ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ದಾಖಲೆ ಬರೆದ ಟಾಪ್ ಸುದ್ದಿಗಳ ಗುಚ್ಛ
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಸೆಪ್ಟೆಂಬರ್ 2019 ತಿಂಗಳಿನಲ್ಲಿ ಅತಿ ಹೆಚ್ಚು ಓದಲ್ಪಟ್ಟ, ಚರ್ಚಿಸಲ್ಪಟ್ಟ ಸುದ್ದಿಗಳ ಸಂಚಯದಿಂದಾಗಿ ವೆಬ್ ಪುಟ ವೀಕ್ಷಣೆಯಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಡಿಜಿಟಲ್ ಮಾಧ್ಯಮದಲ್ಲಿ ಒಂದು ತಿಂಗಳ ಅವಧಿಯಲ್ಲಿ ಒಂದೇ ವೆಬ್ ಪೋರ್ಟಲ್ ನ ನಾಲ್ಕು ಸಹ ವೆಬ್ ತಾಣಗಳ ಒಟ್ಟು ಪೇಜ್ ವ್ಯೂ ಪ್ರಮಾಣ 100 ಮಿಲಿಯನ್ ದಾಟಿದ ಉದಾಹರಣೆ ಬಹುಶಃ ಸಿಗಲಿಕ್ಕಿಲ್ಲ.
ಕರ್ನಾಟಕ ಜಿಲ್ಲಾಸುದ್ದಿ, ಕ್ರೀಡೆ, ಉದ್ಯೋಗ, ವಾಣಿಜ್ಯ, ಜ್ಯೋತಿಷ್ಯ, ರಾಜಕೀಯ ಸೇರಿದಂತೆ ದೇಶ -ವಿದೇಶದ ಸುದ್ದಿಗಳನ್ನು ನಿರಂತರವಾಗಿ ಅಪ್ಡೇಟ್ ನೀಡುತ್ತಾ ಬಂದಿರುವ ಒನ್ಇಂಡಿಯಾ ತಾಣದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ, ಓದುಗರಿಂದ ಹೆಚ್ಚು ಕಾಮೆಂಟ್ ಪಡೆದ ಪೋಸ್ಟ್ ಗಳ ಪೈಕಿ ವೈವಿಧ್ಯಮಯ ಸುದ್ದಿಗಳ ಜತೆ ಸಾರ್ವಜನಿಕರ ಟೀಕೆ ಟಿಪ್ಪಣಿಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗಿದೆ. ತೀರಾ ಕೆಟ್ಟ ಭಾಷೆ ಬಳಕೆ ಕಾಮೆಂಟ್ ಗಳನ್ನು ಅರಗಿಸಿಕೊಂಡು, ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಎಂದಿನಂತೆ ನಮ್ಮನ್ನು ತಿದ್ದಿ ತೀಡುತ್ತಿರುವ ಓದುಗ ಮಹಾ ಪ್ರಭುಗಳಿಗೆ ನಮ್ಮ ತಂಡ ಆಭಾರಿಯಾಗಿದೆ.
ವೆಬ್ ತಾಣದ ಇಂದಿನ ಸಾಧನೆ ಹಿಂದೆ ಅಂದಿನ ಸಂಪಾದಕರು, ಇಂದಿನ ಸಂಪಾದಕರು ಸೇರಿದಂತೆ ಸಮಸ್ತ ಸುದ್ದಿ ಸಂಪಾದಕ ವಿಭಾಗದ ಪರಿಶ್ರಮವಿದೆ. ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. ಮೊಬೈಲ್ ಫೋನಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ವಿಹರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ವಿಡಿಯೋ ನೋಡಬಹುದು.

ಒನ್ಇಂಡಿಯಾದ ಎಂಬ ಭಾಷಾ ವೈವಿಧ್ಯತಾಣ
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ). ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಗೂ ಮುನ್ನ ಸ್ಥಾಪನೆಯಾದ ಒನ್ಇಂಡಿಯಾ ಎಂಬ ಭಾಷಾ ವೈವಿಧ್ಯತಾಣದಲ್ಲಿ ಮೊದಮೊದಲಿಗೆ ಆರಂಭವಾದ ಒನ್ಇಂಡಿಯಾ ಕನ್ನಡ ತಾಣವು ಕನ್ನಡ ತಂತ್ರಜ್ಞಾನ ಬದಲಾವಣೆಗೆ ತಕ್ಕಂತೆ ರೂಪಿಸಿಕೊಂಡು ವೆಬ್ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಚ. ಮಂಜುನಾಥ್ ಬರೆದ ಸುದ್ದಿ, ಲೇಖನಗಳು
* Smule ಅಪ್ಲಿಕೇಷನ್ ನಿಂದ ಆರಂಭವಾದ ಸ್ನೇಹ, ಹಾಸನದ ಗೆಳೆಯ ಹಾಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಚಿಕ್ಕಬಳ್ಳಾಪುರದ ಗೃಹಿಣಿಯ ಕಥೆ ಓದುಗರನ್ನು ಕಾಡಿತ್ತು.
* ಮಂಗಳೂರಲ್ಲಿ ಮನೆಯಲ್ಲಿದ್ದವನನ್ನೇ ಹುಡುಕಿ ಬಂತು ಕೋಟಿ-ಕೋಟಿ ಸಂಪತ್ತು..ಮುಂದೆ ಓದಿ* ಒಂದೇ ರಾತ್ರಿಯಲ್ಲಿ ಕೋಟ್ಯಧಿಪತಿಗಳಾದ ಕೇರಳದ ಆರು ಸೇಲ್ಸ್‌ಮನ್‌ಗಳು ಹೇಗೆ? ಯಾವ ಲಾಟರಿ ಹೊಡೆಯಿತು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ* ಹೆದ್ದಾರಿ ಟೋಲ್‌ಗಳ ಬೃಹತ್ ಭ್ರಷ್ಟಾಚಾರ ತೆರೆದಿಟ್ಟ ವಕೀಲರ ವಿಡಿಯೋ ವೈರಲ್ ಆಗಿತ್ತು..[ಸುದ್ದಿ ಇಲ್ಲಿದೆ]
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಉಪಸಂಪಾದಕ. ಚಲನಚಿತ್ರ ವೀಕ್ಷಣೆ, ಸಾಹಿತ್ಯ ಮತ್ತು ಕ್ರೀಡೆ ನನ್ನ ಮೆಚ್ಚಿನ ಹವ್ಯಾಸಗಳು.

ಅಮಿತ್ ಮೃಗವಧೆ
* ಇಸ್ರೋ ಸಿಬ್ಬಂದಿಗೆ ಮತ್ತೊಂದು ಆಘಾತ ನೀಡಿದ ಕೇಂದ್ರ ಸರ್ಕಾರ
ಒನ್ಇಂಡಿಯಾ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ/ವರದಿಗಾರ. ಸಾಹಿತ್ಯ, ಸಿನಿಮಾ, ಕ್ರಿಕೆಟ್, ಬರವಣಿಗೆ, ಪ್ರವಾಸ ಹವ್ಯಾಸದ ಪ್ರಮುಖ ಭಾಗಗಳು.

ತೃಪ್ತಿ ಹೆಗಡೆ
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಉಪಸಂಪಾದಕಿ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹುಟ್ಟೂರು. ಬರವಣಿಗೆ, ಓದು, ಕನ್ನಡ ಸಾಹಿತ್ಯ, ಫೋಟೋಗ್ರಫಿ, ಪ್ರವಾಸ, ಚಿತ್ರ ಬರೆಯುವುದು ನನ್ನ ಹವ್ಯಾಸ. ಬ್ಯಾಡ್ಮಿಂಟನ್, ಚೆಸ್ ಕ್ರೀಡೆಗಳಲ್ಲಿ ಆಸಕ್ತಿ.

ಬಾಲರಾಜ್ ತಂತ್ರಿ
ಒನ್ ಇಂಡಿಯಾ ಸಂಸ್ಥೆಯ ಎಡ್ಮಿನ್ ಮುಖ್ಯಸ್ಥ. ಸ್ವಂತ ಊರು ಕರಾವಳಿ ಜಿಲ್ಲೆ ಉಡುಪಿ. ರಾಜಕೀಯ ಸಂಬಂಧ ಲೇಖನ ಬರೆಯುವುದೆಂದರೆ ತುಸು ಇಷ್ಟ ಜಾಸ್ತಿ. ಹಳೆಯ ಕನ್ನಡ ಹಾಡು ಕೇಳುವುದು, ಪ್ರವಾಸ ನನ್ನ ಹವ್ಯಾಸ ಮತ್ತು ಆಸಕ್ತಿ.

ಗುರುರಾಜ್ ಕುಂಟವಳ್ಳಿ ಬರೆದ ಸುದ್ದಿ, ಲೇಖನಗಳು
ಒನ್ ಇಂಡಿಯಾ ಸಂಸ್ಥೆಯ ಎಡ್ಮಿನ್ ಮುಖ್ಯಸ್ಥ. ಸ್ವಂತ ಊರು ಕರಾವಳಿ ಜಿಲ್ಲೆ ಉಡುಪಿ. ರಾಜಕೀಯ ಸಂಬಂಧ ಲೇಖನ ಬರೆಯುವುದೆಂದರೆ ತುಸು ಇಷ್ಟ ಜಾಸ್ತಿ. ಹಳೆಯ ಕನ್ನಡ ಹಾಡು ಕೇಳುವುದು, ಪ್ರವಾಸ ನನ್ನ ಹವ್ಯಾಸ ಮತ್ತು ಆಸಕ್ತಿ.

ನಯನಾ ಬಿ.ಜೆ ಬರೆದ ಸುದ್ದಿ, ಲೇಖನಗಳು
ಒನ್ಇಂಡಿಯಾ ಕನ್ನಡ ವಿಭಾಗದಲ್ಲಿ ವರದಿಗಾರ್ತಿ ಹಾಗೂ ಉಪ ಸಂಪಾದಕಿಯಾಗಿ ಕೆಲಸ ನಿರ್ವಹಣೆ. ನಾಲ್ಕು ವರ್ಷ ವರದಿಗಾರ್ತಿಯಾಗಿ ವೃತ್ತಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ. ಹಿಂದಿ ಸಾಹಿತ್ಯ, ಹಾಡುಗಾರಿಕೆ ಮತ್ತು ಚಾರಣ ನನ್ನ ಆಸಕ್ತಿ ವಿಷಯಗಳು.

ಶ್ರೀನಿವಾಸ ಮಠ ಬರೆದ ಸುದ್ದಿ, ಲೇಖನಗಳು
ಒನ್ಇಂಡಿಯಾ ಕನ್ನಡದಲ್ಲಿ ಹಿರಿಯ ಉಪಸಂಪಾದಕ. ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಕೆಎಸ್ ಒಯುನಿಂದ ಎಂ.ಕಾಂ., ಭಾರತೀಯ ವಿದ್ಯಾಭವನದಲ್ಲಿ ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ಮಾಡಿದ್ದೇನೆ. ಪತ್ರಿಕೋದ್ಯಮಕ್ಕೆ ಬಂದು ಹತ್ತು ವರ್ಷ ಕಳೆದಿದೆ. ಮಾನವೀಯ ಸಂವೇದಿ ಸುದ್ದಿ, ಜ್ಯೋತಿಷ್ಯ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿ ನನ್ನ ಆದ್ಯತೆ.

ಸುಮಲತಾ ಬರೆದ ಸುದ್ದಿ, ಲೇಖನಗಳು

ಮಹೇಶ್ ಮಲ್ನಾಡ್ ಬರೆದ ಸುದ್ದಿ, ಲೇಖನಗಳು
ಒನ್ಇಂಡಿಯಾ ವೆಬ್ ತಾಣದ ಕನ್ನಡ ವಿಭಾಗದಲ್ಲಿ ಸುದ್ದಿ ಸಂಪಾದಕ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಾಫಿ ಮತ್ತು ಚಾರಣ ನನ್ನ ಆಸಕ್ತಿ ವಿಷಯಗಳು.












Click it and Unblock the Notifications