• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿಕ್ಸೋಪತಿಯಿಂದ ಬ್ಲ್ಯಾಕ್‌ ಫಂಗಸ್‌ ಗುಣಮುಖ?: ನೀವು ತಿಳಿಯಲೇಬೇಕಾದ ಮಾಹಿತಿ

|
Google Oneindia Kannada News

ಹೈದಾರಾಬಾದ್‌, ಸೆಪ್ಟೆಂಬರ್‌ 05: ತೆಲಂಗಾಣದಲ್ಲಿ ಭೀಕರ ಕಪ್ಪು ಶಿಲೀಂಧ್ರದಿಂದ ಬಳಲುತ್ತಿರುವ ರೋಗಿಗಳಿಗೆ ಹೈದರಾಬಾದ್‌ನ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಅಲೋಪತಿ ಹಾಗೂ ಆಯುರ್ವೇದ (ಮಿಕ್ಸೋಪತಿ) ಎರಡರ ಮಿಶ್ರಣದ ಚಿಕಿತ್ಸೆ ನೀಡಲು ತೆಲಂಗಾಣ ರಾಜ್ಯ ಸರ್ಕಾರ ನಡೆಸುತ್ತಿರುವ ಮೊದಲ ಸಂಶೋಧನೆಯು ಗಮನಾರ್ಹವಾಗಿ ಉತ್ತಮ ಫಲಿತಾಂಶವನ್ನು ನೀಡಿದೆ ಎಂದು ವರದಿಯಾಗಿದೆ. ಈ ಪ್ರಯೋಗವನ್ನು 137 ರೋಗಿಗಳ ಮೇಲೆ ಈ ಸಂಶೋಧನೆ ನಡೆಸಲಾಗುತ್ತಿದೆ.

ವೈದ್ಯಕೀಯ ಅಧ್ಯಯನದ ಮಾಹಿತಿಯ ಪ್ರಕಾರ, ಮುಖ್ಯಮಂತ್ರಿ ಕೆ ಚಂದ್ರ ಶೇಖರ್‍ ರಾವ್‌ ಶಿಫಾರಸು ಮಾಡಿರುವ ಈ ಒಂದು ಕಲ್ಪನೆಯು 'ಉತ್ತಮವಾದ' ಫಲಿತಾಂಶಗಳನ್ನು ನೀಡಿದೆ ಎಂದು ಹಿರಿಯ ಸರ್ಕಾರಿ ಆಯುರ್ವೇದ ಮತ್ತು ಅಲೋಪತಿ ಸಂಶೋಧಕರು ಹೇಳಿದ್ದಾರೆ. ಇದು ಸರ್ಕಾರಿ ಇಎನ್‌ಟಿ ಆಸ್ಪತ್ರೆ, ಕೋಟಿ ಮತ್ತು ಗಾಂಧಿ ಆಸ್ಪತ್ರೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಕಪ್ಪು ಶಿಲೀಂಧ್ರ ರೋಗಿಗಳಿಗೆ ಈ ಮಿಕ್ಸೋಪತಿಯನ್ನು ಪ್ರಯೋಗ ಮಾಡಲಾಗಿದೆ.

ಉತ್ತರಾಖಂಡ: ತುರ್ತುಸ್ಥಿತಿಯಲ್ಲಿ ಅಲೋಪಥಿಕ್ ಔಷಧಿ ಶಿಫಾರಸ್ಸಿಗೆ ಆಯುರ್ವೇದ ವೈದ್ಯರಿಗೆ ಅನುಮತಿ ಉತ್ತರಾಖಂಡ: ತುರ್ತುಸ್ಥಿತಿಯಲ್ಲಿ ಅಲೋಪಥಿಕ್ ಔಷಧಿ ಶಿಫಾರಸ್ಸಿಗೆ ಆಯುರ್ವೇದ ವೈದ್ಯರಿಗೆ ಅನುಮತಿ

ಕೋಟಿಯ ಇಎನ್‌ಟಿ ಆಸ್ಪತ್ರೆಯ 92 ರೋಗಿಗಳು ಮತ್ತು ಗಾಂಧಿ ಆಸ್ಪತ್ರೆಯಲ್ಲಿನ 45 ರೋಗಿಗಳ ಕ್ಲಿನಿಕಲ್ ಅಧ್ಯಯನದ ಪ್ರಾಥಮಿಕ ಫಲಿತಾಂಶವು ಮರಣ ಪ್ರಮಾಣ, ರೋಗದ ಪ್ರಗತಿಯಲ್ಲಿ ಇಳಿಕೆ, ರೋಗದ ಲಕ್ಷಣ ಪದೇ ಪದೇ ಕಾಣಿಸಿಕೊಳ್ಳುವುದು ಕಡಿಮೆ ಮಾಡಿದೆ, ಹಾಗೆಯೇ ಕಪ್ಪು ಶಿಲೀಂಧ್ರವು ಕಡಿಮೆಯಾಗಿದೆ. ಹಾಗೆಯೇ ಅಡ್ಡಪರಿಣಾಮಗಳು ಮತ್ತು ಡೋಸೇಜ್‌ನಿಂದ ಉಂಟಾಗುವ ಕೆಟ್ಟ ಪರಿಣಾಮವು ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಆಯುಷ್ ತೆಲಂಗಾಣ ಆಯುಕ್ತರಾದ ಡಾ.ಅಲಗು ವರ್ಷಿಣಿ ನೇತೃತ್ವ ವಹಿಸಿರುವ ಕ್ಲಿನಿಕಲ್ ಅಧ್ಯಯನವು ಎರಡು ವಿಭಿನ್ನ ಮ್ಯೂಕೋರ್ಮೈಕೋಸಿಸ್ ರೋಗಿಗಳಿಗೆ ವಿಭಿನ್ನ ಚಿಕಿತ್ಸಾ ಕ್ರಮಗಳನ್ನು ರಚನೆ ಮಾಡುವುದನ್ನು ಒಳಗೊಂಡಿತ್ತು. ಕೋಟಿಯ ಇಎನ್‌ಟಿ ಆಸ್ಪತ್ರೆಯಲ್ಲಿ, ಕ್ಲಿನಿಕಲ್ ಅಧ್ಯಯನ ಗುಂಪು ಸಂಪೂರ್ಣವಾಗಿ ಬ್ಲ್ಯಾಕ್‌ ಫಂಗಸ್‌ ಹೊಂದಿರುವ ಸೌಮ್ಯ, ಮಧ್ಯಮ ಮತ್ತು ಕೋವಿಡ್ ಅಲ್ಲದ ರೋಗಿಗಳು ದಾಖಲಾಗಿದ್ದರು. ಆದರೆ ಗಾಂಧಿ ಆಸ್ಪತ್ರೆಯಲ್ಲಿ ಬ್ಲ್ಯಾಕ್‌ ಫಂಗಸ್‌ನ ತೀವ್ರ ಗುಣಲಕ್ಷಣ ಹೊಂದಿರುವ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಪಾಶ್ಚಿಮಾತ್ಯ ಔಷಧದಿಂದ ಪಡೆದಿರುವ ಅಸ್ತಿತ್ವದಲ್ಲಿರುವ ಚಿಕಿತ್ಸೆಯ ಪ್ರೋಟೋಕಾಲ್‌ಗಳ ಮಿಶ್ರಣವನ್ನು ಆಯುರ್ವೇದದೊಂದಿಗೆ ಸಂಯೋಜನೆ ಮಾಡಲಾಗಿದೆ. "ವೈದ್ಯಕೀಯ ಅಧ್ಯಯನವು ವಿಶಿಷ್ಟವಾಗಿದೆ. ಏಕೆಂದರೆ ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದ ಮತ್ತು ನಮ್ಮ ಜ್ಞಾನದಿಂದ ಮಾಡಲಾದ ಕ್ರಮವಾಗಿದೆ. ಬೇರಾವ ರಾಜ್ಯಗಳು ಕೂಡಾ ಆಯುರ್ವೇಧ ಹಾಗೂ ಪಾಶ್ಚಿಮಾತ್ಯ ಔಷಧವನ್ನು ಜೊತೆಗೂಡಿಸಿ ಚಿಕತ್ಸೆ ನೀಡುವ ಪ್ರಯತ್ನವನ್ನು ಮಾಡಿಲ್ಲ. ಮತ್ತೊಂದು ವಿಶಿಷ್ಟ ಅಂಶವೆಂದರೆ ಅಧ್ಯಯನಕ್ಕಾಗಿ ಈಗಿರುವ ಆಯುರ್ವೇದ ಚಿಕಿತ್ಸೆಗಳು ಮತ್ತು ಥೆರಪಿಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ," ಎಂದು ಆಯುಷ್ ತೆಲಂಗಾಣ ಆಯುಕ್ತರಾದ ಡಾ.ಅಲಗು ವರ್ಷಿಣಿ ತಿಳಿಸಿದ್ದಾರೆ.

ಪಾಶ್ಚಾತ್ಯ ಚಿಕಿತ್ಸೆಯ ಪ್ರೋಟೋಕಾಲ್‌ಗಳು ಮತ್ತು ಆಯುರ್ವೇದವನ್ನು ಸಂಯೋಜಿಸುವ ನಿರ್ಧಾರ ಹಾಗೂ ಕಪ್ಪು ಶಿಲೀಂಧ್ರ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅದರ ಕಾರ್ಯಸಾಧ್ಯತೆಯನ್ನು ಅನ್ವೇಷಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಹಿರಿಯ ವೈದ್ಯರೊಂದಿಗೆ ಸಮಾಲೋಚಿಸಿ ತೆಗೆದುಕೊಂಡಿದ್ದಾರೆ.

(ಒನ್ ಇಂಡಿಯಾ ಸುದ್ದಿ)

English summary
Telangana government funded research mix of Allopathy and Ayurveda called Mixopathy to cure Black Fungus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X