ದೀಪಾವಳಿಗೆ ಅಣ್ಣಾವ್ರನ್ನ ಮನೆಗೆ ಬರಮಾಡಿಕೊಳ್ಳಿ

ಟಿಕ್ ಟಿಕ್ ಟಿಕ್ ಟಿಕ್ ಅಂತ ಗಡಿಯಾರ ಹದಿನೆಂಟು ವರ್ಷಗಳ ಕಾಲ ಸಾಗಿ ಬಂದರೂ ಆ ಹಾಡು ಇನ್ನೂ ಹೃದಯದ ಗಡಿಯಾರದಲ್ಲಿ ಕೇಳಿಸುತ್ತಲೇ ಇದೆ. ಅದೇ ಅಣ್ಣಾವ್ರು, ಅದೇ ದೀಪಾವಳಿಯ ಹಾಡನ್ನು ನೆನಪಿಸುವಂತೆ ನಿಮ್ಮ ಮನೆಯ ಗೋಡೆಯನ್ನು ಅಲಂಕರಿಸುವಂತಿದ್ದರೆ? ವಾವ್ ಅಂತೀರಾ.
ಹಾಗಿದ್ದರೆ ಇಲ್ಲಿದೆ ನೋಡಿ, ಅಣ್ಣಾವ್ರು ರಾಜ್ ಕುಮಾರ್ ಅವರ ವಿಭಿನ್ನ ಭಂಗಿಯ ಭಾವಚಿತ್ರ ಹೊತ್ತ, ಕನ್ನಡ ಅಂಕಿಗಳುಳ್ಳ ಗಡಿಯಾರ ನಿಮ್ಮ ಮನೆಯ ಗೋಡೆ ಅಲಂಕಾರಕ್ಕಾಗಿ ಕಾದಿದೆ. ಈ ದೀಪಾವಳಿಗೆ ಕನ್ನಡದ ಮನಸುಗಳಿಗೆ ಇದಕ್ಕಿಂತ ಉತ್ತಮವಾದ ವಸ್ತು ಇನ್ನೊಂದು ಇರಲಾರದು.
ದೀಪಾವಳಿ ಹಬ್ಬದೂಟದ ತೇಗು ತೇಗಿ ಕೊಂಚ ವಿರಮಿಸುವ ಹೊತ್ತಿಗೆ ಕನ್ನಡ ರಾಜ್ಯೋತ್ಸವ ನಮ್ಮ ಮನೆ ಬಾಗಿಲನ್ನು ತಟ್ಟುತ್ತಿರುತ್ತದೆ. ಸುಸಂದರ್ಭ ಅಂದರೆ ಇದೇ ಅಲ್ವಾ? ಅಳಿಯತನಕ್ಕೆ ಬರುವ ಮಗಳು ಅಳಿಯನಿಗೆ ಜೇಬು ಖಾಲಿಯಾಗದಂತೆ ಉಡುಗೊರೆ ನೀಡಿ, ಮೇಲೆ ಈ ಕನ್ನಡ ಗಡಿಯಾರ ಇಟ್ಟುಕೊಟ್ಟರೆ ಮಗಳು ಅಳಿಯಂದಿರ ಮನಸು ಕೂಡ ಬೆಳಗೀತು.
ಈ ವಿನೂತನ, ಕನ್ನಡದ ಕಂಪನ್ನೂ ಸೂಸುವ ಗಡಿಯಾರವನ್ನು ಟೋಟಲ್ ಕನ್ನಡ.ಕಾಂ ಕನ್ನಡಿಗರಿಗಾಗಿ ತಂದಿದೆ. ಈ ಅಪೂರ್ವ ಅವಕಾಶವನ್ನು ಬಳಸಿಕೊಂಡು, ದೀಪಾವಳಿಯನ್ನು ಮರೆಯದ ಬೆಳಕಿನ ಹಬ್ಬವನ್ನಾಗಿಸಿಕೊಳ್ಳಿ.












Click it and Unblock the Notifications