ಮಂಗಳೂರಲ್ಲಿ ಮನೆಯಲ್ಲಿದ್ದವನನ್ನೇ ಹುಡುಕಿ ಬಂತು ಕೋಟಿ-ಕೋಟಿ ಸಂಪತ್ತು
Recommended Video
ಮಂಗಳೂರು, ಸೆಪ್ಟೆಂಬರ್ 26: ತನ್ನ ಪಾಡಿಗೆ ತಾನು ಜೀವನ ಸಾಗಿಸುತ್ತಿದ್ದ 76 ವರ್ಷದ ಎಡ್ವಿನ್ ಡಿಸೋಜಾ ಅನ್ನು ಇದ್ದಕ್ಕಿದ್ದಂತೆ 10 ಕೋಟಿ ರೂಪಾಯಿ ಆಸ್ತಿ ಹುಡುಕಿಕೊಂಡು ಬಂದಿದೆ. ಜೇಮ್ಸ್ ಬಾಂಡ್ ಸಿನಿಮಾ ಮಾದರಿ ತಿರುವುಗಳುಳ್ಳ ಈ ನಿಜ ಘಟನೆ ನಡೆದಿರುವುದು ಮಂಗಳೂರಿನಲ್ಲಿ.
ಸಣ್ಣ ಮಟ್ಟದ ವ್ಯವಹಾರ ಮಾಡಿಕೊಂಡು ಇದ್ದ ಮಂಗಳೂರಿನ ನಿವಾಸಿ ಎಡ್ವಿನ್ ಡಿಸೋಜಾಗೆ 2018 ರ ಡಿಸೆಂಬರ್ ತಿಂಗಳಿನಲ್ಲಿ ದೆಹಲಿ ಪೊಲೀಸರಿಂದ ಕರೆಯೊಂದು ಬಂದಿತು. ಆ ಕರೆ ತಂದು ಕೊಟ್ಟಿದ್ದು ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು!
ಭಾರತ ಸರ್ಕಾರಕ್ಕೆ ಸೇರಿದ ರಹಸ್ಯ ದಾಖಲೆಗಳನ್ನು ಲಾಭಕ್ಕಾಗಿ ಮಾರಿದ್ದ ಪ್ರಕರಣದ ಅಪರಾಧಿ ಕೂಮರ್ ನರೇನ್ ಎಂಬಾತನ ಹೆಂಡಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ ದೆಹಲಿ ಪೊಲೀಸರಿಗೆ ಕೂಮರ್ ನರೇನ್‌ನ ಮಲಮಗ ಮಂಗಳೂರಿನ ಎಡ್ವಿನ್ ಡಿಸೋಜಾ ಎಂದು ತಿಳಿದು ಬಂತು. ಕೂಡಲೇ ಎಡ್ವಿನ್ ಡಿಸೋಜಾನ ಮಾಹಿತಿ ಕಲೆ ಹಾಕಿ ಈತನಿಗೆ ಕರೆ ಮಾಡಿದರು ದೆಹಲಿ ಪೊಲೀಸರು.

ತನ್ನ ಮಲತಂದೆಯ ಬಗ್ಗೆ ಏನೂ ತಿಳಿಯದಿದ್ದ ಎಡ್ವಿನ್ ಡಿಸೋಜಾಗೆ ದೆಹಲಿ ಪೊಲೀಸರು ಹೇಳಿದ ಅಪರಾಧದ ಕತೆ ಕೇಳಿ ಗಾಬರಿಯಾಯಿತು. ಅದಕ್ಕಿಂತ ಹೆಚ್ಚು ಆಶ್ಚರ್ಯತಂದಿದ್ದೆಂದರೆ ಮಲತಂದೆ ಹಾಗೂ ತಾಯಿಯ ಬರೋಬ್ಬರಿ 10 ಕೋಟಿ ರೂಪಾಯಿ ಆಸ್ತಿಗೆ ಎಡ್ವಿನ್ ಡಿಸೋಜಾ ಮಾಲೀಕ ಆಗಬಹುದಾದ ವಿಚಾರ.
ಎಡ್ವಿನ್ ಡಿಸೋಜಾನ ಮಲತಂದೆ ಕೂಮರ್ ನರೇನ್ ನಿಧನವಾಗಿದ್ದು, ಎಡ್ವಿನ್‌ನ ತಾಯಿಯೂ ಕಾಲವಾಗಿದ್ದಾರೆ ಅವರ ಹತ್ತುಕೋಟಿ ಬೆಲೆ ಬಾಳುವ ಆಸ್ತಿ ದೆಹಲಿಯಲ್ಲಿದ್ದು, ಅದಕ್ಕೆ ಈಗ ಎಡ್ವಿನ್ ಡಿಸೋಜಾನೆ ಒಡೆಯ. 76ನೇ ವಯಸ್ಸಿನಲ್ಲಿ 10 ಕೋಟಿ ಆಸ್ತಿ ಎಡ್ವಿನ್ ಅನ್ನು ಹುಡುಕಿಕೊಂಡು ಬಂದಿದೆ.

ಮಂಗಳೂರು ಬಿಟ್ಟು ಮುಂಬೈಗೆ ತೆರಳಿದರು ಗೆರ್ಟಿ ವಾಲ್ಡರ್
ಎಡ್ವಿನ್ ಡಿಸೋಜಾ ಅವರ ತಾಯಿಯ ಹೆಸರು ಗೆರ್ಟಿ ವಾಲ್ಡರ್, ಆಕೆಯ ಮೊದಲ ಗಂಡ ಗಿಲ್ಬರ್ಟ್ ಈ ಇಬ್ಬರ ಮಗನೇ ಎಡ್ವಿನ್ ಡಿಸೋಜಾ. ಮಗ ಹುಟ್ಟಿದ ಕೆಲ ವರ್ಷದ ನಂತರ ಗೆರ್ಟಿ ವಾಲ್ಡರ್ ಮಂಗಳೂರು ತ್ಯಜಿಸಿ ಮುಂಬೈಗೆ ತೆರಳಿದ್ದರು, ಈ ಸಮಯದಲ್ಲಿ ಮಗ ಎಡ್ವಿನ್‌ನನ್ನು ತನ್ನ ತಾಯಿ ಜೂಲಿಯನಾ ವಾಲ್ಡರ್ ಬಳಿ ಬಿಟ್ಟು ಹೋಗಿದ್ದರು.

ಮುಂಬೈನಲ್ಲಿ ಕೂಮರ್ ಜೊತೆ ವಿವಾಹ
ಮುಂಬೈಗೆ ತೆರಳಿದ್ದ ಎಡ್ವಿನ್ ತಾಯಿ ಗೆರ್ಟಿ ವಾಲ್ಡರ್, ಅಲ್ಲಿ ಕೂಮರ್ ನರೇನ್ ಅನ್ನು ವಿವಾಹವಾಗಿ ದೆಹಲಿಗೆ ವಾಸ್ತವ್ಯ ಬದಲಾಯಿಸಿದರು. ತನ್ನ ತಾಯಿ ಬೇರೆ ವಿವಾಹವಾದ ವಿಷಯ ಎಡ್ವಿನ್‌ಗೆ ಗೊತ್ತಿತ್ತೇ ವಿನಃ ತನ್ನ ಮಲತಂದೆ ಯಾರೆಂಬುದು ಗೊತ್ತಿರಲಿಲ್ಲ.

ಎಡ್ವಿನ್ ಕೆಲ ಕಾಲ ದೆಹಲಿಯಲ್ಲೂ ಇದ್ದರು
ಎಡ್ವಿನ್‌ಗೆ 15 ವರ್ಷವಿದ್ದಾಗ ಆತ ದೆಹಲಿಗೆ ಹೋಗಿ ತಾಯಿಯೊಂದಿಗೆ ಕೆಲ ಕಾಲ ವಾಸವಿದ್ದ, ಆ ವೇಳೆಗಾಗಲೆ ತಾಯಿ ಗೆರ್ಟಿ ತನ್ನ ಹೆಸರನ್ನು ಗೀತಾ ನರೇನ್ ಎಂದು ಬದಲಾಯಿಸಿಕೊಂಡಿದ್ದರು. ಎಡ್ವಿನ್ ಕೆಲ ಕಾಲ ತಾಯಿಯೊಂದಿಗೆ ಇದ್ದರು ಆದರೆ ಅಲ್ಲಿನ ವಾತಾವರಣ ಸರಿ ಬಾರದೆ ಮತ್ತೆ ಮಂಗಳೂರಿನ ಅಜ್ಜಿಯ ಬಳಿಗೆ ವಾಪಸ್ ಬಂದಿದ್ದರು. ತಾಯಿಯೊಂದಿಗೆ ಇದ್ದಾಗಲೂ ಎಡ್ವಿನ್ ತನ್ನ ಮಲತಂದೆಯನ್ನು ನೋಡಿರಲಿಲ್ಲ.

ಎಡ್ವಿನ್‌ನ ತಂದೆ ಕೂಮರ್ ನರೇನ್ 2000 ರಲ್ಲೇ ನಿಧನ
ಎಡ್ವಿನ್‌ನ ತಂದೆ ಕೂಮರ್ ನರೇನ್ 2000 ಇಸವಿಯಲ್ಲಿಯೇ ತೀರಿಕೊಂಡರು. ಎಡ್ವಿನ್ ತಾಯಿ ಗೆರ್ಟಿ ವಾಲ್ಡರ್ 2002 ರಲ್ಲಿ ದೆಹಲಿಯ ತನ್ನ ನಿವಾಸದಲ್ಲಿ ಹೆಣವಾಗಿ ಪತ್ತೆಯಾದರು. ತಾಯಿಯ ಸಾವಿನ ವಿಷಯ ಎಡ್ವಿನ್‌ಗೆ ಆಗಲೇ ತಿಳಿಯಿತಾದರೂ ತಾಯಿಯೊಂದಿಗೆ ವಿಶೇಷ ಬಂಧ ಇರದ ಕಾರಣ ಆಗ ನೋಡಲು ಹೋಗಿರಲಿಲ್ಲ.

ಗೆರ್ಟಿ ವಾಲ್ಡರ್‌ನದ್ದು ಸಾವು ಸಹಜವೆಲ್ಲ!
ಆದರೆ ಗೆರ್ಟಿ ವಾಲ್ಡರ್‌ನ ಸಾವಿನ ತನಿಖೆ ನಡೆಸಿದ ದೆಹಲಿ ಪೊಲೀಸರಿಗೆ ಅದು ಕೊಲೆಯೆಂದು ಗೊತ್ತಾಗಿದೆ. ಕೊಲೆಯ ಜಾಡು ಹಿಡಿದ ಪೊಲೀಸರು ಕೂಮರ್ ನರೇನ್ ಕಡೆಯಿಂದ ತನಿಖೆ ಆರಂಭಿಸಿ, ಕೂಮರ್‌ನ ಮೂಲ ಸ್ಥಳ ಕೇರಳಕ್ಕೆ ತೆರಳಿ ಅಲ್ಲಿ ಹೆಚ್ಚಿನ ತನಿಖೆ ಸಾಧ್ಯವಾಗದೆ, ಗೆರ್ಟಿ ನರೇನ್ ಕಡೆಯವರ ತನಿಖೆ ಪ್ರಾರಂಭಿಸಿದಾಗ ಎಡ್ವಿನ್ ಬಗ್ಗೆ ಮಾಹಿತಿ ದೊರೆತಿದೆ.

ಧುತ್ತನೆ ಬಂದ ರಾಧಿಕಾ
ಗೆರ್ಟಿ ಸಾವಿಗೆ ಮುಂಚೆ ಆಕೆಯನ್ನು ನೋಡಿಕೊಳ್ಳುತ್ತಿದ್ದ ರಾಧಿಕ ಎಂಬಾಕೆ ತಾನು ಗೆರ್ಟಿ ವಾಲ್ಡರ್‌ರ ದತ್ತುಪುತ್ರಿ ಎಂದು ಹೇಳುತ್ತಿದ್ದು, ಆಕೆ 2003 ರಲ್ಲಿ ಗೆರ್ಟಿಗೆ ಸೇರಿದ ನಿವಾಸವನ್ನು ನಿವೃತ್ತ ಪೊಲೀಸ್ ಅಧಿಕಾರಿ ಒಬ್ಬರಿಗೆ 30 ಲಕ್ಷಕ್ಕೆ ಭೋಗ್ಯಕ್ಕೆ ನೀಡಿದರು ನಂತರ ಅದನ್ನು ಅವರಿಗೆ ಮಾರಲು ಪ್ರಯತ್ನಿಸಿದರು.

ಇಬ್ಬರ ಹೇಳಿಕೆಯಲ್ಲೂ ವ್ಯತ್ಯಾಸ
ಆದರೆ ಕೊಲೆಯ ತನಿಖೆ ನಡೆಸುತ್ತಿದ್ದ ಪೊಲೀಸರು ಇವರಿಬ್ಬರ ಹೇಳಿಕೆ ದಾಖಲಿಸಿದಾಗ ಇಬ್ಬರೂ ಭಿನ್ನ-ಭಿನ್ನ ಹೇಳಿಕೆ ನೀಡಿದ್ದು, ಇಬ್ಬರೂ ಸೇರಿ ಸ್ವತ್ತನ್ನು ತಮ್ಮದು ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ಅನುಮಾನ ಮೂಡಿದೆ, ರಾಧಿಕಾ ಎನ್ನುವರೇ ಕೊಲೆ ಮಾಡಿರಬಹುದಾದ ಶಂಕೆಯೂ ಇದೆ. ಹಾಗಾಗಿ ಸ್ವತ್ತಿನ ಮೂಲ ಮಾಲೀಕರ ತನಿಖೆ ಮಾಡಲು ಯತ್ನಿಸಿದಾಗ ಎಡ್ವಿನ್ ಡಿಸೋಜಾ ಪತ್ತೆ ಆಗಿದ್ದಾರೆ.

ಹತ್ತು ಕೋಟಿ ಆಸ್ತಿ ನಿರೀಕ್ಷೆಯಲ್ಲಿ ಎಡ್ವಿನ್ ಡಿಸೋಜಾ
ಎಡ್ವಿನ್ ಡಿಸೋಜಾ ಮತ್ತು ಅವರ ಮಗ ಪ್ರಕಾಶ್ ಪ್ರಸ್ತುತ ಹತ್ತು ಕೋಟಿ ಮೌಲ್ಯದ ಆಸ್ತಿಯ ನಿರೀಕ್ಷೆಯಲ್ಲಿದ್ದು, ಈಗಾಗಲೇ ತಮ್ಮ ಅಜ್ಜಿ (ಗೆರ್ಟಿ ವಾಲ್ಡರ್ ನ ತಾಯಿ)ಗೆ ಸಂಬಂಧಿಸಿದ ದಾಖಲೆಗಳು, ಕೆಲವು ಚಿತ್ರಗಳನ್ನು ಪೊಲೀಸರಿಗೆ ನೀಡಿದ್ದಾರೆ. ಅಲ್ಲದೆ ಗೆಲ್ಟಿ ವಾಲ್ಡರ್‌ನ ದೆಹಲಿಯ ಸ್ವತ್ತು ತಮ್ಮದೆಂದು ದಾವೆ ಹೂಡಿ ವಕೀಲರನ್ನು ನೇಮಿಸಿದ್ದಾರೆ. ಆದರೆ ಪ್ರಕರಣ ಇತ್ಯರ್ಥವಾಗಲು ಎಷ್ಟು ದಿನ ಎಳೆಯುತ್ತದೆಯೋ ನೋಡಬೇಕಿದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications