ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಫ್ಯಾಸಿಸ್ಟ್ ಮನಸ್ಥಿತಿಯಿಂದ ಕೂಡಿದೆ: ಹೇಳಿಕೆ ಸಮರ್ಥಿಸಿಕೊಂಡ ಇಸ್ರೇಲಿ ನಿರ್ದೇಶಕ

|
Google Oneindia Kannada News

ನವದೆಹಲಿ, ನವೆಂಬರ್‌ 30: ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕುರಿತು ವಿಮರ್ಶಾತ್ಮಕ ಟೀಕೆಗಳನ್ನು ಮಾಡಿದ್ದ ಇಸ್ರೇಲಿ ಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ ಅವರು ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರವು ಪ್ರೊಪಗಂಡಾ ಹೊಂದಿರುವ ಅಸಭ್ಯ ಚಿತ್ರವೆಂದು ಲ್ಯಾಪಿಡ್‌ ಹೇಳಿದ್ದರು. ಇದಕ್ಕೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಬಿಜೆಪಿ ನಾಯಕರು ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಸರ್ಕಾರದ ಕೃಪಾಪೋಷಿತ ಪ್ರಚಾರವೆಂದು ಲ್ಯಾಪಿಡ್‌

ಸರ್ಕಾರದ ಕೃಪಾಪೋಷಿತ ಪ್ರಚಾರವೆಂದು ಲ್ಯಾಪಿಡ್‌

ಈ ಕುರಿತು ಇಸ್ರೇಲಿ ಸುದ್ದಿ ವೆಬ್‌ಸೈಟ್ ವೈನೆಟ್‌ನೊಂದಿಗೆ ಫೋನ್ ಮೂಲಕ ಮಾತನಾಡಿರುವ ಲ್ಯಾಪಿಡ್‌, 'ಇದೊಂದು ಹುಚ್ಚು. ಇದು ಸರ್ಕಾರದ ಕೃಪಾಪೋಷಿತ ಪ್ರಚಾರ. ಸರ್ಕಾರಿ ಉತ್ಸವದಂತೆ ಭಾಸವಾಗುತ್ತಿದೆ. ಭಾರತದಲ್ಲಿ ದೊಡ್ಡದಾಗಿ ಬೆಳೆದಿದೆ' ಎಂದು ಟೀಕಿಸಿದ್ದಾರೆ.

ಇದರಲ್ಲಿ ಭಾರತ ಸರ್ಕಾರ ನೇರವಾಗಿ ಭಾಗಿಯಾಗಿಲ್ಲದಿದ್ದರೂ, ಅದರ ಬೆಂಬಲ ಈ ಚಿತ್ರಕ್ಕೆ ವ್ಯಾಪಕವಾಗಿದೆ ಎಂದಿದ್ದಾರೆ.

ಕಾಶ್ಮೀರದಲ್ಲಿನ ಭಾರತದ ನೀತಿ ಫ್ಯಾಸಿಸ್ಟ್ ಲಕ್ಷಣಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಫ್ಯಾಸಿಸ್ಟ್‌ ಲಕ್ಷಣಗಳು ಒಂದೇ ವಿಧಾನ ಅನುಸರಿಸುತ್ತವೆ

ಫ್ಯಾಸಿಸ್ಟ್‌ ಲಕ್ಷಣಗಳು ಒಂದೇ ವಿಧಾನ ಅನುಸರಿಸುತ್ತವೆ

ಜಗತ್ತಿನಾದ್ಯಂತ ಇರುವ ಫ್ಯಾಸಿಸ್ಟ್‌ ಮನಸ್ಥಿತಿಗಳು ಒಂದೇ ವಿಧಾನಗಳನ್ನು ಅನುಸರಿಸುತ್ತವೆ. ವಿದೇಶಿದಲ್ಲಿ ನಮ್ಮ ಶತ್ರುಗಳು ಇದ್ದಾರೆ. ಒಳಗೆ ದೇಶದ್ರೋಹಿಗಳಿದ್ದಾರೆ ಎಂದು ವಿಧಾನ ಪ್ರತಿಪಾದಿಸುತ್ತದೆ ಎಂದಿದ್ದಾರೆ.

ಆಡಳಿತಾರೂಢ ಬಿಜೆಪಿಯ ನಾಯಕರು ಪ್ರಚಾರ ಮಾಡಿದ ಈ ಚಿತ್ರವು ಗಳಿಕೆಯ ವಿಚಾರದಲ್ಲಿ ಯಶಸ್ವಿಯಾಗಿದೆ. ಆದರೆ ಕೋಮು ಭಾವನೆಗಳನ್ನು ಕೆರಳಿಸುವ ಆರೋಪವನ್ನೂ ಎದುರಿಸಿದೆ ಎಂದೂ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ

ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ

'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ಕುರಿತ ನನ್ನ ಹೇಳಿಕೆಗೆ ಟೀಕೆಗಳು ವ್ಯಕ್ತವಾಗಿವೆ. ಸಾರ್ವಜನಿಕ ಜೀವನದಲ್ಲಿ ಇರುವ ಕೆಲ ವ್ಯಕ್ತಿಗಳು ಹಾಗೂ ಸಾಮಾಜಿಕ ಮಾಧ್ಯಮದ ಕೆಲ ಬಳಕೆದಾರರು ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಚಲನಚಿತ್ರ ನಿರ್ದೇಶಕರ ಹೇಳಿಕೆಗಳು ಭಾರತದಲ್ಲಿ ಇಸ್ರೇಲ್‌ನ ರಾಜತಾಂತ್ರಿಕರಿಂದ ತೀವ್ರ ಟೀಕೆಗೆ ಒಳಗಾಗಿವೆ.

ಇಸ್ರೇಲಿ ನಿರ್ದೇಶಕ ನಾದವ್‌ ಹೇಳಿದ್ದೇನು?

ಇಸ್ರೇಲಿ ನಿರ್ದೇಶಕ ನಾದವ್‌ ಹೇಳಿದ್ದೇನು?

ಗೋವಾದಲ್ಲಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಇಸ್ರೇಲಿ ನಿರ್ದೇಶಕ ನಾದವ್, 'ಈ ಅಂತರಾಷ್ಟ್ರೀಯ ಚಿತ್ರೋತ್ಸವದ 15ನೇ ಚಿತ್ರ, ದಿ ಕಾಶ್ಮೀರ್ ಫೈಲ್ಸ್‌ನಿಂದ ನಾವೆಲ್ಲರೂ ವಿಚಲಿತರಾಗಿದ್ದೇವೆ ಹಾಗೂ ಆಘಾತಕ್ಕೊಳಗಾಗಿದ್ದೇವೆ. ಅದು ಪ್ರೊಪಗಂಡಾವನ್ನು ಪ್ರಚಾರ ಮಾಡುವ ಅಸಭ್ಯ ಸಿನಿಮಾ' ಎಂದು ಟೀಕಿಸಿದ್ದರು.

'ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ(ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ) ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಲು ಸೂಕ್ತ ಚಿತ್ರವಲ್ಲ ಎಂದು ನನಗೆ ಅನ್ನಿಸಿತು. ಈ ವೇದಿಕೆಯಲ್ಲಿ ನಿಮ್ಮೊಂದಿಗೆ ನನ್ನ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ನನಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಕಲೆಗೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಸಹ ಸ್ವೀಕರಿಸುವುದು ಈ ಚಿತ್ರೋತ್ಸವದ ಮನೋಭಾವವೂ ಆಗಿದೆ' ಎಂದು ನಾದವ್‌ ಪ್ರತಿಪಾದಿಸಿದ್ದರು.

ಇಸ್ರೇಲಿ ನಿರ್ದೇಶಕ ನಾದವ್‌ ವಿರುದ್ಧ ಆಕ್ರೋಶ

ಇಸ್ರೇಲಿ ನಿರ್ದೇಶಕ ನಾದವ್‌ ವಿರುದ್ಧ ಆಕ್ರೋಶ

ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ಹೇಳಿಕೆಗೆ ಭಾರತ ಮತ್ತು ಇಸ್ರೇಲ್‌ನ ಅನೇಕ ಅಧಿಕಾರಿಗಳು, ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ಪ್ರತಿಕ್ರಿಯಿಸಿದ್ದಾರೆ. ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವಂತೆ ನಾದವ್‌ ಲ್ಯಾಪಿಡ್‌ಗೆ ಒತ್ತಾಯಿಸಿದ್ದಾರೆ. ಅವರ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ.

ಕಣಿವೆ ರಾಜ್ಯದಲ್ಲಿ ಉಗ್ರರಿಂದ ಹತ್ಯೆಗೊಳಗಾದ ಕಾಶ್ಮೀರಿ ಪಂಡಿತರ ಕುಟುಂಬಗಳು 1990ರಲ್ಲಿ ಕಾಶ್ಮೀರವನ್ನು ತೊರೆದು ವಲಸೆ ಹೋಗಿದ್ದವು. ಇದನ್ನು 'ದಿ ಕಾಶ್ಮೀರ್‌ ಫೈಲ್ಸ್‌'ನಲ್ಲಿ ತೋರಿಸಲಾಗಿದೆ. ಮಾರ್ಚ್ 11 ರಂದು ಬಿಡುಗಡೆಯಾದ ದಿನದಿಂದಲೂ ಚಿತ್ರವು ಒಂದಿಲ್ಲೊಂದು ವಿವಾದಕ್ಕೆ ಗ್ರಾಸವಾಗಿದೆ.

English summary
Israeli filmmaker Nadav Lapid, whose critical remarks on 'The Kashmir Files' movie at a film festival have raised a storm, has stood by them and said "someone has to speak up". Mr Lapid, the head of the international jury at the International Film Festival of India in Goa, said at the festival's closing ceremony that the Vivek Agnihotri-directed film was "propaganda and vulgar". He said the jury was "disturbed and shocked" at the screening of the film
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X