ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಿ ಜಗನ್ನಾಥ ರಥಯಾತ್ರೆ ವಿಶೇಷತೆಯ ಜೊತೆ ವೇಳಾಪಟ್ಟಿ ಮಾಹಿತಿ

|
Google Oneindia Kannada News

ಪುರಿ, ಜುಲೈ 09: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ನಡುವೆ 2021ನೇ ಸಾಲಿನ ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ನಡೆಸುವುದಕ್ಕೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಡಿಶಾದ ಪುರಿಯಲ್ಲಿ ಇರುವ ಜಗನ್ನಾಥ ದೇವಸ್ಥಾನದ ಮಂಡಳಿ ನಡೆಸುವ ರಥಯಾತ್ರೆಗೆ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

ಜುಲೈ 12ರ ಸೋಮವಾರ ಆರಂಭಗೊಳ್ಳಲಿರುವ ಪುರಿ ಜಗನ್ನಾಥ ರಥಯಾತ್ರೆ ವೇಳೆ ಪ್ರಮುಖವಾಗಿ ಮೂರು ದೇವರುಗಳನ್ನು ಪೂಜಿಸಲಾಗುತ್ತದೆ. ಜಗನ್ನಾಥ ಸ್ವಾಮಿಯ ಸಹೋದರ ಭಗವಾನ್ ಬಾಲಚಂದ್ರ, ಸಹೋದರಿ ಸುಭದ್ರ ಹಾಗೂ ಜಗನ್ನಾಥ ಸ್ವಾಮಿಯನ್ನು ಆರಾಧಿಸಲಾಗುತ್ತದೆ.

ಪುರಿ ಜಗನ್ನಾಥ ರಥಯಾತ್ರೆ:ಮಾರ್ಗಸೂಚಿ ಬಿಡುಗಡೆಪುರಿ ಜಗನ್ನಾಥ ರಥಯಾತ್ರೆ:ಮಾರ್ಗಸೂಚಿ ಬಿಡುಗಡೆ

ಹಿಂದೂ ಸಂಪ್ರದಾಯದ ಪ್ರಕಾರ, ಆಷಾಢ ಮಾಸ ದ್ವಿತೀಯ ತಿಥಿಯ ಶುಕ್ಲ ಪಕ್ಷದಂದು ರಥಯಾತ್ರೆಯನ್ನು ಆರಂಭಿಸಲಾಗುತ್ತದೆ. ಕ್ಯಾಲೆಂಡರ್ ಪ್ರಕಾರ ಉಲ್ಲೇಖಿಸುವುದಾದರೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಈ ರಥಯಾತ್ರೆಯನ್ನು ನಡೆಸಲಾಗುತ್ತದೆ. ಈ ಬಾರಿ ಜಗನ್ನಾಥ ರಥಯಾತ್ರೆ ಕುರಿತು ವೇಳಾ ಪಟ್ಟಿಯ ಜೊತೆ ಆಚರಣೆ ಹಾಗೂ ಅದರ ವಿಶೇಷತೆಯನ್ನು ತಿಳಿಯೋಣ.

ದಿನಾಂಕ: ಜುಲೈ 12ರ ಸೋಮವಾರ, ಗುಂಡಿಚಾ ಯಾತ್ರೆ

ದಿನಾಂಕ: ಜುಲೈ 12ರ ಸೋಮವಾರ, ಗುಂಡಿಚಾ ಯಾತ್ರೆ

ಒರಿಯಾದಲ್ಲಿ ಗುಂಡಿ ಎಂದರೆ ಸಿಡುಬು, ಗುಂಡಿಚಾ ಅವರನ್ನು ಕೃಷ್ಣ-ಜಗನ್ನಾಥನ ಚಿಕ್ಕಮ್ಮ ಎಂದು ಪರಿಗಣಿಸಲಾಗುತ್ತದೆ. ಅವರು ವರ್ಷದಲ್ಲಿ ಒಂದು ಬಾರಿ ತಮ್ಮ ಒಡಹುಟ್ಟಿದವರ ಸನ್ನಿಧಿಗೆ ಭೇಟಿ ನೀಡುತ್ತಾರೆ ಎಂಬ ಸಂಪ್ರದಾಯವಿದೆ.

* ಬೆಳಗ್ಗೆ 8.30ಕ್ಕೆ ಗರ್ಭಗುಡಿಯಲ್ಲಿನ ಮೂರ್ತಿಗಳನ್ನು ನಿಧಾನವಾಗಿ ರಥಗಳತ್ತ ತೆಗೆದುಕೊಂಡು ಹೋಗಲಾಗುತ್ತದೆ.

* ಮಧ್ಯಾಹ್ನ 2 ಗಂಟೆಗೆ ಮೂರ್ತಿಗಳನ್ನು ರಥದಲ್ಲಿ ಇರಿಸಿ ಪೂಜಿಸಲಾಗುತ್ತದೆ.

* ಮಧ್ಯಾಹ್ನ 3 ಗಂಟೆಗೆ ರಥಯಾತ್ರೆ ಎಳೆಯುವುದಕ್ಕೆ ಆರಂಭಿಸಲಾಗುತ್ತದೆ.

ದಿನಾಂಕ: ಜುಲೈ 20ರ ಮಂಗಳವಾರ, ಬಹುದ ಯಾತ್ರೆ

ದಿನಾಂಕ: ಜುಲೈ 20ರ ಮಂಗಳವಾರ, ಬಹುದ ಯಾತ್ರೆ

ವಾರ್ಷಿಕ ರಥಯಾತ್ರೆಯ ನಂತರ ಪುರಿ ಜಗನ್ನಾಥ ದೇವಸ್ಥಾನಕ್ಕೆ ಮರಳುವುದನ್ನೇ ಬಹುದ ಯಾತ್ರೆ, ಬುಧಿ ಯಾತ್ರಾಯನ್ನು ಭಕ್ತರ ಅನುಪಸ್ಥಿತಿಯಲ್ಲಿ ಪುರಿಯಲ್ಲಿ ಆಚರಣೆ ಮಾಡಲಾಗುತ್ತದೆ.

* ಮಧ್ಯಾಹ್ನ 12 ರಿಂದ 2.30ರವರೆಗೂ ಮೂರ್ತಿಗಳನ್ನು ಪೂಜಿಸಿ ರಥದತ್ತ ತೆಗೆದುಕೊಂಡು ಬರಲಾಗುತ್ತದೆ

* ಮಧ್ಯಾಹ್ನ 4 ಗಂಟೆಗೆ ರಥ ಎಳೆಯುವ ಕಾರ್ಯವನ್ನು ಆರಂಭಿಸಲಾಗುತ್ತದೆ

ದಿನಾಂಕ: ಜುಲೈ 21ರ, ಸುನಾ ಬೇಷ ಆಚರಣೆ

ದಿನಾಂಕ: ಜುಲೈ 21ರ, ಸುನಾ ಬೇಷ ಆಚರಣೆ

ಸುನಾ ಮತ್ತು ಬೆಷ ಎಂಬ ಎರಡು ಪದಗಳಿಂದ ಹುಟ್ಟಿಕೊಂಡಿದೆ ಈ ಹೆಸರು ಹುಟ್ಟಿಕೊಂಡಿದೆ. 'ಸುನಾ' ಎಂದರೆ "ಚಿನ್ನ" ಮತ್ತು "ಬೆಷಾ" ಎಂದರೆ "ವೇಷಭೂಷಣ". ಸಿಂಹದ್ವಾರ ಎಂದೂ ಕರೆಯಲ್ಪಡುವ ರಥಗಳ ಮೇಲೆ ರಥಯಾತ್ರೆಯ ಸಮಯದಲ್ಲಿ ಬಹೂದ ಏಕಾದಶಿಯಂದು ಸುನೇಶಾ ವೇಳೆಯಲ್ಲಿ ಆಚರಿಸಲಾಗುತ್ತದೆ.

* ಸಂಜೆ 4 ರಿಂದ 5.30ರವರೆಗೂ ಈ ರಥಯಾತ್ರೆಯನ್ನು ನಡೆಸಲಾಗುತ್ತದೆ.

ದಿನಾಂಕ: ಜುಲೈ 22ರ ಆಧಾರ್ ಪಣ

ದಿನಾಂಕ: ಜುಲೈ 22ರ ಆಧಾರ್ ಪಣ

ಅಧಾರ್ ಎಂದರೆ ತುಟಿ ಮತ್ತು ಪನಾ ಎಂದರೆ ಜ್ಯೂಸ್ ಎಂದು ಅನುವಾದಿಸಲಾಗುತ್ತದೆ. ಇದನ್ನು ಅಸಾಧಾ ಸುಕ್ಲಾ ಪಖ್ಯಾ ದ್ವಾದಶಿಯಲ್ಲಿ ನಡೆಸಲಾಗುತ್ತದೆ. ಇದು 12ನೇ ಶತಮಾನದ ಆಚರಣೆಯಾಗಿದೆ. ದೇಗುಲದ ಸಿಂಹದ್ವಾರದ ಬಳಿ ನಿಲ್ಲಿಸಲಾಗಿರುವ ಪ್ರತಿ ರಥಗಳ ಮೇಲೆ ಮಣ್ಣಿನ ಮಡಕೆಗಳನ್ನು ಇರಿಸಲಾಗುತ್ತದೆ. ಇದರಲ್ಲಿನ ಹಣ್ಣಿನ ರಸವು ದೇವರಿಗೆ ತಲುಪುತ್ತದೆ ಎಂದು ನಂಬಲಾಗುತ್ತದೆ.

* ಗುರುವಾರ ರಾತ್ರಿ 8 ಗಂಟೆ ವೇಳೆಗೆ ಆಚರಣೆ ಪೂರ್ಣಗೊಳ್ಳುತ್ತದೆ.

Recommended Video

9 ತಿಂಗಳ ಬಳಿಕ ದರ್ಶನ ನೀಡಿದ ಪುರಿ ಜಗನ್ನಾಥ ! | Oneindia Kannada
ದಿನಾಂಕ ಜುಲೈ 23ರ ರಥಯಾತ್ರೆಯ ಅಂತಿಮ ದಿನ

ದಿನಾಂಕ ಜುಲೈ 23ರ ರಥಯಾತ್ರೆಯ ಅಂತಿಮ ದಿನ

ನೀಲಾದ್ರಿ ಬಿಜೆ ರಥಯಾತ್ರೆಯ ಮುಕ್ತಾಯದ ದಿನ. ಈ ದಿನ ದೇವತೆಗಳು ರತ್ನ ಬೇಡಿಗೆ ಮರಳುತ್ತಾರೆ. ಅಂದು ದೇವಾಲಯಕ್ಕೆ ಪ್ರವೇಶಿಸಲು ಲಕ್ಷ್ಮಿ ದೇವಿಗೆ ಭಗವಾನ್ ಜಗನ್ನಾಥ್ ರಸ್ಗುಲ್ಲನನ್ನು ಅರ್ಪಿಸುತ್ತಾನೆ ಎಂಬ ನಂಬಿಕೆಯಿದೆ.

ಶುಕ್ರವಾರ ಸಂಜೆ 4 ರಿಂದ ರಾತ್ರಿ 10 ಗಂಟೆವರೆಗೂ ಈ ಆಚರಣೆ ನಡೆಯುತ್ತದೆ.

English summary
Jagannath Puri Rath Yatra 2021: Date, Tithi, Rituals, Chariot Names And Complete Schedule Read Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X