ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಹೆ: ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿ ನೀಡುವ ಶುಂಠಿ ಕಷಾಯ

By ಮನಸ್ವಿನಿ, ನಾರಾವಿ
|
Google Oneindia Kannada News

ಕೊರೊನಾವೈರಸ್ ರೂಪಾಂತರ ಓಮಿಕ್ರಾನ್ ಸೋಂಕನ್ನು ತಡೆಗಟ್ಟುವುದು ಖಂಡಿತವಾಗಿಯೂ ಸುಲಭದ ಕೆಲಸವಲ್ಲ. ತಜ್ಞರು ತಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಲಹೆ ನೀಡುತ್ತಿದ್ದಾರೆ. ಲಸಿಕೆ ಎರಡು ಡೋಸ್, ಬೂಸ್ಟರ್ ನಡುವೆಯೂ ಸೋಂಕು ಹಬ್ಬುತ್ತಿದೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ನಮ್ಮ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಈಗ ಅತ್ಯಗತ್ಯ, ಅನಿವಾರ್ಯ.

ನಮ್ಮಲ್ಲಿ ಅನೇಕರು ಕೆಲಸದ ಒತ್ತಡ, ಸಮಯೋಚಿತ ಮತ್ತು ಪೌಷ್ಟಿಕಾಂಶದ ಊಟವನ್ನು ಸೇವಿಸದಿರುವುದು ಮತ್ತು ತಡವಾಗಿ ನಿದ್ದೆ ಮಾಡುವುದು, ದೀರ್ಘಕಾಲಿಕ ದೈಹಿಕ ಸಮಸ್ಯೆ ಮುಂತಾದ ಕಾರಣಗಳಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ.

ನಮ್ಮ ಜೀವನಶೈಲಿಯಲ್ಲಿ ಸರಿಯಾದ ಬದಲಾವಣೆ ಜೊತೆಗೆ, ಶಕ್ತಿಯುತವಾದ ಪ್ರತಿರೋಧಕಗಳನ್ನು ಹೊಂದಿರುವ ಆಹಾರಗಳನ್ನು ಸೂಕ್ತವಾಗಿ ಸೇವಿಸುವ ಮೂಲಕ ನಮ್ಮ ಉಸಿರಾಟದ ವ್ಯವಸ್ಥೆ ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

ಸಾರ್ವಜನಿಕರು ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಸಾಮಾನ್ಯ ಶೀತ, ಕೆಮ್ಮು, ಜ್ವರದಿಂದ ಮುಕ್ತಿ ಹೊಂದಬಹುದು. ವೈರಸ್‌ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ.

ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ ರೋಗಿಯ ದೇಹ ಹೊಕ್ಕಿದ ಒಂದು ವಾರದಲ್ಲೇ ತಾನೆ ತಾನಾಗಿ ನಾಶವಾಗುತ್ತದೆ. ಅಥವಾ ತೆಗೆದುಕೊಳ್ಳುವ ಚಿಕಿತ್ಸೆ, ಆಹಾರ ಕ್ರಮದ ಮೇಲೆ ಶೀತ ಯಾವಾಗ ಕಡಿಮೆಯಾಗುತ್ತದೆ ಎಂಬುದು ನಿರ್ಧಾರವಾಗಲಿದೆ. ಆದರೆ, ಸಾರ್ಸ್ ಮಾದರಿ ಕೊರೊನಾವೈರಸ್‌ನಿಂದ ಹರಡುವ ಕೊವಿಡ್ 19 ರೋಗದ ವೈರಸ್ ತಾನಾಗೇ ಸಾಯುವುದಿಲ್ಲ.

Immunity Boosting Ginger Drink other dietary tips to fight Omicron covid variant in kannada

ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಶುಂಠಿ ಬಳಕೆ ಹೇಗೆ?

ಶುಂಠಿ: ಶುಂಠಿಯಲ್ಲಿ ಅನೇಕ ಆಂಟಿ-ವೈರಲ್ ಅಂಶಗಳಿವೆ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವಿಧಾನ:
ಒಂದೂವರೆ ಟೀ ಚಮಚ ಶುಂಠಿರಸ
ಒಂದು ಟೀ ಚಮಚ ನಿಂಬೆರಸ
ಒಂದು ಟೀ ಚಮಚ ಪುದೀನ ರಸ
ಒಂದು ಟೀ ಚಮಚ ಜೇನುತುಪ್ಪ ಸೇರಿಸಿ, ಚೆನ್ನಾಗಿ ಕಲಸಿ, ಮೂರು ಭಾಗ ಮಾಡಿ, ಮೂರು ಬಾರಿ ಸೇವಿಸಿದರೆ, ಶ್ವಾಸಕೋಶ ಸಂಬಂಧಿ ರೋಗ, ಸೋಂಕು ನಿವಾರಣೆ, ಸ್ವರ ಭೇದ, ಅಜೀರ್ಣ, ಕೆಮ್ಮು ನಿವಾರಣೆಯಾಗುತ್ತದೆ.

ಕೋವಿಡ್‌ಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಹೇಗೆ?: ಇಲ್ಲಿದೆ ಕೆಲವು ಟಿಪ್ಸ್‌ಕೋವಿಡ್‌ಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಹೇಗೆ?: ಇಲ್ಲಿದೆ ಕೆಲವು ಟಿಪ್ಸ್‌

***
ಒಂದು ಸಣ್ಣ ತುಂಡು ಹಸಿಶುಂಠಿಯನ್ನು ಒಂದೂವರೆ ಕಪ್ ಶುದ್ಧವಾದ ನೀರಿನಲ್ಲಿ 15 ರಿಂದ 20 ನಿಮಿಷ ಕುದಿಸಿ, ಅಗತ್ಯವಿದ್ದರೆ ಒಂದು ಚಿಕ್ಕ ತುಂಡು ಕೆಂಪು ಕಲ್ಲು ಸಕ್ಕರೆ ಬೆರೆಸಬಹುದು. ಒಂದು ಕಪ್ ಹದಕ್ಕೆ ನೀರು ಕುದಿಸಿದ ಬಳಿಕ ಕೆಳಗಿಳಿಸಿ... ಕುದಿಯುವ ಹದಕ್ಕೆ ಬಂದ ಬಳಿಕ ದಿನಕ್ಕೆ ಮೂರು ಬಾರಿ ಕುಡಿಯುರಿ.

ಇದೇ ವಿಧಾನದಲ್ಲಿ ಲವಂಗ (10-12) ಕೂಡಾ ಕುದಿಸಿ ದಿನಕ್ಕೆ ಮೂರು ಬಾರಿ ಸೇವಿಸಬಹುದು, ಇದು ಕೂಡಾ ಶ್ವಾಸ ಸಂಬಂಧಿ ಸಮಸ್ಯೆಗೆ ಸೂಕ್ತ ಕಷಾಯ ಎನಿಸಿದೆ.
**
ಒಂದು ತುಂಡು ಶುಂಠಿ, ಒಂದು ಲವಂಗ, ಒಂದು ಸಣ್ಣ ಹರಳು ಉಪ್ಪು ಇವುಗಳನ್ನು ಬಾಯಲ್ಲಿ ಇಟ್ಟುಕೊಂಡು ಬರುವ ಲಾಲಾರಸವನ್ನು ಸೇವಿಸುವುದರಿಂದ ಕೆಮ್ಮು, ಗಂಟಲ ಕೆರೆತ ಕಡಿಮೆಯಾಗುತ್ತದೆ. ಶುಂಠಿ, ಲವಂಗ, ಹರಳು ಉಪ್ಪು ಸಮ ಪ್ರಮಾಣದಲ್ಲಿ ಜಜ್ಜಿ ಬೇಕಾದರೂ ಬಾಯಲ್ಲಿ ಇಟ್ಟುಕೊಳ್ಳಬಹುದು.

ಶುಂಠಿ ಬೆಳೆಯುವ ರೈತರಿಗೆ ವೈಜ್ಞಾನಿಕ ಸಲಹೆಗಳು
**
ಶುಂಠಿ ಅರೆದು ಬರುವ ಗಂಧವನ್ನು ಹಣೆಗೆ ಲೇಪಿಸಿದರೆ ತಲೆ ನೋವು ನಿವಾರಣೆಯಾಗುತ್ತದೆ.
**
ಹಸಿ ಶುಂಠಿ ಸಣ್ಣ ತುಂಡು ಹಾಗೂ ಅರ್ಧ ಚಮಚ ಸಕ್ಕರೆ ಬಾಯಲ್ಲಿ ಹಾಕಿಕೊಂಡು ಜಗಿಯುವುದರಿಂದ ಗಂಟಲು ನೋವು ಪರಿಹಾರವಾಗುತ್ತದೆ.
**
ಒಣ ಶುಂಠಿ ಪುಡಿ ಹಾಗೂ ಬೆಲ್ಲ ಸಮ ಪ್ರಮಾಣದಲ್ಲಿ ಸೇವಿಸಿದರೆ ಅಜೀರ್ಣದಿಂದ ಉಂಟಾದ ಭೇದಿ ನಿಯಂತ್ರಿಸಬಹುದು.
***
ಆಯುರ್ವೇದ ಪ್ರಕಾರ ಶುಂಠಿಯನ್ನು 'ವಿಶ್ವಭೇಷಜ', 'ಮಹಾ ಔಷಧಿ' ಎಂದು ಕರೆಯಲಾಗುತ್ತದೆ. ವಿಶ್ವದೆಲ್ಲೆಡೆ ಸುಲಭಕ್ಕೆ ಸಿಗುವ ಶುಂಠಿ ಮನೆ ಔಷಧಿ ತಯಾರಿಯಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತದೆ. ಅಜೀರ್ಣ, ವಾಯು, ವಾಕರಿಕೆ, ಜಠರದ ಸೋಂಕು ನಿವಾರಿಸುತ್ತದೆ. ಊಟಕ್ಕೂ ಮೊದಲು ತುಸು ಉಪ್ಪು ಶುಂಠಿ ಜಗಿದರೆ ಅಜೀರ್ಣವಾಗುವುದಿಲ್ಲ ಎಂದು ಡಾ. ಜಯಪ್ರಕಾಶ್ ನಾರಾಯಣ್ ಹೇಳಿದ್ದಾರೆ.

Recommended Video

ಪಟ್ಟ ಕಳೆದುಕೊಂಡ Kohliಗೆ ಜಾಹೀರಾತು ಕಂಪನಿಗಳಿಂದ ಬಿಗ್ ಶಾಕ್!! | Oneindia Kannada

English summary
Preventing infection from Omicron variant that is known to evade immunity from vaccine and past infections is certainly not an easy task. Here is Immunity Boosting Drink Ginger Drink (Kashaya) to fight Omicron covid variant in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X