ಇಲ್ಲಿ ಡಬಲ್ ಸೈಟ್ ಬಿಡಿ ಹಾಫ್ ಸೈಟೂ ಸಿಗಲ್ಲ

(ಮುಂದುವರಿದಿದೆ...) "ಇದು ಬೆಂಗಳೂರೇ ಅಲ್ಲಲ್ಲ? ಅಲ್ಲಿ ಆನೇಕಲ್ ಅಂತ ಬರೆದಿತ್ತು" ಎಂದೆ ನಾನು ಆಶ್ಚರ್ಯದಿಂದ. "ಇಪ್ಪತ್ತೈದು ಮೂವತ್ತಕ್ಕೆ ಇನ್ನೆಲ್ಲಿ ಹೋಗೋಣ ಸಾರ್?" ಅಂದ ಆತ ಅರ್ಧ ಕೋಪ ಹಾಗೂ ಅರ್ಧ ತಮಾಷೆಯಲ್ಲಿ. "ಮನೆ ತನಕ ರಸ್ತೆ ಇರಬೇಕು. ಆಚೀಚೆ ಮನೆ ಇರಬೇಕು, ಇಲೆಕ್ಟ್ರಿಸಿಟಿ ಬಂದಿರಬೇಕು, ಬಜೆಟ್ ನಲುವತ್ತು ಲಕ್ಷ. ಸೈಟು ಸಣ್ದಾದ್ರೂ ಪರವಾಗಿಲ್ಲ, ಆದರೆ ಬೆಂಗಳೂರಿನಲ್ಲೇ ಇರಬೇಕು... ಹಾಗಿದ್ರೆ ಮಾತ್ರ ತೋರಿಸಪ್ಪ.. ಇಲ್ಲಾಂದ್ರೆ ವಾಪಸ್ ಹೋಗೋಣ" ಅಂದೆ ನಾನು. "ಅಂದ್ರೆ ಡೆವಲಪ್ ಆಗಿರೋ ಏರಿಯಾ ಸಾರ್. ಅಲ್ಲೆಲ್ಲ ಡಬಲ್ ಸೈಟ್ ಬಿಡಿ, ಹಾಫ್ ಸೈಟೂ ನಲುವತ್ತು ಲಕ್ಷಕ್ಕೆ ಸಿಗೋಲ್ಲ ಸಾರ್" ಅಂದ.

ಅವನ ಮಾತು ನನಗೆ ಅರ್ಥವಾಗಲಿಲ್ಲ. ಚಿಕ್ಕಪ್ಪನನ್ನು ನೋಡಿದೆ. "ಇಲ್ಲಿ ಸೈಟ್ ಅಂದರೆ ಮೂವತ್ತು ಬೈ ನಲುವತ್ತು. ಅರುವತ್ತು ಬೈ ನಲುವತ್ತಕ್ಕೆ ಡಬಲ್ ಸೈಟ್ ಅಂತಾರೆ, ಹಾಫ್ ಸೈಟ್ ಅಂದ್ರೆ ಮೂವತ್ತು ಬೈ ಇಪ್ಪತ್ತು" ಪಿಸುಮಾತಿನಲ್ಲಿ ಚಿಕ್ಕಪ್ಪ ವಿವರಿಸಿದ. "ಸಿಟಿಯೊಳಗೆ ಹಾಫ್ ಸೈಟ್ ಆಗಬಹುದಾ ಸಾರ್?" ಚಿಕ್ಕಪ್ಪನ ಪಿಸು ಮಾತು ಕೇಳಿಸಿಕೊಂಡ ರಾಜ ಕೇಳಿದ. "ಅದರಲ್ಲಿ ಮನೆ ಹೇಗೆ ಕಟ್ಟೋದು?" ಕೇಳಿದೆ ನಾನು. "ಮೂವತ್ತು ಬೈ ಇಪ್ಪತ್ತು ಅಂದ್ರೆ ಆರುನೂರು ಚದರಡಿ. ಕಾರ್ಪೊರೇಶನ್ನಿನ ಸೆಟಾಫ್ ಬಿಟ್ಟು ಐನೂರು ಚದರಡಿ ಸಿಗುತ್ತೆ. ಎರಡು ಫ್ಲೋರ್ ಮಾಡಿ ನೀಟಾಗಿ ಸಾವಿರ ಚದರಡಿಯ ಎರಡು ಬೆಡ್ ರೂಮಿನ ಮನೆ ಕಟ್ಟಬಹುದು ಸಾರ್" ವಿವರಿಸಿದ ರಾಜ. "ಸ್ವಲ್ಪ ಇಕ್ಕಟ್ಟಾಗುತ್ತಾಂತ..." ಸಂದೇಹದಿಂದ ಹೇಳಿದೆ ನಾನು.

"ಹೂಸು ಬಿಟ್ಟರೆ ಆಚೆಮನೆಯವರಿಗೆ..." ಚಿಕ್ಕಪ್ಪನೂ ಏನೋ ಹೇಳಹೊರಟಿದ್ದ. ನಡುವೆ ಬಾಯಿ ಹಾಕಿದ ರಾಜ "ಏ... ನೀವೇನಂತೀರಾ ಸಾರ್.. ಇಪ್ಪತ್ತು ಬೈ ಹದಿನೈದರಲ್ಲಿ ಚಂದದ ಮನೆ ಕಟ್ಟಿ ಸುಖವಾಗಿ ಇದ್ದಾರೆ, ತೋರಿಸ್ಲಾ? ಬೆಂಗಳೂರಲ್ಲಿ ಈಗ ಇದೇ ಟ್ರೆಂಡು ಸಾರ್. ಜಾಗ ಇಲ್ಲ.. ಬದುಕಬೇಕಲ್ಲ? ಸಿಟಿ ಬಿಟ್ಟು ಹೊರಗೆ ಹೋಗಿ ಮನೆ ಕಟ್ಟಿ ನಿಂತರೆ ಏನು ಪ್ರಯೋಜನ ಸಾರ್? ಪುನಃ ಟ್ರಾಫಿಕ್ಕಿನಲ್ಲಿ ಬೆಳಿಗ್ಗೆ ಕೆಲಸಕ್ಕೆ ಸಿಟಿಗೇ ಬರಬೇಕಲ್ಲ" ವಿವರಿಸುತ್ತ ರಾಜ ಒಂದು ಕೆಲಸ ಪ್ರಗತಿಯಲ್ಲಿರುವ ಕಟ್ಟಡದೆದುರು ನಿಲ್ಲಿಸಿದ.

"ಇಲ್ನೋಡಿ ಸಾರ್. ಇವರು ಇಪ್ಪತ್ತು ಬೈ ಹದಿನೈದರಲ್ಲಿ ಮನೆ ಕಟ್ತಾ ಇದಾರೆ. ಕೆಳಗೆ ಕಿಚನ್ ಮತ್ತೆ ಹಾಲ್. ಮೇಲೆ ಬೆಡ್ ರೂಮು, ಬಾತ್ ರೂಮು. ಎರಡನೇ ಅಂತಸ್ತಿನ ಇನ್ನೊಂದು ಬೆಡ್ ರೂಮ್ ಕೂಡ ಪ್ಲಾನಿನಲ್ಲಿದೆ. ಪಕ್ಕದ ಇಪ್ಪತ್ತು ಬೈ ಹದಿನೈದು ಸೈಟ್ ಇವರದ್ದೇ. ಸೇಲಿಗಿದೆ. ಇಪ್ಪತ್ತೈದು ಲಕ್ಷ ಹೇಳುತ್ತಿದ್ದಾರೆ, ಇಪ್ಪತ್ತನಾಲ್ಕಕ್ಕೆ ಸಿಗಬಹುದು. ಅದು ಮಾರಿ ಹೋದರೆ ಇದಕ್ಕೆ ಎರಡನೇ ಅಂತಸ್ತು ಕಟ್ಟುವ ಆಲೋಚನೆ ಹಾಕಿದ್ದಾರೆ." ಕಟ್ಟಡದ ನಾಲ್ಕು ಸುತ್ತಕ್ಕೂ ನಮ್ಮನ್ನು ಕರೆದು ತೋರಿಸಿ ಹೇಳಿದ ರಾಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+