ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮೊಬೈಲ್ 5Gಗೆ ಬೆಂಬಲಿಸುತ್ತಾ? ಹೇಗೆ ತಿಳಿಯಿರಿ

|
Google Oneindia Kannada News

ಭಾರತ ದೇಶದಲ್ಲಿ ಪ್ರಮುಖ ನಗರಗಳಲ್ಲಿ ಹೆಚ್ಚು ಸ್ಮಾರ್ಟ್‌ಪೋನ್ ಬಳಸುವ ತಾಣಗಳೇ ಹೆಸರು ವಾಸವಾಗಿರುವ ನಗರಗಳಲ್ಲಿ ಇಂಟರ್ನೆಟ್‌ನ ಈಗ ವೇಗ ಪಡೆದುಕೊಳ್ಳುವ ಯೋಜನೆಯಾಗಿರುವ 5Gಯ ಸೇವೆಗಳು ಭಾತರತದಲ್ಲಿ ಗಣೇಶನ ಹಬ್ಬಕ್ಕೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ 5Gಯ ಲಭ್ಯವಾಗಲಿದೆ ಎಂಬ ಮಾಹಿಯನ್ನು ಭಾರತೀಯ ಟೆಲಿಕಾಂ ಆಪರೇಟರ್‌ಗಳು 5G ಸೇವೆಗಳನ್ನು ನೀಡುವ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ. ಅಲ್ಲದೆ ಏರ್‌ಟೆಲ್ ಮತ್ತು ಜಿಯೋ ಕಂಪನಿಗಳು ಅತೀ ಶೀಘ್ರದಲ್ಲಿ ಗ್ರಾಹಕರಿಗೆ 5Gಗಳನ್ನು ಬಿತ್ತರಿಸಲು ತುದಿಗಾಲಿನಲ್ಲಯೇ ನಿಂತು ತಮ್ಮ ಹಾಗೂ ಹೊಸ ಗ್ರಾಹಕರನ್ನು ವಿಭಿನ್ನವಾಗಿ ಸೆಳೆಯಲು ಮುಂದಾಗಿವೆ. ಇನ್ನು ಏರ್‌ಟೆಲ್ ಕಂಪನಿ ಆಗಷ್ಟ್‌ನಲ್ಲಿಯೇ 5G ಸೇವೆಯನ್ನು ನೀಡಲಿದ್ದೇವೆ ಎಂದು ಹೇಳಿಕೊಂಡಿದೆ.

ಇನ್ನು ಹಲವು ಕಂಪನಿಗಳು ತಮ್ಮ 5G ಫೋನ್‌ಗಳನ್ನು ಬಹಳ ಹಿಂದೆಯೇ ಪ್ರಾರಂಭಿಸಿದ್ದವು. ಅದು ಕೇವಲ ಒಂದು ಅಥವಾ ಎರಡು 5G ಬ್ಯಾಂಡ್‌ಗಳನ್ನು ಹೊಂದಿತ್ತು. ಅಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ಫೋನ್‌ನಲ್ಲಿ 5G ಕಾರ್ಯನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂದು ಚಿಂತಿನೆಗಳಿಗೆ ಒಳಗಾಗಿದ್ದಾರೆ. ಹೀಗಿರುವುವಾಗ ದೇಶದಲ್ಲಿ 5ಜಿ ನೆಟ್‌ವರ್ಕ್‌ಗಾಗಿ ಸ್ಪೆಕ್ಟ್ರಮ್ ಹರಾಜಾಗಿದೆ ಮತ್ತು ಟೆಲಿಕಾಂ ಕಂಪನಿಗಳು ಕೂಡ ಆದಷ್ಟು ಬೇಗ 5ಜಿ ನೆಟ್‌ವರ್ಕ್ ಅನ್ನು ಹೊರತರಲು ತಯಾರಿ ನಡೆಸುತ್ತಿವೆ. ಏರ್‌ಟೆಲ್ ಈ ತಿಂಗಳ ಅಂತ್ಯದ ವೇಳೆಗೆ 5G ಸೇವೆಯನ್ನು ಪ್ರಾರಂಭಿಸಬಹುದು. ಅದೇ ಸಮಯದಲ್ಲಿ, ರಿಲಯನ್ಸ್ ಜಿಯೋ ಕೂಡ ಶೀಘ್ರದಲ್ಲೇ ಪ್ರಾರಂಭವಾಗುವ ಸೂಚನೆಗಳನ್ನು ನೀಡಿದೆ. ಅವರೆ ನಿಮ್ಮ ಸ್ಮಾರ್ಟಫೋನ್‌ಗಳು 5G ನೆಟ್‌ವರ್ಕ್ ಬೆಂಬಲಿಸುತ್ತದೆಯೇ ಎಂಬ ದೊಡ್ಡ ಪ್ರಶ್ನೆ ಬಳಕೆದಾರರ ಮನಸ್ಸಿನಲ್ಲಿಯೂ ಮೂಡಬಹುದು.

ಆಗಸ್ಟ್‌ನಲ್ಲಿಯೇ ಏರ್‌ಟೆಲ್ ಸೂಪರ್ ಫಾಸ್ಟ್ 5G ಸೇವೆ ಪ್ರಾರಂಭ?ಆಗಸ್ಟ್‌ನಲ್ಲಿಯೇ ಏರ್‌ಟೆಲ್ ಸೂಪರ್ ಫಾಸ್ಟ್ 5G ಸೇವೆ ಪ್ರಾರಂಭ?

ಹೊಸ ಮೊಬೈಲ್‌ ಖರೀದಿಸಬೇಕಾಗುತ್ತದೆಯೇ?

ಹೊಸ ಮೊಬೈಲ್‌ ಖರೀದಿಸಬೇಕಾಗುತ್ತದೆಯೇ?

ಒಂದು ವೇಳೆ ನಿಮ್ಮ ಮೊಬೈಲ್‌ 5G ಸೇವೆಯನ್ನು ಬೆಂಬಲಿಸದಿದ್ದರೆ, ನೀವು ಹೊಸ ಮೊಬೈಲ್‌ನ್ನು ಖರೀದಿಸಬೇಕಾಗುತ್ತದೆ. ಹೆಚ್ಚಿನ ಜನರ ಸ್ಮಾರ್ಟ್‌ಫೋನ್‌ಗಳು 5G ಸ್ಪೆಕ್ಟ್ರಮ್ ಹರಾಜಿನ ಹಿಂದಿನವುಗಳಾಗಿವೆ. ಈ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಸಮಯದಲ್ಲಿ ಭಾರತದಲ್ಲಿ ಯಾವ ಬ್ಯಾಂಡ್‌ಗಳಲ್ಲಿ 5G ನೆಟ್‌ವರ್ಕ್ ಲಭ್ಯವಿರುತ್ತದೆ ಅಥವಾ ಯಾವುದರಲ್ಲಿ ಲಭ್ಯವಿರುತ್ತದೆ ಎಂಬುದು ಖಚಿತವಾಗಿಲ್ಲ. ಅದೇ ಸಮಯದಲ್ಲಿ ಅನೇಕ ಕಂಪನಿಗಳು ತಮ್ಮ ಫೋನ್‌ಗಳಲ್ಲಿ ಕೇವಲ ಒಂದು ಅಥವಾ ಎರಡು 5G ಬ್ಯಾಂಡ್‌ಗಳನ್ನು ಮಾರಾಟ ಮಾಡಿ 5G ಹೆಸರಿನಲ್ಲಿ ಮಾರಾಟ ಮಾಡಿವೆ ಎಂಬ ವರದಿಗಳು ಬಂದಿವೆ.

ಸ್ವಾತಂತ್ರ್ಯ ದಿನಾಚರಣೆ: 5ಜಿ ಜಾರಿಗೆ ಮುಂದಾದ ರಿಲಯನ್ಸ್ ಜಿಯೋ!ಸ್ವಾತಂತ್ರ್ಯ ದಿನಾಚರಣೆ: 5ಜಿ ಜಾರಿಗೆ ಮುಂದಾದ ರಿಲಯನ್ಸ್ ಜಿಯೋ!

ಇದೆಲ್ಲ ಬ್ಯಾಂಡ್‌ಗಳ ಆಟ ಆಗಿದೆ

ಇದೆಲ್ಲ ಬ್ಯಾಂಡ್‌ಗಳ ಆಟ ಆಗಿದೆ

ಇದೇ ಸಮಯದಲ್ಲಿ ಸ್ಪೆಕ್ಟ್ರಮ್ ಹರಾಜಿನ ನಂತರ ಯಾವ ಬ್ಯಾಂಡ್‌ಗಳಲ್ಲಿ 5G ನೆಟ್‌ವರ್ಕ್ ಲಭ್ಯವಿರುತ್ತದೆ ಎಂದು ನಿರ್ಧರಿಸಲಾಗಿದೆ. ಇನ್ನೂ ಜನರು ತಮ್ಮ ಫೋನ್ 5G ರನ್ ಮಾಡುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಬಯಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಫೋನ್ 5G ಹೊಂದಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಹ ನೀವು ಬಯಸಿದರೆ ನೀವು ಕೆಲವು ಸರಳವಾದ ಕೆಲಸಗಳನ್ನು ಮಾಡಬೇಕಾಗುತ್ತದೆ.

ನಿಮ್ಮ ಫೋನ್‌ನ 5G ಬೆಂಬಲಿಸುತ್ತಿಯೇ?

ನಿಮ್ಮ ಫೋನ್‌ನ 5G ಬೆಂಬಲಿಸುತ್ತಿಯೇ?

ನಿಮ್ಮ ಫೋನ್‌ನಲ್ಲಿ 5G ಹೊಂದಾಣಿಕೆಯನ್ನು ಪರಿಶೀಲಿಸಲು, ನೀವು ಈ ಹಂತಗಳನ್ನು ಅನುಸರಿಸಬೇಕು.

ಮೊದಲನೆಯದಾಗಿ, ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಬೇಕು.ಇಲ್ಲಿ ನೀವು ಅನೇಕ ಆಯ್ಕೆಗಳನ್ನು ನೋಡುತ್ತೀರಿ. ನೀವು ಸಂಪರ್ಕ ಅಥವಾ ವೈ-ಫೈ ಮತ್ತು ನೆಟ್‌ವರ್ಕ್ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.ಬಳಕೆದಾರರು ಇಲ್ಲಿ ಸಿಮ್ ಮತ್ತು ನೆಟ್‌ವರ್ಕ್ ಅಥವಾ ಕೆಲವು ಫೋನ್‌ಗಳಲ್ಲಿ ಮೊಬೈಲ್ ನೆಟ್‌ವರ್ಕ್‌ಗಳ ಆಯ್ಕೆಯನ್ನು ಪಡೆಯುತ್ತಾರೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಇಲ್ಲಿ, ನೀವು ನೆಟ್‌ವರ್ಕ್ ಮೋಡ್ ಆಯ್ಕೆಯನ್ನು ಪಡೆಯುತ್ತೀರಿ.

ಆದ್ಯತೆಯ ನೆಟ್‌ವರ್ಕ್ ಪ್ರಕಾರದಲ್ಲಿ 5G ಗೋಚರಿಸಿದರೆ, ನಿಮ್ಮ ಫೋನ್ 5Gಯನ್ನು ಬೆಂಬಲಿಸುತ್ತದೆ ಎಂಬುವುದು ತಿಳಿದು ಬರುತ್ತದೆ. ಇದರ ಹೊರತಾಗಿ, ಫೋನ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಫೋನ್‌ನ 5G ಬ್ಯಾಂಡ್‌ಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು ಮತ್ತು ಇವೆರಡನ್ನೂ ತುಂಬಾ ಸುಲಭವಾದ ಮಾರ್ಗವೆಂದು ಪರಿಗಣಿಸಲಾಗುತ್ತದೆ.

2026ರ ವೇಳೆಗೆ ಸುಮಾರು 400 ಮಿಲಿಯನ್ ಸಾಧನ

2026ರ ವೇಳೆಗೆ ಸುಮಾರು 400 ಮಿಲಿಯನ್ ಸಾಧನ

ದೇಶದಲ್ಲಿ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯು 2026ರಲ್ಲಿ ಸುಮಾರು 400 ಮಿಲಿಯನ್ ಸಾಧನಗಳನ್ನು ತಲುಪಲು ಶೇಕಡಾ 6ರಷ್ಟು ಬೆಳೆಯುವ ನಿರೀಕ್ಷೆಯಿದೆ ಎನ್ನಲಾಗಿದೆ ಈ ಸಂಖ್ಯೆಯು 2021ರಲ್ಲಿ 300 ಮಿಲಿಯನ್ ಆಗಿತ್ತು. 5Gಯಬಿಡುಗಡೆಯ ನಂತರ ಈ ಬೇಡಿಕೆ ಹೆಚ್ಚಾಗಬಹುದು. ಹೈ-ಸ್ಪೀಡ್ ಗೇಮಿಂಗ್ ಮತ್ತು ರಿಮೋಟ್ ಹೆಲ್ತ್‌ಕೇರ್‌ನಂತಹ ಅಪ್ಲಿಕೇಶನ್‌ಗಳಿಂದಾಗಿ 5Gನ್ನು ವೇಗವಾಗಿ ಅಳವಡಿಸಿಕೊಂಡಿರುವ ಮೊಬೈಲ್ ತಂತ್ರಜ್ಞಾನ ಎಂದು ನಂಬಲಾಗಿದೆ.

English summary
5G mobile in India; How India’s 5G mobile networks will guide your next smartphone purchase check here details Kannada,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X