ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಆನೆಯ ಪ್ರತಿಮೆಯ ಕಾಲುಗಳ ನಡುವೆ ಸಿಲುಕಿದ ಭಕ್ತ

|
Google Oneindia Kannada News

ದೇವರ ಆಶೀರ್ವಾದ ಪಡೆಯಲು ಜನರು ಆಗಾಗ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಕೆಲವೊಮ್ಮೆ ಜನರು ದೇವರನ್ನು ಮೆಚ್ಚಿಸಲು ಸವಾಲಿನ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಾರೆ. ಇಂಥಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಆನೆಯ ಪ್ರತಿಮೆಯ ಕಾಲುಗಳ ಮಧ್ಯದಿಂದ ತೆವಳುವ ಮೂಲಕ ಹೊರಬರಲು ಪ್ರಯತ್ನಿಸಿದ್ದಾನೆ. ಈ ವೇಳೆ ವ್ಯಕ್ತಿ ಹೊರಬರಲು ಆಗದೆ ಆನೆ ಪ್ರತಿಮೆಯ ಕಾಲುಗಳ ನಡುವೆ ಸಿಲುಕಿಕೊಂಡಿದ್ದಾನೆ.

ನಿತಿನ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ಗುಜರಾತ್‌ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರತಿಮೆಯೊಳಗೆ ಸಿಲುಕಿಕೊಂಡಾಗ ವ್ಯಕ್ತಿ ಅದೆಷ್ಟೇ ಪ್ರಯತ್ನ ಪಟ್ಟರು ಹೊರಬರಲು ಸಾಧ್ಯವಾಗಿಲ್ಲ. ವಿಡಿಯೋದಲ್ಲಿ ರಚನೆಯಿಂದ ಹೊರಬರಲು ಮನುಷ್ಯ ತನ್ನ ಕೈ ಮತ್ತು ದೇಹವನ್ನು ಬಳಸುತ್ತಿರುವುದನ್ನು ಗಮನಿಸಬಹುದು. ಪುರೋಹಿತರು ಸಹ ವ್ಯಕ್ತಿಗೆ ಪ್ರತಿಮೆಯಿಂದ ಹೊರಬರಲು ಸಹಾಯ ಮಾಡುತ್ತಾರೆ. ಅನೇಕ ಸಂದರ್ಶಕರು ಭಕ್ತನಿಗೆ ಸಲಹೆಗಳನ್ನು ನೀಡುವುದನ್ನು ಕಾಣಬಹುದು. ಜನ ಸಹಾಯ ಹಸ್ತವನ್ನು ನೀಡಿದರೂ ಭಕ್ತ ಪ್ರತಿಮೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ವಿಡಿಯೋದ ಕೊನೆಯವರಿಗೂ ವ್ಯಕ್ತಿ ಸಿಲುಕಿಕೊಂಡೇ ಇರುತ್ತಾನೆ. ವ್ಯಕ್ತಿ ಪ್ರತಿಮೆಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾನೆಯೇ ಎಂಬುದು ವಿಡಿಯೊದಲ್ಲಿ ಸ್ಪಷ್ಟವಾಗಿಲ್ಲ. ವಿಡಿಯೋ ಹಂಚಿಕೊಂಡ ನಂತರ 40,000 ವೀಕ್ಷಣೆಗಳನ್ನು ಸಂಗ್ರಹಿಸಿದೆ.

Video: Devotee trapped between legs of elephant statue

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ಈ ಹಿಂದೆ ಇಂತಹುದೇ ಒಂದು ಘಟನೆ ನಡೆದಿತ್ತು. ಆಚರಣೆಯ ಭಾಗವಾಗಿ ಸಣ್ಣ ಆನೆಯ ಪ್ರತಿಮೆಯ ಕಾಲುಗಳ ನಡುವೆ ತೆವಳುತ್ತಿದ್ದಾಗ ಮಹಿಳಾ ಭಕ್ತೆಯೊಬ್ಬಳು 2019 ರಲ್ಲಿ ಸಿಲುಕಿಕೊಂಡಿದ್ದಳು. ಅವಳು ಪ್ರತಿಮೆಯಿಂದ ಹೊರಬರಲು ಪ್ರಯತ್ನಿಸಿದಳು. ಆದರೆ ಆಕೆ ಹೊರಬರಲು ಆಗಲಿಲ್ಲ. ಜನರು ಅವಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಹಳೆಯ ವಿಡಿಯೊದ ಪ್ರಕಾರ, ಸ್ವಲ್ಪ ಸಮಯದ ಯುದ್ಧದ ನಂತರ ಅವಳು ಗಾಯಗೊಳ್ಳದೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು. ಆಕೆಯ ಪ್ರಯತ್ನಗಳಿಗೆ ಚಪ್ಪಾಳೆ ತಟ್ಟಿ ಭಕ್ತರು ಹುರಿದುಂಬಿಸಿದರು.

English summary
A devotee got trapped between the legs of an elephant statue in a temple in Gujarat. This video has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X