ಪಂಜಿನ ಕವಾಯತು, ಜಂಬೂಸವಾರಿಗೆ ಟಿಕೆಟ್

ಮೈಸೂರು, ಅ. 7: ವಿಶ್ವವಿಖ್ಯಾತ ಮೈಸೂರು ದಸರಾ 2008ರ ಪ್ರಯುಕ್ತ ಅ.7ರಂದು ನಡೆಯಲಿರುವ ಜಂಬೂ ಸವಾರಿ ವಿಜಯದಶಮಿ ಮೆರವಣಿಗೆ ಮತ್ತು ಪಂಜಿನ ಕವಾಯತು ಈ ಕಾರ್ಯಕ್ರಮಗಳನ್ನು ಸಾರ್ವಜನಿಕರು ವೀಕ್ಷಿಸಲು ಟಿಕೆಟ್‌ಗಳನ್ನು ಮುದ್ರಿಸಿ ಟಿಕೆಟ್‌ಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ.

ವಿವರ ಕೆಳಕಂಡಂತಿದೆ:
ನಂದಿಧ್ವಜ ಪೂಜೆ ಮತ್ತು ವಿಜಯದಶಮಿ ಮೆರವಣಿಗೆ ಕಾರ್ಯಕ್ರಮಕ್ಕೆ (ಅರಮನೆ ಒಳಾಂಗಣ) ಟಿಕೆಟ್ ದರ ರು.1,000/ ಮತ್ತು ರು.500/-
ಪಂಜಿನ ಕವಾಯತು (ಟಾರ್ಚ್‌ಲೈಟ್ ಪೆರೆಡ್) ಕಾರ್ಯಕ್ರಮ, ಬನ್ನಿಮಂಟಪ ಮೈದಾನ ಟಿಕೆಟ್ ದರ ರು.500/- ಮತ್ತು ರು.1,00/ ಟಿಕೆಟ್‌ಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದೊರೆಯಲಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

ಜಂಬೂಸವಾರಿ, ಪಂಜಿನ ಕವಾಯತು ಉದ್ಘಾಟನೆ:
ಜಂಬೂಸವಾರಿ ಮೆರವಣಿಗೆಯು ಅ.9ರಂದು ಮಧ್ಯಾಹ್ನ 12.30 ಗಂಟೆಗೆ ಅರಮನೆ ಮುಂಭಾಗ ನಂದೀಧ್ವಜ ಪೂಜೆಯೊಡನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ಘಾಟಿಸುವರು. ನಂತರ ಮುಖ್ಯಮಂತ್ರಿಗಳು ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ಬರುವ ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪ ಸಮರ್ಪಣೆ ಮೂಲಕ ಮೆರವಣಿಗೆಗೆ ಚಾಲನೆ ನೀಡುವರು.

ಸಂಜೆ 6.30 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯದ ರಾಜ್ಯಪಾಲ ಶ್ರೀ ರಾಮೇಶ್ವರ ಠಾಕೂರ್ ಅವರು ಕವಾಯತು ವೀಕ್ಷಿಸಿ, ವಂದನೆ ಸ್ವೀಕರಿಸುವರು. ಬಿ ಎಸ್ ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸುದ್ದಿ: ವಾರ್ತಾ ಇಲಾಖೆ

ಪೂರಕ ಓದಿಗೆ:
ಗ್ಯಾಲರಿ : ಮೈಸೂರಲ್ಲಿ ಜನಪದ ಜಾತ್ರೆ
ಶಾಯರಿ, ಶತಾವಧಾನಕ್ಕೂ ಕವಿಗೋಷ್ಠಿಯಲ್ಲಿ ಸ್ಥಾನ
ಧ್ವನಿ ಮತ್ತು ಬೆಳಕಿನಲ್ಲಿ ಕರ್ನಾಟಕ ಗತವೈಭತ
ಕವಿಗೋಷ್ಠಿ ಸಮಾರೋಪಕ್ಕೆ ರಾಷ್ಟ್ರಕವಿಗಳ ಉಪಸ್ಥಿತಿ
ದಸರಾದಲ್ಲಿ ಕನ್ನಡ ಚಿತ್ರರಂಗಕ್ಕೆ 'ಅಮೃತ ಸಿಂಚನ'
ದಸರಾ ಅರಳು ಕವಿಗೋಷ್ಠಿ ಕಾವ್ಯ ಸುಧೆ
ನಾದಲೋಕದಲ್ಲಿ ಮಿಂದೆದ್ದ ಮೈಸೂರು ಜನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+