• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಪತ್ರಿಕೆಗಳು ಕಂಡಂತೆ ಮೋದಿ ದಿಗ್ವಿಜಯ

|

ಚೌಕಿದಾರ್ ಶೇರ್ ಹೈ, ಮೋದಿ ಮತ್ತೊಮ್ಮೆ, ನಮೋ ಭಾರತ ಕೇಸರಿ, ಚೌಕಿದಾರ್ ಚಮಕದಾರ್, ಮೋದಿಸ್ತಾನ.... ಹೀಗೇ ಸಾಕಷ್ಟು ಕ್ರಿಯೇಟಿವ್ ಹೆಡ್ ಲೈನ್ ನೊಂದಿಗೆ ಇಂದಿನ ದಿನಪತ್ರಿಕೆಗಳು ಮನೆಬಾಗಿಲಿಗೆ ಬಂದಿವೆ.

ಹೌದು, ಲೋಕಸಭೆ ಚುನಾವಣೆಯ ಫಲಿತಾಂಶದ ಮರುದಿನ ಪತ್ರಿಕೆಗಳಿಗಾಗಿ ಕಾಯುತ್ತ ಕುಳಿತವರಿಗೆ ಓದುವುದಕ್ಕೆ ಭರಪೂರ ಸರಕಂತೂ ಸಿಕ್ಕಿದೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಏಪ್ರಿಲ್ 11 ರಿಂದ 19ರವರೆಗೆ ಏಳು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಮೇ 23 ರಂದು ಹೊರಬಿದ್ದಿತ್ತು. ಎನ್ ಡಿಎ 351, ಕಾಂಗ್ರೆಸ್ 92 ಮತ್ತು ಇತರರು 99 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಬಿಜೆಪಿ ಸ್ವತಂತ್ರವಾಗಿಯೇ 302 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಈ ಕುರಿತು ಕನ್ನಡದ ಪ್ರಮುಖ ಪತ್ರಿಕೆಗಳ ಕವರೇಜ್ ಹೇಗಿತ್ತು ನೋಡಿ.

ವಿಜಯ ಕರ್ನಾಟಕ

ವಿಜಯ ಕರ್ನಾಟಕ

"ಚೌಕಿದಾರ್ ಶೇರ್ ಹೈ" ಎಂಬ ವಿಜಯ ಕರ್ನಾಟಕದ ಶೀರ್ಷಿಕೆಗೆ ಇಂದಿನ ಹೆಡ್ ಲೈನ್ ಆಫ್ ದಿ ಡೇ ಗೌರವ! ಈ ಬಾರಿಯ ಚುನಾವಣೆಯ ಪ್ರಚಾರದಲ್ಲಿ ವಿಪಕ್ಷಗಳ ಬಾಯಲ್ಲಿ ನಿರಂತರವಾಗಿ ಉಲಿದ 'ಚೌಕಿದಾರ್ ಚೋರ್ ಹೈ' ಅಪಹಾಸ್ಯದ ನುಡಿಗೆ, ಮತದಾರ ಪ್ರಭು 'ಚೌಕಿದಾರ್ ಚೋರ್ ನಹಿ, ಶೇರ್ ಹೈ' ಎಂಬ ಜವಾಬು ಕೊಟ್ಟಿದ್ದಾನೆ! ಅದನ್ನೇ ವಿಜಯ ಕರ್ನಾಟಕ ಹೈಲೈಟ್ ಮಾಡಿದ್ದು, ಮೊದಲ ಪುಟದ ಅರ್ಧ ಜಾಗವನ್ನು ,ಮೋದಿಯ ವಿಜಯದ ನಗೆಯ ಚಿತ್ರಕ್ಕಾಗಿ ಮೀಸಲಿಟ್ಟಿದೆ.

ಪ್ರಜಾವಾಣಿ

ಪ್ರಜಾವಾಣಿ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರ 'ಮೋದಿ ಮತ್ತೊಮ್ಮೆ' ಘೋಷಣೆಯನ್ನೇ ಪ್ರಜಾವಾಣಿ ಶೀರ್ಷಿಕೆಯನ್ನಾಗಿ ನೀಡಿದೆ. ಮುಖಪುಟದಲ್ಲಿ ಪಾರ್ಲಿಮೆಂಟಿನ ಚಿತ್ರದೊಂದಿಗೆ ಮೋದಿ 'ವಿಕ್ಟರಿ' ಚಿಹ್ನೆಯೊಂದಿಗೆ ಕೈಬೀಸುತ್ತಿರುವ ಚಿತ್ರವನ್ನೂ ಪ್ರಜಾವಾಣಿ ನೀಡಿದೆ. ಇನ್ನು ರಾಜ್ಯ ಸರ್ಕಾರದ ಸ್ಥಿತಿಯನ್ನು "ಬಿಜೆಪಿಗೆ ಸಿಕ್ಕಿದ ದಡ, ಮೈತ್ರಿ ಗಡಗಡ" ಎಂಬ ಒಂದೇ ಸಾಲಿನಲ್ಲಿ ವಿವರಿಸಿದೆ.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ವಿಜಯವಾಣಿ

ವಿಜಯವಾಣಿ

ನಮೋ ಭಾರತ 'ಕೇಸರಿ' ಎಂಬುದು ವಿಜಯವಾಣಿಯ ಹೆಡ್ ಲೈನ್. ಕೇಸರಿಯನ್ನು ಕೇಸರಿ ಬಣ್ಣ ಮಾಡಿ ಆ ಒಂದೇ ವಾಕ್ಯ ನಾಲ್ಕಾರು ಅರ್ಥವನ್ನು ಸ್ಫುರಿಸುವಂತೆ ಕ್ರಿಯಾಶೀಲ ಶೀರ್ಷಿಕೆಯನ್ನು ವಿಜಯವಾಣಿ ನೀಡಿದೆ. ಜೊತೆಗೆ ಕೇಸರಿ ಶಾಲು ಹೊದ್ದ ಮೋದಿಯವರ ಚಿತ್ರ ಮುಖಪುಟಕ್ಕೆ ಮತ್ತಷ್ಟು ಕಳೆ ನೀಡಿದೆ.

ಉದಯವಾಣಿ

ಉದಯವಾಣಿ

ನಮೋ ಮತ್ತೊಮ್ಮೆ, ಮೋದಿ ಎಂದರೆ ಭಾರತ ಎಂಬ ಶಿರ್ಷಿಕೆ ಜೊತೆ 'ಅಳಿಯಿತು ಇಂದಿರಾ ಎಂದರೆ ಇಂಡಿಯಾ' ಎಂ ಕಿಕ್ಕರ್ ಅನ್ನು ನೀಡಿ ಗಮನ ಸೆಳೆದಿದೆ ಉದಯವಾಣಿ. ಕೇಸರಿಮಯವಾದ ಉದಯವಾಣಿಯ ಮುಖಪುಟದಲ್ಲಿ ಮೋದಿ ಕೈಬೀಸುತ್ತರುವ ಚಿತ್ರ ಕಮನ ಸೆಳೆಯುತ್ತದೆ.

ಮೇ 30ರಂದು ಗುರುವಾರ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ಸ್ವೀಕಾರ

ವಿಶ್ವವಾಣಿ

ವಿಶ್ವವಾಣಿ

ಚೌಕಿದಾರ್ ಚಮಕದಾರ್, ಮೋದಿಸ್ತಾನ ಎಂಬುದು ವಿಶ್ವವಾಣಿಯ ಹೆಡ್ ಲೈನ್. ಮುಖಪುಟದ ಮುಕ್ಕಾಲು ಬಾಗ ಆವರಿಸಿರುವ ಮೋದಿ ಅವರ ‌ಚಿತ್ರದೊಂದಿಗೆ ಎಲ್ಲಾ ಪುಟಗಳಲ್ಲೂ ಚುನಾವಣೆಯ ಸುದ್ದಿ ನೀಡಿದೆ 'ವಿಶ್ವವಾಣಿ'

ಹೊಸ ದಿಗಂತ

ಹೊಸ ದಿಗಂತ

ತನ್ನ ಮಾಸ್ಟ್ ಹೆಡ್ ಅನ್ನೇ ಶಿರ್ಷಿಕೆಗೆ ಬಳಸಿಕೊಂಡು ಮತ್ತಷ್ಟು ಕ್ರಿಯೇಟಿವಿಟಿ ಮೆರೆದಿದೆ 'ಹೊಸದಿಂಗತ'. ನವಭಾರತದ ಹೊಸ ದಿಗಂತ ಎಂಬುದು ಹೊಸ ದಿಗಂತದ ಶೀರ್ಷಿಕೆ. ಜೊತೆಗೆ ಕೆಂಪು ರುಮಾಲು ತೊಟ್ಟ ಮೋದಿಯವರ ಚಿತ್ರ ಮುಕ್ಕಾಲು ಪುಟವನ್ನು ಆವರಿಸಿದೆ. ಹಿನ್ನೆಲೆಯಲ್ಲಿ ಸಂಸತ್ತಿನ ಚಿತ್ರ. ಪುಟ ವಿನ್ಯಾಸಕ್ಕಾಗಿ ಹೊಸ ದಿಗಂತಕ್ಕೆ ಫುಲ್ ಮಾರ್ಕ್ಸ್!

ನರೇಂದ್ರ ಮೋದಿ ಮತ್ತೆ ಗೆದ್ದಿದ್ದೇಕೆ? 5 ಕಾರಣಗಳು

ಸಂಯುಕ್ತ ಕರ್ನಾಟಕ

ಸಂಯುಕ್ತ ಕರ್ನಾಟಕ

'ಪ್ರಚಂಡ ಬಾಹುಬಲಿ' ಎಂಬುದು ಸಂಯುಕ್ತ ಕರ್ನಾಟಕದ ಹೆಡ್ ಲೈನ್. ಜೊತೆಗೆ ಪ್ರಧಾನಿ ಮೋದಿಗೆ ಸೂಪರ್ ಮ್ಯಾನ್ ವೇಶ ತೊಡಿಸಿರುವ ಸಂಯುಕ್ತ ಕರ್ನಾಟಕ, ಮುಖಪುಟದ ಬಹುಪಾಲು ಭಾಗವನ್ನು ಆ ಚಿತ್ರಕ್ಕಾಗಿ ಮೀಸಲಿಟ್ಟಿದೆ.

ಕನ್ನಡ ಪ್ರಭ

ಕನ್ನಡ ಪ್ರಭ

ನಮೋ 2.019 ಎಂಬ ಕ್ರಯೇಟಿವ್ ಹೆಡ್ ಲೈನ್ ನೀಡಿದೆ ಕನ್ನಡ ಪ್ರಭ. ನಮೋ ಎರಡನೇ ಸಲಕ್ಕೆ ಅಧಿಕಾರಕ್ಕೆ ಬರುವುದನ್ನು ಸಮಾಜಿಕ ಮಾಧ್ಯಮಗಳು ನಮೋ 2.0 ಎಂದಿದ್ದವು. ಅದನ್ನೇ ಉಪಯೋಗಿಸಿಕೊಂಡು '19' ಅನ್ನು ಲೈಟ್ ಬಣ್ಣದಲ್ಲಿ ಹಾಕಿ ಅರ್ಥವತ್ತಾದ ಶೀರ್ಷಿಕೆ ನೀಡಿದೆ ಕನ್ನಡ ಪ್ರಭ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha election results 2019: Kannada news paper coverage of Modi's victory
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more