ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಬೆಂಗಳೂರು, ಮೇ 23 : ಲೋಕಸಭಾ ಚುನಾವಣೆ ಫಲಿತಾಂಶ ಕರ್ನಾಟಕದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಗುರುವಾರ 2019ರ ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯಿತು. ಕರ್ನಾಟಕದಲ್ಲಿ ಬಿಜೆಪಿ 27 ಕ್ಷೇತ್ರ, ಕಾಂಗ್ರೆಸ್ 21 ಕ್ಷೇತ್ರ ಮತ್ತು ಜೆಡಿಎಸ್ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಜೆಡಿಎಸ್ ಮತ್ತು ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಜಯಗಳಿಸಿವೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿ ಹೆಚ್ಚು ಸ್ಥಾನಗಳಿಸದಂತೆ ತಂತ್ರ ರೂಪಿಸಿದ್ದವು. ಆದರೆ, ಈ ತಂತ್ರ ಫಲ ನೀಡಿಲ್ಲ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.
ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಇಲ್ಲಿದೆ ಮಾಹಿತಿ
| ಲೋಕಸಭೆ ಚುನಾವಣೆ 2019 ಕರ್ನಾಟಕ: ಗೆದ್ದವರು, ಸೋತವರು | |||
| ಕ್ರ. ಸಂ | ಕ್ಷೇತ್ರ | ಗೆದ್ದವರು | ಸೋತವರು |
| 1 | ಕೋಲಾರ | ಸಿ.ಮನಿಸ್ವಾಮಿ (ಬಿಜೆಪಿ) | ಕೆ.ಎಚ್.ಮುನಿಯಪ್ಪ (ಮೈತ್ರಿಕೂಟ) |
| 2 | ದ. ಕನ್ನಡ | ನಳೀನ್ ಕುಮಾರ್ ಕಟೀಲ್ (ಬಿಜೆಪಿ) | ಮಿಥುನ್ ರೈ (ಮೈತ್ರಿಕೂಟ) |
| 3 | ಬಳ್ಳಾರಿ | ವೈ.ದೇವೇಂದ್ರಪ್ಪ (ಬಿಜೆಪಿ) | ವಿ.ಎಸ್.ಉಗ್ರಪ್ಪ (ಮೈತ್ರಿಕೂಟ) |
| 4 | ಉ.ಕನ್ನಡ | ಅನಂತ್ ಕುಮಾರ್ ಹೆಗಡೆ (ಬಿಜೆಪಿ) | ಆನಂದ್ ಆಸ್ನೋಟಿಕರ್ (ಮೈತ್ರಿಕೂಟ) |
| 5 | ಶಿವಮೊಗ್ಗ | ಬಿ.ವೈ.ರಾಘವೇಂದ್ರ (ಬಿಜೆಪಿ) | ಮಧು ಬಂಗಾರಪ್ಪ (ಮೈತ್ರಿಕೂಟ) |
| 6 | ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ (ಬಿಜೆಪಿ) | ಬಿ.ಕೆ.ಹರಿಪ್ರಸಾದ್ (ಮೈತ್ರಿಕೂಟ) |
| 7 | ವಿಜಯಪುರ | ರಮೇಶ್ ಜಿಗಜಿಣಗಿ (ಬಿಜೆಪಿ) | ಸುನೀತಾ ದೇವಾನಂದ ಚೌವ್ಹಾಣ್ (ಮೈತ್ರಿಕೂಟ) |
| 8 | ಧಾರವಾಡ | ಪ್ರಹ್ಲಾದ್ ಜೋಶಿ (ಬಿಜೆಪಿ) | ವಿನಯ್ ಕುಲಕರ್ಣಿ (ಮೈತ್ರಿಕೂಟ) |
| 9 | ಕೊಪ್ಪಳ | ಕರಡಿ ಸಂಗಣ್ಣ (ಬಿಜೆಪಿ) | ರಾಘವೇಂದ್ರ ಹಿಟ್ನಾಳ್ (ಮೈತ್ರಿಕೂಟ) |
| 10 | ಚಿತ್ರದುರ್ಗ | ಎ.ನಾರಾಯಣಸ್ವಾಮಿ (ಬಿಜೆಪಿ) | ಬಿ.ಎನ್.ಚಂದ್ರಪ್ಪ (ಮೈತ್ರಿಕೂಟ) |
| 11 | ಚಿಕ್ಕೋಡಿ | ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ) | ಪ್ರಕಾಶ್ ಹುಕ್ಕೇರಿ (ಮೈತ್ರಿಕೂಟ) |
| 12 | ಬೆಂಗಳೂರು ಉತ್ತರ | ಸದಾನಂದ ಗೌಡ (ಬಿಜೆಪಿ) | ಕೃಷ್ಣ ಬೈರೇಗೌಡ (ಮೈತ್ರಿಕೂಟ) |
| 13 | ಮೈಸೂರು-ಕೊಡಗು | ಪ್ರತಾಪ್ ಸಿಂಹ (ಬಿಜೆಪಿ) | ಸಿ.ಎಚ್.ವಿಜಯಶಂಕರ್ (ಮೈತ್ರಿಕೂಟ) |
| 14 | ಬಾಗಲಕೋಟೆ | ಪಿ.ಸಿ.ಗದ್ದಿಗೌಡರ್ (ಬಿಜೆಪಿ) | ವೀಣಾ ಕಾಶಪ್ಪನವರ್ (ಮೈತ್ರಿಕೂಟ) |
| 15 | ತುಮಕೂರು | ಜಿ.ಎಸ್.ಬಸವರಾಜು (ಬಿಜೆಪಿ) | ಎಚ್.ಡಿ.ದೇವೇಗೌಡ (ಮೈತ್ರಿಕೂಟ) |
| 16 | ಉಡುಪಿ-ಚಿಕ್ಕಮಗಳೂರು | ಶೋಭಾ ಕರಂದ್ಲಾಜೆ (ಬಿಜೆಪಿ) | ಪ್ರಮೋದ್ ಮಧ್ವರಾಜ್ (ಮೈತ್ರಿಕೂಟ) |
| 17 | ಬೆಳಗಾವಿ | ಸುರೇಶ್ ಅಂಗಡಿ (ಬಿಜೆಪಿ) | ಡಾ.ವಿ.ಎಸ್. ಸಾಧುನವರ(ಕಾಂಗ್ರೆಸ್) |
| 18 | ಚಿಕ್ಕಬಳ್ಳಾಪುರ | ಬಿ.ಎನ್.ಬಚ್ಚೇಗೌಡ (ಬಿಜೆಪಿ) | ವೀರಪ್ಪ ಮೊಯ್ಲಿ (ಮೈತ್ರಿಕೂಟ) |
| 19 | ಗುಲ್ಬರ್ಗ | ಡಾ.ಉಮೇಶ್ ಜಾಧವ್ (ಬಿಜೆಪಿ) | ಮಲ್ಲಿಕಾರ್ಜುನ ಖರ್ಗೆ (ಮೈತ್ರಿಕೂಟ) |
| 20 | ಬೀದರ್ | ಭಗವಂತ ಖೂಬಾ (ಬಿಜೆಪಿ) | ಈಶ್ವರ ಖಂಡ್ರೆ (ಮೈತ್ರಿಕೂಟ) |
| 21 | ಹಾವೇರಿ | ಶಿವಕುಮಾರ ಉದಾಸಿ (ಬಿಜೆಪಿ) | ಡಿ.ಆರ್.ಪಾಟೀಲ (ಮೈತ್ರಿಕೂಟ) |
| 22 | ಬೆಂಗಳೂರು ಕೇಂದ್ರ | ಪಿ.ಸಿ.ಮೋಹನ್ (ಬಿಜೆಪಿ) | ರಿಜ್ವಾನ್ ಅರ್ಷದ್ (ಮೈತ್ರಿಕೂಟ) |
| 23 | ಚಾಮರಾಜನಗರ | ವಿ.ಶ್ರೀನಿವಾಸ ಪ್ರಸಾದ್ (ಬಿಜೆಪಿ) | ಧ್ರುವ ನಾರಾಯಣ (ಮೈತ್ರಿಕೂಟ) |
| 24 | ದಾವಣಗೆರೆ | ಜಿ.ಎಂ.ಸಿದ್ದೇಶ್ವರ (ಬಿಜೆಪಿ) | ಎಚ್.ಬಿ.ಮಂಜಪ್ಪ (ಮೈತ್ರಿಕೂಟ) |
| 25 | ರಾಯಚೂರು | ರಾಜಾ ಅಮರೇಶ ನಾಯಕ್ (ಬಿಜೆಪಿ) | ಬಿ.ವಿನಾಯಕ್ (ಮೈತ್ರಿಕೂಟ) |
| 26 | ಬೆಂಗಳೂರು ಗ್ರಾಮಾಂತರ | ಡಿ.ಕೆ.ಸುರೇಶ್ (ಮೈತ್ರಿಕೂಟ) | ಅಶ್ವಥ್ ನಾರಾಯಣ್ (ಬಿಜೆಪಿ) |
| 27 | ಮಂಡ್ಯ | ಸುಮಲತಾ (ಪಕ್ಷೇತರ) | ನಿಖಿಲ್ (ಮೈತ್ರಿಕೂಟ) |
| 28 | ಹಾಸನ | ಪ್ರಜ್ವಲ್ ರೇವಣ್ಣ (ಮೈತ್ರಿಕೂಟ) | ಎ.ಮಂಜು (ಬಿಜೆಪಿ) |












Click it and Unblock the Notifications