ರಷ್ಯಾದಿಂದ ಅಣ್ವಸ್ತ್ರ ದಾಳಿ ಅಭ್ಯಾಸ; ಭೂಮಿಗೆ ಕಾದಿದೆಯಾ ದೊಡ್ಡ ಕಂಟಕ?
ಉಕ್ರೇನ್ ದೇಶದ ಮೇಲೆ ಎರಗಿ ಹೋಗಿರುವ ರಷ್ಯಾ ತನ್ನ ಬತ್ತಳಿಕೆಯಲ್ಲಿರುವ ಪರಮಾಣು ಅಸ್ತ್ರಗಳನ್ನ ಪ್ರಯೋಗಿಸಲು ಸಜ್ಜಾಗುತ್ತಿರಬಹುದು ಎಂದು ಸುಳಿವು ನೀಡುವಂಥ ಬೆಳವಣಿಗೆಗಳು ನಡೆಯುತ್ತಿವೆ. ರಷ್ಯಾದ ಕಾಲಿನಿನ್‌ಗ್ರಾಡ್ (Kaliningrad City) ಎಂಬ ನಗರದಲ್ಲಿ ರಷ್ಯಾದ ಸೇನಾಪಡೆಗಳು ಪರಮಾಣು ದಾಳಿಯ ಅಣಕು ಅಭ್ಯಾಸ (War Simulation) ನಡೆಸಿರುವುದು ಬೆಳಕಿಗೆ ಬಂದಿದೆ. ಪೋಲೆಂಡ್ ಮತ್ತು ಲಿಥುವೇನಿಯಾ ದೇಶಗಳ ನಡುವಿನ ಬಾಲ್ಟಿಕ್ ಸಮುದ್ರ ಬಳಿ ಇರುವ ಕಾಲಿನಿನ್‌ಗ್ರಾಡ್ ನಗರದಲ್ಲಿ ಪರಮಾಣುಶಕ್ತ ಇಸ್ಕಂದರ್ ಬ್ಯಾಲಿಸ್ಟಿಕ್ ಮಿಸೈಲ್ ಸಿಸ್ಟಂನ ಅಣಕು ದಾಳಿ ಅಭ್ಯಾಸವನ್ನು ರಷ್ಯಾ ಪಡೆಗಳು ಮಾಡಿವೆ.
ಶತ್ರುಪಡೆಗಳ ಮಿಸೈಲ್ ಸಿಸ್ಟಂ, ಏರ್‌ಫೀಲ್ಡ್, ಮಿಲಿಟರಿ ಉಪಕರಣ, ಕಮಾಂಡ್ ಪೋಸ್ಟ್ ಇತ್ಯಾದಿಯನ್ನ ಸಿಮ್ಯೂಲೇಟ್ ಮಾಡಿ ಇಸ್ಕಂದರ್ ಕ್ಷಿಪಣಿಗಳಿಂದ ಅಣಕು ದಾಳಿ ಮಾಡಲಾಗಿದೆ. ಉಕ್ರೇನ್ ಮೇಲಿನ ಯುದ್ಧ ನಿರೀಕ್ಷೆಮೀರಿ ದೀರ್ಘವಾಗುತ್ತಿರುವುದು ರಷ್ಯಾವನ್ನು ಹತಾಶೆಗೆ ಕೆಡವಿದೆ. ಇಂಥ ಸಂದರ್ಭದಲ್ಲಿ ರಷ್ಯಾ ದೇಶ ಪರಮಾಣು ಅಸ್ತ್ರ ಪ್ರಯೋಗದ ಅಭ್ಯಾಸ ನಡೆಸಿರುವುದು ಪಾಶ್ಚಿಮಾತ್ಯ ದೇಶಗಳಿಗೆ ಆತಂಕ ತಂದಿದೆ.

ಪುಟಿನ್‌ನ ಪ್ರಚಾರಕ ಡಿಮಿಟ್ರಿ ಹೇಳಿದ ಭಯಾನಕ ವಿಷಯ:
ರಷ್ಯಾ ಈ ಅಣಕು ಪರಮಾಣು ಅಸ್ತ್ರ ದಾಳಿ ಅಭ್ಯಾಸ ನಡೆಸಿರುವ ಸಂದರ್ಭದಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಆಪ್ತ ತಂಡದಲ್ಲಿರುವ ಅವರ ಪ್ರಚಾರಕ ಡಿಮಿಟ್ರಿ ಕಿಸೇಲ್ಯೋವ್ (Dmitry Kiselyov) ಎಂಬಾತ ಜಲಾಂತರ್ಗಾಮಿ (Underwater) ಪರಮಾಣು ದಾಳಿ ಮೂಲಕ ಬ್ರಿಟನ್ ದೇಶವನ್ನು ಸಮುದ್ರದಲ್ಲಿ ಮುಳುಗಿಸುವ ಬಗೆ ಹೇಗೆ ಎಂದು ತನ್ನ ಟಿವಿ ಶೋವೊಂದರಲ್ಲಿ ಹೇಳಿದ್ದಾನೆ. ಇದೂ ಕೂಡ ಪಾಶ್ಚಿಮಾತ್ಯ ದೇಶಗಳನ್ನ ಬೆಚ್ಚಿಬೀಳಿಸಿದೆ.

ವಿಕರಣದಿಂದ ದೈತ್ಯ ಅಲೆಗಳು:
ಪೋಸೇಡಾನ್ ಎಂಬ ಜಲಾಂತರ್ಗಾಮಿ ಡ್ರೋನ್ (Poseidon Underwater Drone) ಮೂಲಕ ಬ್ರಿಟನ್ ಮೇಲೆ ರಷ್ಯಾ ಪರಮಾಣು ದಾಳಿ ಮಾಡಬಹುದು. ಈ ಅಣು ಅಸ್ತ್ರವು ಸಮುದ್ರದಡಿಯಲ್ಲಿ ರೇಡಿಯೋವಿಕಿರಣದ (Radioactive Tidal Wave) ದೈತ್ಯ ಅಲೆಗಳನ್ನ ಎಬ್ಬಿಸಿ ಬ್ರಿಟನ್ ದೇಶವನ್ನು ಸಮುದ್ರದ ತಳಕ್ಕೆ ಮುಳುಗಿಸಬಲ್ಲುದು ಎಂದು ಡಿಮಿಟ್ರಿ ಕಿಸೇಲ್ಯೋವ್ ತನ್ನ ವಿಡಿಯೋದಲ್ಲಿ ಹೇಳಿದ್ದಾನೆ.

ಬ್ರಿಟನ್‌ನ ಮೂಲೆ ಮೂಲೆಗೂ ರಷ್ಯಾ ಅಸ್ತ್ರ ತಲುಪಬಹುದು:
"ಈ ಬೃಹತ್ ಅಲೆಗಳು ದೊಡ್ಡ ಪ್ರಮಾನದ ವಿಕರಣಗಳನ್ನ ಹೊತ್ತು ಹೋಗುತ್ತವೆ. ಬ್ರಿಟನ್ ರಾಷ್ಟ್ರವನ್ನು ಮುಳುಗಿಸುವ ಈ ಅಲೆಗಳು ಸಾಗುವ ಹಾದಿ ಎಲ್ಲವೂ ವಿಕಿರಣ ಮರುಭೂಮಿಯಾಗಿ ಪರಿವರ್ತಿಸುತ್ತವೆ. ಇದು ನಿಮಗೆ ಹೇಗಿರುತ್ತದೆ ಹೇಳಿ" ಎಂದು ಅತ ವ್ಯಂಗ್ಯ ಮಾಡಿದ್ದಾನೆ.
ರಷ್ಯಾ ಬಳಿಕ ಸುಮಾರು 15 ಪರಮಾಣು ನೆಲೆಗಳಿರುವ ಅಂದಾಜು ಇದೆ. ಬ್ರಿಟನ್‌ನ ಭಾಗವಾಗಿರುವ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಈ ಮೂರೂ ದೇಶಗಳ ಯಾವ ಭೂಭಾಗದ ಮೇಲಾದರೂ ರಷ್ಯಾ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

ಪರಮಾಣು ಅಸ್ತ್ರ ಬಳಸುತ್ತಾ ರಷ್ಯಾ?:
ಆಗಲೇ ತಿಳಿಸಿದಂತೆ ರಷ್ಯಾ ಈಗ ಸಾಕಷ್ಟು ಹತಾಶೆಯ ಸ್ಥಿತಿಯಲ್ಲಿದೆ. ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಬೆನ್ನಲ್ಲೇ ವ್ಲಾದಿಮಿರ್ ಪುಟಿನ್ ತಮ್ಮ ಪರಮಾಣು ಪಡೆಗಳಿಗೆ ಹೈ ಅಲರ್ಟ್‌ನಲ್ಲಿರುವಂತೆ ಸೂಚಿಸಿದ್ದರು. ಈಗ ಉಕ್ರೇನ್ ದೇಶಕ್ಕೆ ಪಾಶ್ಚಿಮಾತ್ಯ ದೇಶಗಳು ಪರೋಕ್ಷವಾಗಿ ಮಿಲಿಟರಿ ಬೆಂಬಲ ನೀಡುತ್ತಿವೆ. ಇದು ಉಕ್ರೇನ್ ಪ್ರತಿರೋಧಕ್ಕೆ ಬಲ ಸಿಕ್ಕಂತಾಗಿದೆ. ಇದೇ ಹತಾಶೆಯಲ್ಲಿರುವ ರಷ್ಯಾ ಪರಮಾಣು ದಾಳಿಗೆ ಸೂಕ್ತ ಸಮಯ ಕಾಯುತ್ತಿರಬಹುದು ಎಂಬ ಅಣಿಕೆಯನ್ನ ಕೆಲವರು ಮಾಡಿದ್ದಾರೆ.
ಒಂದು ವೇಳೆ ಪಾಶ್ಚಿಮಾತ್ಯ ದೇಶಗಳು ನೇರವಾಗಿ ರಷ್ಯಾದೊಂದಿಗೆ ಯುದ್ಧಕ್ಕಿಳಿದರೆ ಮಿಂಚಿನ ವೇಗದಲ್ಲಿ ಎದುರುತ್ತರ ಸಿಗುತ್ತದೆ ಎಂದು ಈ ಹಿಂದೆಯೇ ಪುಟನ್ ಎಚ್ಚರಿಕೆ ನೀಡಿದ್ದರು. ಅಂದರೆ ಪುಟಿನ್ ಮನದಲ್ಲಿ ಪರಮಾಣು ದಾಳಿಯ ಯೋಜನೆ ಗಾಢವಾಗಿರಬಹುದು ಎಂದು ವಿಮರ್ಶಿಸಲಾಗುತ್ತಿದೆ.

ರಷ್ಯಾ ಬಳಿ ಪರಮಾಣು ಅಸ್ತ್ರಗಳು ಎಷ್ಟಿವೆ?
ಒಂದು ಅಂದಾಜಿನ ಪ್ರಕಾರ ರಷ್ಯಾ ಬಳಿ ವಿಶ್ವದಲ್ಲೇ ಅತಿ ಹೆಚ್ಚು ಪರಮಾಣು ಅಸ್ತ್ರಗಳಿವೆ. 4,447 ವಾರ್ ಹೆಡ್‌ಗಳಿವೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ವಾರ್ ಹೆಡ್‌ಗಳನ್ನ ಬ್ಯಾಲಿಸ್ಟಿಕ್ ಮಿಸೈಲ್ ಮತ್ತು ಹೆವಿ ಬಾಂಬರ್ ನೆಲೆಗಳಲ್ಲಿ ನಿಯೋಜಿಸಲಾಗಿದೆ. ಸಬ್‌ಮರೀನ್‌ನ ಬ್ಯಾಲಿಸ್ಟಿಕ್ ಮಿಸೈಲ್‌ನಲ್ಲಿ ೫೦೦ಕ್ಕೂ ಹೆಚ್ಚು ಅಣ್ವಸ್ತ್ರ ಸಿಡಿತಲೆಗಳನ್ನ ಇರಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications