ವೆರ್ನಾ, ಈ ದೀಪಾವಳಿಗೆ ಸಾವಿರ ಚೆಲುವಿನ ಬಣ್ಣ

Hyundai Verna : Perfect gift for a grand Deepavali
ದೀಪಾವಳಿ ಅಂದ್ರೆ ಕಣ್ಮುಂದೆ ದೀಪಗಳ ರಂಗವಲ್ಲಿ. ಅಲ್ಲಿ ನೀವು ಮತ್ತು ನಿಮ್ಮ ಫ್ಯಾಮಿಲಿ. ಹಣತೆಗಳ ಸಾಲು, ಚಿಟಪಟ ಪಟಾಕಿ ಸದ್ದು, ಸುರುಸುರು ಬತ್ತಿಗೆ ಕಣ್ಣಲ್ಲಿ ಬೆಳಕು ಸುರಿಸುವ ಮಕ್ಕಳು, ವಿಶೇಷ ಅಡುಗೆಯ ಘಮಘಮ. ಜೊತೆಗೆ ಅಂಗಳದಲ್ಲಿ ನಿಂತಿರುವ ಹೊಸ ಕಾರು. ಹೆಸರು ಹ್ಯುಂಡೈ ವೆರ್ನಾ.

ಅಳಿಯನಿಗೆ, ಮಾವನಿಗೆ, ಅಣ್ಣನಿಗೆ, ಅಕ್ಕನಿಗೆ, ಗಂಡನಿಗೆ, ಹೆಂಡತಿಗೆ, ಮದುವೆಯಾದ ಹೊಸ ಜೋಡಿಗೆ, ತಂಗಿಗೆ ತಮ್ಮನಿಗೆ, ಅಪ್ಪನಿಗೆ, ಅಮ್ಮನಿಗೆ.. ಹೀಗೆ ಯಾರು ಯಾರಿಗೆ ಬೇಕಾದರೂ ದೀಪಾವಳಿ ಉಡುಗೊರೆ ನೀಡಿ ಸಂಭ್ರಮ ಹೆಚ್ಚಿಸಬಹುದಾದ ಬೊಂಬಾಟ್ ಕಾರಿದು.

ಈ ದೀಪಾವಳಿಗೆ ನೀವು ಕಾರೊಂದನ್ನು ಉಡುಗೊರೆಯಾಗಿ ನೀಡಬಯಸಿದರೆ ನಮ್ಮ "ಗಿಫ್ಟ್ ಐಡಿಯಾಸ್" ಹ್ಯುಂಡೈ ವೆರ್ನಾ. ಈ ವರ್ಷ ರಸ್ತೆಗಿಳಿದ ಹೊಸ ಫ್ಲೂಡಿಕ್ ವೆರ್ನಾ. ಸೌಂದರ್ಯ, ಐಷಾರಾಮಿ, ಶಕ್ತಿ ವಿಷಯದಲ್ಲಿ ವೆರ್ನಾಕ್ಕೆ ವೆರ್ನಾವೇ ಸಾಟಿ. ಅದರ ವಿನ್ಯಾಸ ಯಾವತ್ತಿಗೂ ಒಂದು ಬೆರಗು.

ಇಂಟಿರಿಯರ್ ಮತ್ತು ಎಕ್ಸ್ ಟಿರಿಯರ್ :
ಅದರ ಮೇಲೆ ಆಕರ್ಷಕ ಗೆರೆಗಳು, ಬಣ್ಣಗಳು, ಗ್ರಾಫಿಕ್ಸ್ ಗಳು, ಅಪ್ಸರೆ ನಾಚುವಂತಹ ಲುಕ್, ಸ್ಪೋರ್ಟ್ಸ್ ಕಾರುಗಳ ಫೀಚರುಗಳು, ನೂತನ ತಂತ್ರಜ್ಞಾನ, ವೇಗ, ಆವೇಗ, ಅತ್ಯುತ್ತಮ ಸವಾರಿ ಅನುಭವ ನೀಡುವ ಇಂಟಿರಿಯರ್, ಹೀಗೆ ವೆರ್ನಾ ಇಷ್ಟಪಡಲು ಹತ್ತು ಹಲವು ಕಾರಣಗಳು ಬಾನಂಗಳದಲ್ಲಿ ಸಿಡಿದ ಪಟಾಕಿಗಳ ಬಣ್ಣಗಳಷ್ಟು.

ವೆರ್ನಾ ಕಾರನ್ನು ಸುಂದರವಾಗಿ, ಕಲಾತ್ಮಕವಾಗಿ, ಶಕ್ತಿಯುತವಾಗಿ ಗ್ರಾಹಕರ ಕೈಗಿಡುವಲ್ಲಿ ಹ್ಯುಂಡೈ ಪರಿಶ್ರಮಕ್ಕೊಂದು ಸಲಾಂ ಹೊಡೆಯಲೇಬೇಕು. ಇಂಟಿರಿಯರನ್ನು ಒಮ್ಮೆ ಇಣುಕಿ ನೋಡಿದರೆ ಸಾಕು. ಗುಣಮಟ್ಟ, ಆಕರ್ಷಕತೆ, ಶ್ರೀಮಂತಿಕೆ ಮತ್ತು ಐಷಾರಾಮಿ ಗುಣಗಳು ಎದ್ದು ಕಾಣುತ್ತವೆ. ಕಟ್ಟಿಂಗ್ ಎಡ್ಜ್ ವಿನ್ಯಾಸದ ಡ್ಯಾಷ್ ಬೋರ್ಡ್ ಅಂತೂ ಸೂಪರ್. ಅದರ ಮೇಲೊಂದು ಪುಟ್ಟ ಗಣೇಶನಿದ್ದರಂತೂ ಇನ್ನೂ ಸೂಪರ್.

ಹೊರ ವಿನ್ಯಾಸದ ಗ್ರಿಲ್ಲುಗಳು, ಎಲ್ ಆಕಾರದ ಹಿಂಬಂದಿ ಲ್ಯಾಂಪ್ ಗಳು, ಹೆಡ್ ಲ್ಯಾಂಪ್ ಗಳು ಇನ್ನಷ್ಟು ಮೆರುಗು ನೀಡುತ್ತವೆ. ಮೇಲೆ ಎರಡು ಹೆಡ್ ಲ್ಯಾಂಪ್, ಕೆಳಗೆ ಮೀನಿನ ಕಣ್ಣಿನಂತಹ ಇನ್ನೆರಡು ಹೆಡ್ ಲ್ಯಾಂಪ್ ಗಳು ಇದರ ಸೌಂದರ್ಯವನ್ನು ಹೆಚ್ಚಿಸಿವೆ.

ವೆರ್ನಾದಲ್ಲಿರುವ ಸುಲಭವಾಗಿ ನಿರ್ವಹಿಸಬಹುದಾದ ಸ್ವಿಚ್ ಗೇರ್, ವಿಆಕಾರದ ಕನ್ಸೊಲ್, ಜೊತೆಗೆ ಮುದ್ದಾಗಿರುವ ಮ್ಯೂಸಿಕ್ ಸಿಸ್ಟಮ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸ್ಟೀರಿಂಗ್ ವೀಲ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಸುಂದರ ಸೀಟುಗಳು ಆರಾಮದಾಯಕತೆಯೊಂದಿಗೆ ಸುರಕ್ಷತೆಯ ಅನುಭವವನ್ನೂ ನೀಡುತ್ತವೆ.

ಯುಎಸ್ ಬಿ ಪೋರ್ಟ್ ಮತ್ತು ಬ್ಲೂಟೂಥ್ ಸಾಧನ ಸೇರಿದಂತೆ ಮ್ಯೂಸಿಕ್ ಮಸ್ತಿಗೆ ಇಲ್ಲಿ ಯಾವುದೇ ಎಲ್ಲೆಗಳಿಲ್ಲ. ಆರು ಏರ್ ಬ್ಯಾಗ್ ಗಳಿವೆ. ಇದರಲ್ಲಿ 2 ಸೈಡ್ ಏರ್ ಬ್ಯಾಗ್, ಡ್ರೈವರ್ ಮತ್ತು ಎದುರು ಕೂತ ಪ್ರಯಾಣಿಕನಿಗೂ ಒಂದೊಂದು ಏರ್ ಬ್ಯಾಗ್ ಗಳಿವೆ.

ಎಂಜಿನ್ ಮತ್ತು ಮೈಲೇಜ್ : 2011ರ ವೆರ್ನಾ ಎರಡು ಪೆಟ್ರೊಲ್ ಮತ್ತು ಎರಡು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ. 1.4 ಲೀಟರ್ ಮತ್ತು 1.6 ಲೀಟರ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಇದರಲ್ಲಿ 1.4 ಲೀಟರ್ ಎಂಜಿನ್ ಆವೃತ್ತಿಗಳಲ್ಲಿ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಇದೆ. 1.6 ಲೀಟರ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ.

1.4 ಲೀಟರಿನ ಪೆಟ್ರೋಲ್ ಎಂಜಿನ್ ಫ್ಲೂಡಿಕ್ ವೆರ್ನಾ ಪ್ರತಿಲೀಟರ್ ಗೆ 17.43 ಕಿ.ಮೀ. ಮತ್ತು 1.6 ಲೀಟರಿನ ಎಂಜಿನ್ ಪ್ರತಿಲೀಟರ್ ಗೆ 17 ಕಿ.ಮೀ. ಮೈಲೇಜ್ ನೀಡುತ್ತದೆ. ಡೀಸೆಲ್ ಆವೃತ್ತಿಯ 1.4 ಲೀಟರ್ ಎಂಜಿನ್ ವೆರ್ನಾ ಪ್ರತಿಲೀಟರ್ ಗೆ ಸುಮಾರು 23.5 ಕಿ.ಮೀ. ಮತ್ತು 1.6 ಲೀಟರ್ ಎಂಜಿನ್ ಲೀಟರ್ ಗೆ 22.32 ಕಿ.ಮೀ. ಮೈಲೇಜ್ ನೀಡುತ್ತದೆ.

ಇವೆರಡು ಎಂಜಿನ್ ಗಳು ಅನನ್ಯ ಕ್ಷಮತೆ ನೀಡುತ್ತವೆ. ದೇಶದ ರಸ್ತೆಗೆ ಪೂರಕವಾಗಿರುವ ಇದರ ಸಸ್ಪೆನ್ಸನ್ ಇಷ್ಟವಾಗುತ್ತದೆ. ನೂತನ ವೆರ್ನಾ ಕಾರಿಗೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 7,08,320 ರು.ನಿಂದ 10,88,826 ರು.ವರೆಗಿದೆ.

ಖಂಡಿತಾ ನೂತನ ಹ್ಯುಂಡೈ ವೆರ್ನಾ ಕಾರು ಹ್ಯುಂಡೈ ಮೋಟರ್ ಇಂಡಿಯಾದ ಗುಣಮಟ್ಟ ಮತ್ತು ಹಣದ ಮೌಲ್ಯಕ್ಕೆ ಕೊರತೆಯಾಗದಂತೆ ರೂಪಿಸಲಾಗಿರುವ ಅತ್ಯುತ್ತಮ ಕಾರೆಂಬುದರಲ್ಲಿ ಎರಡು ಮಾತಿಲ್ಲ. 2011ರ ನೂತನ ಹ್ಯುಂಡೈ ವೆರ್ನಾ ಇಷ್ಟಪಡಲು ಸದ್ಯ ಇಷ್ಟು ಕಾರಣಗಳು ಸಾಕು. ದೀಪಾವಳಿಗೆ ಇದಕ್ಕಿಂತ ಇನ್ನೇನು ಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+