election commission West Bengal Assembly Election 2021 assam assembly election 2021 puducherry assembly election 2021 tamil nadu assembly election 2021 kerala assembly election 2021 vote ಚುನಾವಣಾ ಆಯೋಗ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ಅಸ್ಸಾಂ ವಿಧಾನಸಭೆ ಚುನಾವಣೆ 2021 ಪುದುಚೇರಿ ವಿಧಾನಸಭೆ ಚುನಾವಣೆ 2021 ತಮಿಳುನಾಡು ವಿಧಾನಸಭೆ ಚುನಾವಣೆ 2021 ಮತ ಮತದಾರ
4 ರಾಜ್ಯ 1 ಕೇಂದ್ರಾಡಳಿತ ಪ್ರದೇಶದಲ್ಲಿ ಇರುವ ಒಟ್ಟು ಮತದಾರರೆಷ್ಟು?
ನವದೆಹಲಿ, ಏಪ್ರಿಲ್ 5: ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ನಡೆಯುತ್ತಿದ್ದು ಈ ಪ್ರದೇಶಗಳಲ್ಲಿರುವ ಒಟ್ಟು ಮತದಾರರ ಸಂಖ್ಯೆ ಕುರಿತು ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರಾ ಮಾಹಿತಿ ನೀಡಿದ್ದಾರೆ.
ಅಸ್ಸಾಂನಲ್ಲಿ 23.2 ಮಿಲಿಯನ್ ಮತದಾರರು, ತಮಿಳುನಾಡಿನಲ್ಲಿ 62.8 ಮಿಲಿಯನ್ ಮತದಾರರು, ಪಶ್ಚಿಮ ಬಂಗಾಳದಲ್ಲಿ 73.4 ಮಿಲಿಯನ್ ಮತದಾರರು, ಕೇರಳದಲ್ಲಿ 26.7 ಮಿಲಿಯನ್ ಮತದಾರರು, ಪುದುಚೇರಿಯಲ್ಲಿ 1ಮಿಲಿಯನ್ ಮತದಾರರಿದ್ದಾರೆ. ಒಟ್ಟು 187 ಮಿಲಿಯನ್ ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.
5 ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ, ಸಂಪೂರ್ಣ ವಿವರ
ಮಾರ್ಚ್ 2 ರಿಂದ ಅಸ್ಸಾಂನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಪುದುಚೆರಿ, ಕೇರಳ ಮತ್ತು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಅಸ್ಸಾಂನಲ್ಲಿ ಮೂರು ಹಾಗೂ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಎಲ್ಲ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ. ಈಗಾಗಲೇ ಅಸ್ಸಾಂ, ಹಾಗೂ ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಮತದಾನ ನಡೆದಿದೆ.
ಎಲ್ಲ ಮತಗಟ್ಟೆ ಅಧಿಕಾರಗಳಿಗೂ ಚುನಾವಣೆಗೂ ಮುನ್ನ ಕೋವಿಡ್ ಲಸಿಕೆಗಳನ್ನು ನೀಡಲಾಗುತ್ತದೆ. ಲಸಿಕೆ ಕಾರ್ಯಕ್ರಮವು ಸಕಾರಾತ್ಮಕ ಚುನಾವಣಾ ಪರಿಸರವನ್ನು ಸೃಷ್ಟಿಸಿದೆ. ಈ ಪ್ರಕ್ರಿಯೆಯಲ್ಲ ಜನರ ವಿಶ್ವಾಸವನ್ನು ವೃದ್ಧಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರನ್ನು ಕೂಡ ಮುಂಚೂಣಿ ಕೆಲಸಗಾರರು ಎಂದು ಗುರುತಿಸಿ ಲಸಿಕೆ ನೀಡಲಾಗುವುದು ಎಂದು ಈ ಮೊದಲೇ ಅರೋರ ತಿಳಿಸಿದ್ದರು.