ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣ ಹುಚ್ಚಿಗೆ ಗೃಹಿಣಿ ಬಲಿ

Recommended Video

      ಸಾಮಾಜಿಕ ಜಾಲತಾಣಕ್ಕಾಗಿ ಪ್ರಾಣ ತ್ಯಜಿಸಿದ ಯುವತಿ | Oneindia Kannada

      ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 28: ಸಾಮಾಜಿಕ ಜಾಲತಾಣದ ಹುಚ್ಚಿಗೆ ಗೃಹಿಣಿಯೊಬ್ಬಳು ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

      ಸ್ಮ್ಯುಯೆಲ್‌ ಆಪ್‌ ಬಳಸಿ ಹಾಡು ಹಾಡುತ್ತಿದ್ದ ಶಿಲ್ಪಾ ಎಂಬುವರು, ತನ್ನ ಜೊತೆ ಆಪ್‌ನಲ್ಲಿ ಹಾಡು ಹಾಡುತ್ತಿದ್ದ ಯುವಕ ಹಾಡಲು ಸ್ಪಂದಿಸಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

      ಗೃಹಿಣಿ ಶಿಲ್ಪಾ ನಗರದ 16ನೇ ವಾರ್ಡಿನ ಗರ್ಲ್ಸ್ ಸ್ಕೂಲ್ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಶಿಲ್ಪಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

      ದೇವರಾಜ್ ಎಂಬುವನ ಜೊತೆ ಸ್ಮ್ಯುಯೆಲ್‌ ಆಪ್‌ನಲ್ಲಿ ಹಾಡುತ್ತಿದ್ದರು

      ದೇವರಾಜ್ ಎಂಬುವನ ಜೊತೆ ಸ್ಮ್ಯುಯೆಲ್‌ ಆಪ್‌ನಲ್ಲಿ ಹಾಡುತ್ತಿದ್ದರು

      ಗೃಹಿಣಿ ಶಿಲ್ಪಾ ಗೆ ಸ್ಮ್ಯುಯೆಲ್‌ ಆಪ್‌ನಲ್ಲಿ ಹಾಡುವ ಹುಚ್ಚು ಹತ್ತಿತ್ತು. ಆಕೆ ಹಾಸನದ ದೇವರಾಜ್ ಎಂಬಾತನ ಜೊತೆಗೆ ಯುಗಳ ಗೀತೆಗಳನ್ನು ಹಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು. ಕೆಲವು ತಿಂಗಳಿಂದ ಶಿಲ್ಪಾ ಮತ್ತು ದೇವರಾಜ್ ಹೀಗೆ ಆಪ್‌ನಲ್ಲಿ ಯುಗಳ ಗೀತೆಗಳನ್ನು ಹಾಡುತ್ತಿದ್ದರು.

      ಹಾಡು ಹಾಡುವ ಮನವಿಗೆ ದೇವರಾಜ್ ಸ್ಪಂದಿಸಿಲ್ಲ

      ಹಾಡು ಹಾಡುವ ಮನವಿಗೆ ದೇವರಾಜ್ ಸ್ಪಂದಿಸಿಲ್ಲ

      ಆದರೆ ತನ್ನ ಜೊತೆ ಆಪ್‌ನಲ್ಲಿ ಹಾಡು ಹಾಡುತ್ತಿದ್ದ ದೇವರಾಜ್ ಹಾಡು ಹಾಡಲು ಸ್ಪಂದಿಸಲಿಲ್ಲವೆಂದು ಶಿಲ್ಪಾ ಇಂದು ತನ್ನ ನಿವಾಸದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

      ಸಾಯುವುದಾಗಿ ದೇವರಾಜ್‌ಗೆ ಮೆಸೆಜ್ ಮಾಡಿದ್ದ ಶಿಲ್ಪಾ

      ಸಾಯುವುದಾಗಿ ದೇವರಾಜ್‌ಗೆ ಮೆಸೆಜ್ ಮಾಡಿದ್ದ ಶಿಲ್ಪಾ

      ಶುಕ್ರವಾರ ತಡರಾತ್ರಿ ಶಿಲ್ಪಾ, ಯುವಕನಿಗೆ ಫೇಸ್‍ಬುಕ್ ಮೆಸೆಂಜರ್ ಮೂಲಕ ಕರೆ ಮಾಡಿದ್ದಾಗ ಆತ ಕರೆ ಸ್ವೀಕರಿಸಿಲ್ಲ. ಕೊನೆಗೆ 'ನನ್ನನ್ನು ನೀನು ದೂರ ಮಾಡುತ್ತಿದ್ದೀಯಾ' ಎಂದು ಮೆಸೇಜ್ ಮಾಡಿದ್ದಾಳೆ. ಹೀಗೆ ಇಬ್ಬರ ನಡುವೆ ಚಾಟಿಂಗ್ ಮುಂದುವರಿದಿದೆ. ಚಾಟಿಂಗ್ ಮಾಡುತ್ತಿದ್ದಾಗಲೇ ಶಿಲ್ಪಾ ಸಾಯುವುದಾಗಿ ಹೇಳಿ, ಯುವಕನಿಗೆ ನೇಣು ಕುಣಿಕೆಯ ಫೋಟೋವೊಂದನ್ನು ಕಳುಹಿಸಿದ್ದಾಳೆ. ಫೋಟೋ ಕಳುಹಿಸಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

      ಬಂಗಾರಪೇಟೆಗೆ ಹೋಗಿದ್ದ ಪತಿ

      ಬಂಗಾರಪೇಟೆಗೆ ಹೋಗಿದ್ದ ಪತಿ

      ಶಿಲ್ಪಾ ಪತಿ ಮಕ್ಕಳನ್ನು ಕರೆದುಕೊಂಡು ಮಹಾಲಾಯ ಅಮಾವಾಸ್ಯೆ ಪ್ರಯುಕ್ತ ಬಂಗಾರಪೇಟೆಗೆ ಹೋಗಿದ್ದರು. ಇಂದು (ಸೆಪ್ಟೆಂಬರ್ 28) ಬೆಳಿಗ್ಗೆ ಪತ್ನಿಗೆ ಕರೆ ಮಾಡಿದಾಗ ಶಿಲ್ಪಾ ಕರೆ ಸ್ವೀಕರಿಸಲಿಲ್ಲ, ಅನುಮಾನಗೊಂಡ ಪತಿ ಮನೆ ಮಾಲೀಕರಿಗೆ ಕರೆ ಮಾಡಿ ಮನೆಯ ಒಳಗೆ ನೋಡಲು ಹೇಳಿದ್ದಾರೆ. ಕಿಟಕಿಯಿಂದ ನೋಡಿದಾಗ ಶಿಲ್ಪಾ ನೇಣು ಬಿಗಿದುಕೊಂಡಿರುವುದು ಪತ್ತೆ ಆಗಿದೆ.

      ಪೊಲೀಸರು ಹೇಳುವುದೇನು?

      ಪೊಲೀಸರು ಹೇಳುವುದೇನು?

      ಈ ಮಾಧ್ಯಮಗಳ ವರದಿ ಕುರಿತು ಎಸ್‌ಪಿ ಕೆ.ಸಂತೋಷ್ ಬಾಬು ಅವರನ್ನು ವಿಚಾರಿಸಿದಾಗ, 'ಶಿಲ್ಪಾ ಅವರ ಕುಟುಂಬದವರು ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ದೂರಿನಡಿ ಪ್ರಕರಣ ದಾಖಲಾಗಿದೆ. ವದಂತಿಯ ಆಯಾಮದಿಂದ ಕೂಡ ತನಿಖೆ ನಡೆಸುತ್ತೇವೆ. ಬಳಿಕವಷ್ಟೇ ಆತ್ಮಹತ್ಯೆಯ ನಿಖರ ಕಾರಣ ಹೇಳಲು ಸಾಧ್ಯ' ಎಂದು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+