ಜಿಮ್ ಉಪಕರಣಗಳಿಗಾಗಿ ಪರಸ್ಪರ ಕಪಾಳಮೋಕ್ಷ ಮಾಡುಕೊಂಡ ಮಹಿಳೆಯರು: ವಿಡಿಯೋ ನೋಡಿ
ಸಾಮಾಜಿಕ ಜಾಲತಾಣದಲ್ಲಿ ಜಿಮ್‌ನಲ್ಲಿ ಮಹಿಳೆಯರಿಬ್ಬರು ಬಡಿದಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಜಿಮ್‌ನಲ್ಲಿ ಕಸರತ್ತು ಮಾಡಿ ದಣಿದಿದ್ದ ಇಬ್ಬರು ಮಹಿಳೆಯರು ಕೂದಲಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಜಿಮ್‌ನಲ್ಲಿ ಸ್ಮಿತ್ ಮೆಷಿನ್‌ಗಾಗಿ ಕಾಯುತ್ತಿದ್ದ ಇಬ್ಬರು ಮಹಿಳೆಯರು ಸ್ಮಿತ್ ಮೆಷಿನ್ ಖಾಲಿಯಾಗುತ್ತಿದ್ದಂತೆ ಒಟ್ಟಿಗೆ ತಮಗೆ ಬೇಕೆಂದು ತಳ್ಳಾಡಿದ್ದಾರೆ.
ಬಹರ್ ಕೆ ಕಾಲೇಶ್ ಎಂಬ ಪುಟದಿಂದ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ಮಹಿಳೆಯೊಬ್ಬರು ಜಿಮ್‌ನಲ್ಲಿ ಸ್ಮಿತ್ ಮೆಷಿನ್ ವ್ಯಾಯಾಮ ಪೂರ್ಣಗೊಳಿಸಲು ಕಾಯುತ್ತಿರುವುದನ್ನು ಕಾಣಬಹುದು. ಈಗಾಗಲೇ ಸ್ಮಿತ್ ಮಷಿನ್ ಬಳಕೆ ಮಾಡುತ್ತಿರುತ್ತಾಳೆ. ಆಕೆ ಮುಗಿಸಿದ ತಕ್ಷಣ, ಮಹಿಳೆ ಯಂತ್ರವನ್ನು ಬಳಸಲು ಮುಂದಾಗುತ್ತಾರೆ. ಆದರೆ, ಮೂರನೇ ಮಹಿಳೆ ಇದ್ದಕ್ಕಿದ್ದಂತೆ ಘಟನಾ ಸ್ಥಳಕ್ಕೆ ಪ್ರವೇಶಿಸಿ ಜಗಳವನ್ನು ತಡೆಯಲು ಪ್ರಯತ್ನಿಸುತ್ತಾರೆ. ಇಬ್ಬರು ಮಹಿಳೆಯರು ಒಬ್ಬರನ್ನೊಬ್ಬರು ಕಪಾಳಮೋಕ್ಷ ಮಾಡಲು ಮತ್ತು ತಳ್ಳಲು ಪ್ರಾರಂಭಿಸಿದರು ಮತ್ತು ಪರಸ್ಪರರ ಕೂದಲನ್ನು ಎಳೆದಾಡಿದ್ದಾರೆ.
ವೈರಲ್ ವಿಡಿಯೊವನ್ನು ಇಲ್ಲಿ ನೋಡಿ:
Kalesh Inside GYM for Smith Machine pic.twitter.com/KXy6v9UyWj
— r/Bahar Ke Kalesh (@Baharkekalesh) October 9, 2022
ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೊವನ್ನು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಕ್ಲಿಪ್ ಸ್ವಾಭಾವಿಕವಾಗಿ ನೆಟಿಜನ್‌ಗಳಿಂದ ಹೆಚ್ಚಿನ ಪ್ರತಿಕ್ರಿಯೆಗಳನ್ನು ಪಡೆದಿದೆ.

ನೆಟ್ಟಿಗರು ಹಲವಾರು ರೀತಿ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. 'ಬೇರೆ ಏನಾದರೂ ಬಳಕೆ ಮಾಡಿ' ಎಂದು ನೆಟ್ಟಿಗರು ಒಬ್ಬರು ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರ, "ಇಷ್ಟೇನಾ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಇಷ್ಟು ಸಾಕು ನೀವು ಜಿಮ್‌ಗೆ ಹೋಗುವವರು ಎನ್ನುವುದಕ್ಕೆ' ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಇಂಥದ್ದೇ ಘಟನೆ
ಮುಂಬೈನಲ್ಲಿ ಚಲಿಸುತ್ತಿರುವ ಎಲೆಕ್ಟ್ರಿಕ್ ರೈಲಿನಲ್ಲಿ ಮಹಿಳೆಯರು ಸೀಟಿಗಾಗಿ ಜಗಳವಾಡುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಮುಂಬೈ ಮತ್ತು ಚೆನ್ನೈನಂತಹ ನಗರಗಳಿಗೆ ಉಪನಗರ ರೈಲುಗಳು ನಗರವಾಸಿಗಳಿಗೆ ವರದಾನವಾಗಿದೆ. ದಿನನಿತ್ಯದ ನೂರಾರು ಪ್ರಯಾಣಿಕರು, ಶಾಲಾ ಕಾಲೇಜುಗಳ ಪ್ರಯಾಣಿಕರು ವಿದ್ಯುತ್ ರೈಲು ಪ್ರಯಾಣವನ್ನು ಮಾಡುತ್ತಾರೆ.
Fight between two female passengers over a seat in #Local #TRAIN .
— Siraj Noorani (@sirajnoorani) October 6, 2022
The woman police constable who went to the rescue got hurt.
Both women filed a case against each other at Vashi Railway Police Station.@Central_Railway #Mumbai pic.twitter.com/nFOKv7bOWv
ನಿರ್ದಿಷ್ಟ ಸಮಯಕ್ಕೆ ತಲುಪುವ ಕಾರಣದಿಂದಾಗಿ ಪ್ರಯಾಣಿಕರು ವಿದ್ಯುತ್ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಈ ಕಾರಣದಿಂದಾಗಿ, ಪೀಕ್ ಅವರ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಯಂತ್ರಿಸಲಾಗುವುದಿಲ್ಲ. ಅದರಲ್ಲೂ ಮುಂಬೈ ಬಗ್ಗೆ ಹೇಳಬೇಕಾಗಿಲ್ಲ. ಪ್ರಯಾಣಿಕರು ಸಮುದ್ರದಂತೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಸೇರುತ್ತಾರೆ. ರೈಲು ಒಂದು ನಿಮಿಷ ತಡವಾದರೂ ಸಾಕಷ್ಟು ಜನಸಂದಣಿ ಸೇರಿಬಿಡುತ್ತದೆ. ಈ ನಡುವೆ ಮುಂಬೈ ಸ್ಥಳೀಯ ರೈಲು ಸೀಟಿಗಾಗಿ ಪ್ರಯಾಣಿಕ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ. ಅದು ಮಟ್ಟಿಗೆ ಅಂದರೆ ರಕ್ತಸ್ರಾವ ಆಗುಷ್ಟು ಅವರ ಹೊಡೆದಾಟ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.












Click it and Unblock the Notifications