• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈಕುಂಠ ಏಕಾದಶಿಯಂದು ಪಠಿಸಿ ಶ್ರೀ ವೆಂಕಟೇಶ ಸ್ತೋತ್ರ

By Prasad
|
ವೈಕುಂಠ ಏಕಾದಶಿಯಂದು ಎಲ್ಲೆಲ್ಲೂ ಜಗತ್ತಿಗೆ ಸನ್ಮಂಗಳವನ್ನು ಬಯಸುವ ವೆಂಕಟೇಶ ದೇವರ ಸ್ಮರಣೆ. ಸ್ವರ್ಗದ ಬಾಗಿಲು ಇಂದು ತೆರೆದಿರುತ್ತದೆ ಎಂದು ನಂಬುವ ಎಲ್ಲ ಭಕ್ತಾದಿಗಳು ಒಂದು ಬಾರಿಯಾದರೂ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿ ಪ್ರಸಾದ ತಿಂದು ಬರುತ್ತಾರೆ. ಉಪವಾಸ ಮಾಡುವವರು ಊಟವನ್ನು ತ್ಯಜಿಸಿ ಹಾಲು ಹಣ್ಣುಗಳನ್ನೇ ಪ್ರಸಾದವೆಂದು ಸ್ವೀಕರಿಸುತ್ತಾರೆ.

ವೆಂಕಟೇಶ ಎಲ್ಲ ಜನಾಂಗದ ದೇವರೆಂದೇ ಪ್ರತೀತಿ. ಆತನನ್ನು ಪರಿಪರಿಯಾಗಿ ಭಜಿಸುವವರಿಗೆ ಕೇಳಿದ್ದನ್ನು ಕೊಟ್ಟು ಕಾಪಾಡುತ್ತಾನೆ ಎಂಬ ನಂಬಿಕೆಯೂ ಇದೆ. ವೈಕುಂಠ ಏಕಾದಶಿಯಂದು ದೇವಸ್ಥಾನಕ್ಕೆ ಹೋಗಿ ಬರೀ ಪ್ರಸಾದ ತಿಂದು ಬರುವ ಬದಲು ಈ ವೆಂಕಟೇಶ ಸ್ತೋತ್ರವನ್ನು ಪಠಿಸಿ. ವೆಂಕಟೇಶ ದೇವರು ಎಲ್ಲ ಸಂಕಷ್ಟಗಳನ್ನು ಎಲ್ಲ ದುಃಖಗಳನ್ನು ನಿವಾರಿಸಿ ಸನ್ಮಂಗಳವನ್ನುಂಟು ಮಾಡುತ್ತಾರೆ.

ವೆಂಕಟೇಶೋ ವಾಸುದೇವೋ ಪ್ರದ್ಯುಮ್ನೋ ಅಮಿತವಿಕ್ರಮಃ |
ಸಂಕರ್ಷಣೋ ಅನಿರುಧ್ಧಶ್ಚ ಶೇಷಾದ್ರಿಪತಿರೇವ ಚ || 1 ||

ಜನಾರ್ಧನಃ ಪದ್ಮನಾಭೋ ವೆಂಕಟಾಚಲವಾಸನಃ |
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ || 2 ||

ಗೋವಿಂದೋ ಗೋಪತಿಃ ಕೃಷ್ಣ ಕೇಶವೋ ಗರುಡಧ್ವಜಃ |
ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜಃ || 3 ||

ಶ್ರೀಧರಃ ಪುಂಡರೀಕಾಕ್ಷಃ ಸರ್ವದೇವಸ್ತುತೋ ಹರಿಃ |
ಶ್ರೀನೃಸಿಂಹೋ ಮಹಾಸಿಂಹ ಸೂತ್ರಾಕಾರಃ ಪುರಾತನಃ || 4 ||

ರಮಾನಾಥೋ ಮಹೀಭರ್ಥಾ ಭೂಧರಃ ಪುರುಷೋತ್ತಮಃ |
ಚೋಲಪುತ್ರಪ್ರಿಯಃ ಶಾಂತೋ ಬ್ರಹ್ಮಾದೀನಾಂ ವರಪ್ರದಃ || 5 ||

ಶ್ರೀನಿಧಿಃ ಸರ್ವಭೂತಾನಾಮ್ ಭಯಕೃಧ್ಭಯನಾಶನಃ |
ಶ್ರೀರಾಮೋ ರಾಮಭಧ್ರಶ್ಚ ಭವಬಂಧೈಕಮೋಚಕಃ || 6 ||

ಭೂತಾವಾಸೋ ಗಿರಾವಾಸಃ ಶ್ರೀನಿವಾಸಃ ಶ್ರಿಯಃ ಪತಿಃ |
ಅಚ್ಯುತಾನಂತ ಗೋವಿಂದೋ ವಿಷ್ಣುರ್ವೇಂಕಟನಾಯಕಃ || 7 ||

ಸರ್ವದೇವೈಕಶರಣಂ ಸರ್ವದೇವೈಕದೈವತಂ |
ಸಮಸ್ತ ದೇವಕವಚಂ ಸರ್ವದೇವಶಿಖಾಮಣಿಃ || 8 ||

ಇತೀದಂ ಕೀರ್ತಿದಂ ಯಸ್ಯ ವಿಷ್ಣೋರಮಿತತೇಜಸಃ |
ತ್ರಿಕಾಲೇ ಯಃ ಪಠೇನ್ನಿತ್ಯಂ ಪಾಪಂ ತಸ್ಯ ನ ವಿದ್ಯತೇ || 9 ||

ರಾಜದ್ವಾರೇ ಪಠೇದ್ಘೋರೇ ಸಂಗ್ರಾಮೇ ರಿಪುಸಂಕಟೇ |
ಭೂತ ಸರ್ಪಪಿಶಾಚಾದಿ ಭಯಂ ನಾಸ್ತಿ ಕದಾಚನ || 10 ||

ಅಪುತ್ರೋ ಲಭತೇ ಪುತ್ರಾನ್ ನಿರ್ಧನೋ ಧನವಾನ್ ಭವೇತ್ |
ರೋಗಾರ್ತೋ ಮುಚ್ಯತೇ ರೋಗಾಧ್ಬಧ್ಧೋ ಮುಚ್ಯೇತ್ ಬಂಧನಾತ್ || 11 ||

ಯದ್ಯದಿಷ್ಟತಮಂ ಲೋಕೇ ತತ್ವಪ್ರಾಪ್ನೋತ್ಯ ಸಂಶಯಂ |
ಐಶ್ವರ್ಯಂ ರಾಜಸನ್ಮಾನಮ್ ಭಕ್ತಿಮುಕ್ತಿಫಲಪ್ರಧಂ || 12 ||

ವಿಷ್ಣುರ್ಲೋಕೈಕಸೋಪಾನಂ ಸರ್ವದುಖೈಕನಾಶನಂ |
ಸರ್ವೈಶ್ವರ್ಯಪ್ರದಂ ನೃಣಾಮ್ ಸರ್ವಮಂಗಲಕಾರಕಮ್ || 13 ||

ಮಾಯಾವೀ ಪರಮಾನಂದಂ ತ್ಯಕ್ತ್ವಾ ವೈಕುಂಠಮುತ್ತಮಂ |
ಸ್ವಾಮಿಪುಷ್ಕರಿಣೀ ತೀರೇ ರಮಯಾ ಸಹ ಮೋದತೇ || 14 ||

ಕಲ್ಯಾಣಾಧ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ || 15 ||

ವೆಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ |
ವೇಂಕಟೇಶ ಸಮೋ ದೇವೋ ನ ಭೂತೋ ನ ಭವಿಷ್ಯತಿ ||

ಏತೇನ ಸತ್ಯವಾಕ್ಯೇನ ಸರ್ವಾರ್ಥಾನ್ ಸಾಧುಮಾಮ್ಯಹಂ || 16 ||

|| ಇತಿ ಶ್ರೀ ಬ್ರಹ್ಮಾಂಡಪುರಾಣೇ ಬ್ರಹ್ಮನಾರದ ಸಂವಾದೇ ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ ಸಂಪೂರ್ಣಂ ||

|| ಶ್ರೀ ಕೃಷ್ಣಾರ್ಪಣಮಸ್ತು ||

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ವೈಕುಂಠ ಏಕಾದಶಿ ಸುದ್ದಿಗಳುView All

English summary
Chant Venkatesha Stotram on Vaikunta Ekadashi. On this day it is believed that doors of Vaikunta, the abode of lord Venkateshwara or Vishnu would be open to the devotees.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more