ಬಿಂಕದ ಗೆಳತಿಗೆ ಮೈಕ್ರೋಮ್ಯಾಕ್ಸ್ ಬ್ಲಿಂಗ್ ಗಿಫ್ಟ್

Micromax Bling 2
ಜಮಾನಾ ಬದಲಾಗಿದೆ. ಹಬ್ಬದ ಸಂದರ್ಭದಲ್ಲಿ ಅಕ್ಕ ತಂಗಿ, ಗೆಳತಿ ಅಥವಾ ಪ್ರಿಯತಮೆ ಅಂತಾನೇ ಇಟ್ಕೊಳ್ಳಿ, ಅವರ ಮುದುಡಿದ ಮುಖತಾವರೆ ಅರಳಬೇಕಿದ್ದರೆ ಕಾಲಕ್ಕೆ ತಕ್ಕಂತೆ ಅವರಿಗಿಷ್ಟವಾಗುವ ಉಡುಗೊರೆಗಳನ್ನೇ ನೀಡಬೇಕು. ಮೇಕಪ್ ಸೆಟ್ಟು, ರಿಬ್ಬನ್ನು, ಪೆನ್ನು, ವಾಚು, ಚೂಡಿದಾರದಂಥ ಬಟ್ಟೆಬರೆಗಳನ್ನು ನೀಡುವ ಕಾಲ ಇದಲ್ಲವೇ ಅಲ್ಲ.

ಮನೆಯ ಹೆಣ್ಣುಮಕ್ಕಳು ಸಂತಸದಿದ್ದರೇನೇ ಹಬ್ಬಕ್ಕೊಂದು ಕಳೆ. ಅವರನ್ನು ಖುಷಿಯಾಗಿಡಬೇಕೆಂದರೆ ಕಿಸೆಯಿಂದ ಒಂದಿಷ್ಟು ದುಡ್ಡನ್ನು ತೆಗೆದಿಡಲೇಬೇಕು. ಜೀವನ ದುಬಾರಿಯಾಗಿದ್ದರೇನಂತೆ ಅವರು ಡಿಮ್ಯಾಂಡುಗಳು ಕೂಡ ಅಷ್ಟೇ ದುಬಾರಿಯಾಗಿರುತ್ತವೆ. ಕಾಂಪ್ರೊಮೈಸ್ ಮಾಡಿಕೊಳ್ಳಲೇಬೇಕು. ದೇವರಿಗೆ ಸಲ್ಲಿಸುವ ಅರ್ಚನೆಯ ಚೀಟಿ ಕೂಡ ದುಬಾರಿಯಾಗಿದೆ, ತಿಳಿಯಿರಿ.

ಸೋ, ಏನು ಕೊಳ್ಳುವುದು ಎಂದು ಜಾಸ್ತಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಕ್ಕತಂಗಿ, ಪ್ರಿಯತಮೆಯನ್ನು ಕೇಳುವ ಗೋಜಿಗೂ ಹೋಗಬೇಡಿ, ಕಿಸೆ ಹರಿದೇಹೋದೀತು. ಮಾರುಕಟ್ಟೆಯಲ್ಲಿ ಹೊಸಹೊಸ ಮೊಬೈಲ್ ಮಾಡೆಲ್ ಗಳು ಬಂದಿವೆ. ಸ್ಯಾಮ್ಸಂಗ್ ದಿವಾ ಅಥವಾ ಮೈಕ್ರೋಮ್ಯಾಕ್ಸ್ ಬ್ಲಿಂಗ್ 2 ನೋಡಿದ್ದಿರಾ? ಇವಕ್ಕಿಂತ ಇನ್ನೇನು ಬೇಕು?

ಮೈಕ್ರೋಮ್ಯಾಕ್ಸ್ ಬ್ಲಿಂಗ್ ಕೊಟ್ಟು ನೋಡಿ, ಬ್ಲಿಂಕ್ ಮಾಡದೆ ನೋಡುತ್ತಲೇ ಇರುತ್ತಾಳೆ. ಮೊಬೈಲ್ ಅಂದರೆ ಎಲ್ಲರಿಗೂ ಇಷ್ಟ ಆದರೆ ಕೆಲವೊಂದು ಮೊಬೈಲ್ ಹೆಣ್ಣುಮಕ್ಕಳಿಗೆ ತುಂಬಾನೆ ಇಷ್ಟವಾಗುತ್ತದೆ. ಏನಪ್ಪಾ ಈ ಮೊಬೈಲ್ ನ ವಿಶೇಷತೆಯೆಂದರೆ ಇದು ನೋಡಲು ಅವಳಂತೆಯೇ ಸುಂದರವಾಗಿದೆ, ಅಲ್ಲದೆ ಹೆಣ್ಣು ಮಕ್ಕಳಿಗಾಗಿಯೇ ಈ ಮೊಬೈಲ್ ಹೊರತರಲಾಗಿದೆ.

ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ಗಳು ತಮ್ಮಲ್ಲಿರುವ ವಿಶಿಷ್ಟತೆ, ಭಿನ್ನತೆಗಳಿಂದ ಇಷ್ಟವಾಗುತ್ತವೆ. ಇವುಗಳ ಬೆಲೆ ಕೂಡ ಕೈಗೆಟುಕುವ ದರದಲ್ಲಿರುವುದರಿಂದ ಈ ದೀಪಾವಳಿಗೆ ನಿಮ್ಮ ಗರ್ಲ್ ಫ್ರೆಂಡ್ ಅಥವಾ ತಂಗಿಗೆ ಈ ಮೊಬೈಲ್ ಉಡುಗೊರೆ ಕೊಟ್ಟು ಸಣ್ಣ ಸರ್ಪ್ರೈಸ್ ನೀಡಿ. ದೀಪಾವಳಿಯ ಬೆಳಕು ಮನತುಂಬ ಮಾತ್ರವಲ್ಲ ಮನೆತುಂಬ ಕೂಡ ಝಗಮಗಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+