ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಗುರುವಿಗೆ ಎಷ್ಟು ನಮಿಸಲಿ?

By Prasad
|
Google Oneindia Kannada News

Whom to salute?
ವಿದ್ಯೆ ಕಲಿಸಿ ಸಾಕ್ಷರರನ್ನಾಗಿ ಮಾಡಿದ ಶಿಕ್ಷಕರು ಮಾತ್ರ ಗುರುಗಳೆ? ಈ ಜೀವನವೇ ಒಂದು ಪಾಠಶಾಲೆಯಿದ್ದಂತೆ. ಬದುಕಿರುವವರೆಗೆ ಪ್ರತಿ ಹಂತವೂ ಹೊಸದೊಂದನ್ನು ಕಲಿಯಲು ದಾರಿ ಮಾಡಿಕೊಡುತ್ತಿರುತ್ತದೆ. ಅನೇಕ ವ್ಯಕ್ತಿಗಳು ಪ್ರಭಾವ ಬೀರುತ್ತಾರೆ. ಉತ್ತಮ ಜೀವನ ರೂಪಿಸುವಲ್ಲಿ ತಮ್ಮದೇ ರೀತಿಯಲ್ಲಿ ಕಾಣಿಕೆ ಸಲ್ಲಿಸಿರುತ್ತಾರೆ. ಯಾರಿಗೆ ನಮಿಸೋಣ?ಎಲ್ಲರನ್ನೂ ನಮಿಸೋಣ.

* ವಿದ್ಯಾಶಂಕರ ಹರಪನಹಳ್ಳಿ

ಎಳೆಯ ವಯಸ್ಸಿನಲ್ಲಿ ಪೋಷಿಸಿ ಪ್ರತಿಯೊಂದನ್ನೂ ಹೇಳಿ ಕೊಡುವ ತಂದೆತಾಯಿಗಳೆಂಬ ಗುರುಗಳು. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರುವು.

ಅಕ್ಷರ ತಿದ್ದಿಸಿ, ನೀತಿ ಕಥೆಗಳಿಂದ ಬದುಕಿಗೊಂದು ರೂಪ ಕೊಟ್ಟ ಪ್ರಾಥಮಿಕ ಶಾಲೆಯ ಗುರುಗಳು.

ವಿದ್ಯಾದಾನ ಮಾಡಿ ಜೀವನೋಪಾಯಕ್ಕೆ ಮತ್ತು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಕಾರಣರಾದ ಗುರುವೃಂದ.

ಬದುಕಲ್ಲಿ ಗೊಂದಲವಾದಾಗ ಆರೋಗ್ಯಕರ ಚರ್ಚೆಯಿಂದ ಸರಿಯಾದ ಮಾರ್ಗ ಕಂಡುಕೊಳ್ಳಲು ಸಹಕರಿಸಿದ ಸ್ನೇಹಿತರೆಂಬೋ ಗುರುಗಳು.

ಅರ್ಥೇಚ ಕಾಮೇಚ ಮೋಕ್ಷೇಚ ಎಂದು ಜೊತೆ ಜೊತೆಯಲಿ ಸಾಗುತ ಬದುಕಿಗೆ ಅರ್ಥ ಬೆಳಗಿಸುವ ಸಹಧರ್ಮಿಣಿಯೆಂಬ ಗುರುವು.

ಬದುಕಲ್ಲಿ ಮುಗ್ದತೆಯ ಪಾಠ ಮತ್ತೆ ಮತ್ತೆ ಹೇಳಿಕೊಟ್ಟ ಮಗುವೆಂಬ ಗುರು.

ನೈತಿಕ ಮೌಲ್ಯಗಳನ್ನು ಹೇಳಿಕೊಟ್ಟು ಸರಿಯಾದ ದಾರಿಯಲ್ಲಿ ನಡೆವಂತೆ ಮಾಡುವ ಸಂಸ್ಕೃತಿಯೆಂಬ ಗುರು.

ಹರ ಮುನಿದರೆ ಗುರು ಕಾಯುವನು ಎಂಬ ಅಭಯ. ಗುರು ಬ್ರಹ್ಮ ಎಂಬುವುದು ದೇಶದ ಸಂಸ್ಕಾರ.... ಯಾವ ಗುರುವಿಗೆ ಎಷ್ಟು ನಮಿಸಲಿ?

ಹೇ ದೇವ! ವಿನಯದಿಂದ ಗುರುವಿನೆಡೆ ನನ್ನ ಶಿರ ಸದಾ ಬಾಗಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X