಸುತ್ತದೆ. ಮನೆಯ ಮುಖ್ಯ ದ್ವಾರದ ಮೇಲ್ಬಾಗದಲ್ಲಿ ಹಳದಿ ಅಥವಾ ಕೆಂಪು ಬಣ್ಣದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ಪ್ರತಿ ದಿನಾ ಸಂಜೆ ಮುಖ್ಯ ದ್ವಾರದ ಬಳಿ ದೀಪವನ್ನು ಬೆಳಗಿಸುವದರಿಂದ ಮನೆಯೊಳಗೆ ಧನಾತ್ಮಕ ಶಕ್ತಿಯು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಶಾಂತಿ, ಆರ್ಥಿಕ ಪರಿಸ್ಥಿತಿ ಮತ್ತು ಒಗ್ಗಟ್ಟು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಇನ್ನೊಂದು ಸರಳ ವಿಧಾನವೆಂದರೆ ಪ್ರತಿದಿನ ಸಂಜೆ ಎರಡು ಲವಂಗಗಳೊಂದಿಗೆ ಕರ್ಪೂರ ಬೆಳಗಿಸುವುದು. ಕರ್ಪೂರದಿಂದ ಬರುವ ಹೂಗೆಯು ಮನೆಯೊಳಗಿನ ಗಾಳಿಯನ್ನು ಶುದ್ದಗೊಳಿಸುತ್ತದೆ. ಜೊತೆಗೆ ಕರ್ಪೂರ ಸುಗಂಧ ಮನಸ್ಸಿಗೆ ಶಾಂತಿ ನಿಡುತ್ತದೆ. ಇದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ.
ಉಪ್ಪು ನಕಾರತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ
ವಾಸ್ತು ಪ್ರಕಾರ ಉಪ್ಪಿಗೂ ತುಂಬಾ ವಿಶೇಷವಾದ ಮಹತ್ವವಿದೆ. ಒಂದು ಗಾಜಿನ ಪಾತ್ರೆಯಲ್ಲಿ ಅದನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇರಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಉಪ್ಪು ನಕಾರತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಿಕೆ ಇದೆ. ಆದರೆ ಈ ಉಪ್ಪನ್ನು ಪ್ರತಿ ಮೂರು ದಿನಕ್ಕೊಮ್ಮೆ ಬದಲಾಯಿಸುವದು ತುಂಬಾ ಅಗತ್ಯವಾಗಿದೆ.
ಮನೆಯ ಸ್ವಚ್ಛತೆ ಕೂಡ ವಾಸ್ತು ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಮನೆಯಲ್ಲಿ ಹಾಳಾದ ಅಥವಾ ಉಪಯೋಗಕ್ಕೆ ಬಾರದ ವಸ್ತುಗಳನ್ನು ಹೆಚ್ಚು ದಿನ ಇಟ್ಟುಕೊಳ್ಳಬಾರದು. ಒಡೆದ ಕನ್ನಡಿಗಳು, ಹಾಳಾದ ಗಡಿಯಾರಗಳು ಮತ್ತು ಕೆಲಸಕ್ಕೆ ಬಾರದ ವಸ್ತುಗಳನ್ನು ತೆಗೆದುಹಾಕುವುದು ಒಳ್ಳೆಯದು. ವಿಶೇಷವಾಗಿ ಅಡುಗೆ ಮನೆ ಮತ್ತು ಮಲುಗುವ ಕೋಣೆಯಲ್ಲಿ ಸದಾ ಸ್ವಚ್ಛತೆ ಕಾಪಾಡಿಕೊಳ್ಳುವುದು ವಾಸ್ತು ದೃಷ್ಟಿಯಿಂದ ಒಳ್ಳೆಯದು ಎಂದು ಅಭಿಪ್ರಾಯಪಡುತ್ತಾರೆ.
ಪ್ರತಿದಿನ ಬೆಳಿಗ್ಗೆ ಕಿಟಕಿಗಳನ್ನು ತೆರೆಯುವುದು ಉತ್ತಮವಾದ ಅಭ್ಯಾಸ, ಹೊರಗಿನಿಂದ ಬರುವ ಸಹಜ ಗಾಳಿ ಮತ್ತು ಬೆಳಕು ಮನೆಯೊಳಗೆ ಪ್ರವೇಶಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿಯು ಹೆಚ್ಚುತ್ತದೆ. ಇದರಿಂದಾಗಿ ಮನೆಯಲ್ಲಿ ವಾತಾವರಣ ಸಕಾರಾತ್ಮಕವಾಗಿರುತ್ತದೆ.
ಮನೆಯ ಮುಂಭಾಗದಲ್ಲಿ ತುಳಸಿ ಗಿಡ ನೆಡುವುದು
ಇನ್ನೊಂದು ಪ್ರಮುಖ ಸಲಹೆ ಎಂದರೆ ಮನೆಯ ಮುಂಭಾಗದಲ್ಲಿ ತುಳಸಿ ಗಿಡವನ್ನು ನೆಡುವುದು. ತುಳಸಿ ಗಿಡವನ್ನು ಮನೆಯ ಮುಂಭಾಗದಲ್ಲಿ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಶುಭಕರ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗದೆ. ತುಳಸಿ ಗಿಡವು ಮನೆಯ ವಾತವರಣವನ್ನು ಶುದ್ಧಗೊಳಿಸುವುದರ ಜೊತೆಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ.
ಒಟ್ಟಿನಲ್ಲಿ ವಾಸ್ತು ದೋಷಗಳನ್ನು ನಿವಾರಿಸಲು ಯಾವಾಗಲು ದೊಡ್ಡ ಬದಲಾನಣೆಯ ಅವಶ್ಯಕತೆ ಇರುವುದಿಲ್ಲ, ಕೆಲವು ಸರಳ ಮತ್ತು ಖರ್ಚು ಇಲ್ಲದ ಕ್ರಮಗಳನ್ನು ಮನೆಯಲ್ಲಿ ಪಾಲಿಸುವುದರಿಂದ ಶಾಂತಿ, ಸಮೃದ್ದಿ ಮತ್ತು ಉತ್ತಮ ವಾತಾವರಣ ನಿರ್ಮಿಸಿಕೊಳ್ಳಬಹುದು.
-
Water Tank Vastu: ಮನೆಯಲ್ಲಿ ನೀರಿನ ಟ್ಯಾಂಕ್ ಇದೆಯೇ? ವಾಸ್ತು ನಿಯಮಗಳು ತಿಳಿದುಕೊಳ್ಳಿ -
ಶನಿವಾರ ಈ ಕೆಲಸಗಳನ್ನು ಮಾಡಿದರೆ ಬದಲಾಗಲಿದೆ ನಿಮ್ಮ ಅದೃಷ್ಟ: ಶನಿದೇವನ ಕೃಪೆಗೆ ಇಲ್ಲಿದೆ ಸರಳ ವಾಸ್ತು ಟಿಪ್ಸ್ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Money Saving Vastu Tips: ವಾಸ್ತು ಪ್ರಕಾರ ಹಣ ಉಳಿಯುತ್ತಿಲ್ಲವೇ? ಈ ಸರಳ ಉಪಾಯಗಳನ್ನು ಅನುಸರಿಸಿ -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ














Click it and Unblock the Notifications