• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಎರಡೂ ಪಡೆಯಲು ಸಾಧ್ಯವಾ?

|
Google Oneindia Kannada News

ಜನರ ಸಾಮಾಜಿಕ ಭದ್ರತೆಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೆಲ ಯೋಜನೆಗಳಲ್ಲಿ ಸರಕಾರವೇ ಉಚಿತವಾಗಿ ಹಣದ ನೆರವು ಒದಗಿಸುತ್ತದೆ. ಅಂಥ ಕೆಲ ಯೋಜನೆಗಳಲ್ಲಿ ಪಿಎಂ ಕಿಸಾನ್, ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಇತ್ಯಾದಿ ಇವೆ.

ವೃದ್ಧರಿಗೆಂದು ವೃದ್ಧಾಪ್ಯ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ ಇತ್ಯಾದಿಗಳಿವೆ. 60 ವರ್ಷ ದಾಟಿದ ವ್ಯಕ್ತಿಗಳೆಲ್ಲರಿಗೂ ವೃದ್ಧಾಪ್ಯ ವೇತನ ಉಚಿತವಾಗಿ ಸಿಗುತ್ತದೆ. ಆದರೆ, 60 ವರ್ಷದ ದಾಟಿದ ವಿಧವೆಯರು ವಿಧವಾ ಪಿಂಚಣಿ ಮತ್ತು ವೃದ್ಧಾಪ್ಯ ಪಿಂಚಣಿ ಎರಡನ್ನು ಪಡೆಯಲು ಸಾಧ್ಯವಾ ಎಂಬುದು ಪ್ರಶ್ನೆ.

ಸಂಧ್ಯಾ ಸುರಕ್ಷಾ ಯೋಜನೆ- ಪ್ರಯೋಜನ, ಅರ್ಜಿ, ಅರ್ಹತೆ ಇತ್ಯಾದಿ ಮಾಹಿತಿಸಂಧ್ಯಾ ಸುರಕ್ಷಾ ಯೋಜನೆ- ಪ್ರಯೋಜನ, ಅರ್ಜಿ, ಅರ್ಹತೆ ಇತ್ಯಾದಿ ಮಾಹಿತಿ

ಆದರೆ, ಸರಕಾರದ ನಿಯಮಗಳ ಪ್ರಕಾರ, ಒಬ್ಬರೇ ವ್ಯಕ್ತಿ ಈ ಎರಡೂ ಯೋಜನೆಗಳ ಲಾಭ ಪಡೆಯಲು ಬರುವುದಿಲ್ಲ. ವಿಧವಾ ಪಿಂಚಣಿಯನ್ನು 18 ವರ್ಷದಿಂದ 60 ವರ್ಷ ವಯಸ್ಸಿನ ವಿಧವೆಯರಿಗೆ ನೀಡಲಾಗುತ್ತದೆ. 60 ವರ್ಷ ದಾಟಿದ ಬಳಿಕ ಅವರಿಗೆ ವಿಧವಾ ಪಿಂಚಣಿ ನಿಂತು ಹೋಗುತ್ತದೆ. ಆ ಬಳಿಕ ಅವರು ವೃದ್ಧಾಪ್ಯ ಪಿಂಚಣಿಗೆ ಅರ್ಜಿ ಸಲ್ಲಿಸಬಹುದು.

ವೃದ್ಧಾಪ್ಯ ಪಿಂಚಣಿ ಪಡೆಯುವುದು ಹೇಗೆ?

ವೃದ್ಧಾಪ್ಯ ಪಿಂಚಣಿ ಪಡೆಯುವುದು ಹೇಗೆ?

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಜನರ ಸಂಖ್ಯೆ 60 ಲಕ್ಷ ಇರುವ ಅಂದಾಜು ಇದೆ. ಸರಕಾರ 58 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಗುರುತಿಸಿದೆ. ಇವರೆಲ್ಲರೂ ವೃದ್ದರಿಗಾಗಿ ಇರುವ ವಿವಿಧ ಪಿಂಚಣಿ ಯೋಜನೆಗಳಿಗೆ ಅರ್ಹರಾಗಿರುತ್ತಾರೆ.

ಸಂಧ್ಯಾ ಸುರಕ್ಷಾ ಯೋಜನೆ ಮತ್ತು ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ ಅಡಿಯಲ್ಲಿ 60 ರಿಂದ 64 ವರ್ಷದವರೆಗಿನ ವಯಸ್ಸಿನ ವೃದ್ಧರಿಗೆ 600 ರೂ ಹಾಗು 65 ವರ್ಷ ಮೇಲ್ಪಟ್ಟವರಿಗೆ 1200 ರೂ ಹಣವನ್ನು ಮಾಸಿಕವಾಗಿ ಒದಗಿಸಲಾಗುತ್ತದೆ. ಇಲ್ಲಿ ಬಡವರು ಬಲ್ಲಿದರು ಎಂಬ ಭೇದವಿಲ್ಲದೆ ಎಲ್ಲಾ ಹಿರಿಯ ನಾಗರಿಕರೂ ವೃದ್ಧಾಪ್ಯ ಯೋಜನೆಯ ಲಾಭ ಪಡೆಯಬಹುದಾಗಿದೆ.

ಅಲ್ಲದೇ, 60 ವರ್ಷ ಮೇಲ್ಪಟ್ಟ ವಯಸ್ಸಿನ ವೃದ್ಧರು ಹಿರಿಯ ನಾಗರಿಕರ ಗುರುತಿನ ಕಾರ್ಡ್ ಪಡೆಯಬಹುದು. ಸರಕಾರಿ ಬಸ್ಸುಗಳಲ್ಲಿ ಇವರಿಗೆ ರಿಯಾಯಿತಿ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ರೈಲು ಮತ್ತು ವಿಮಾನ ಪ್ರಯಾಣದಲ್ಲೂ ರಿಯಾಯಿತಿ ನೀಡಲಾಗುತ್ತದೆ.

ವೃದ್ಧಾಶ್ರಮ, ಆರೋಗ್ಯ ಸೇವೆ ಇತ್ಯಾದಿ ಅನೇಕ ಸೌಲಭ್ಯಗಳು ಹಿರಿಯ ನಾಗರಿಕರಿಗೆ ಸಿಗುತ್ತವೆ. ಆದರೆ, ವೃದ್ಧಾಪ್ಯ ಯೋಜನೆಯಲ್ಲಿ ತಿಂಗಳಿಗೆ ಬರುವ 1200 ರೂ ಸಹಾಯಧನ ಎಲ್ಲಾ ಹಿರಿಯ ನಾಗರಿಕರಿಗೂ ಸಿಗುತ್ತಿದ್ದು, ಇದು ಅತ್ಯಂತ ಜನಪ್ರಿಯ ಮತ್ತು ಜನೋಪಯೋಗಿ ಯೋಜನೆಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಶ್ರೀಲಂಕಾ ಬಂದರಿನಲ್ಲಿ ಬಂದು ನಿಂತ ಚೀನಾ ಹಡಗಿನ ಕಣ್ಣು ಭಾರತದ ಕಡೆಗೆ!?ಶ್ರೀಲಂಕಾ ಬಂದರಿನಲ್ಲಿ ಬಂದು ನಿಂತ ಚೀನಾ ಹಡಗಿನ ಕಣ್ಣು ಭಾರತದ ಕಡೆಗೆ!?

ವೃದ್ಧಾಪ್ಯ ಪಿಂಚಣಿಗೆ ಅರ್ಜಿ ಸಲ್ಲಿಸುವುದು ಹೇಗೆ?

ವೃದ್ಧಾಪ್ಯ ಪಿಂಚಣಿಗೆ ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಮನೆಯ ಸಮೀಪದ ಬೆಂಗಳೂರು ಒನ್ ಅಥವಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಅರ್ಜಿ ವೃದ್ಧಾಪ್ಯ ಪಿಂಚಣಿಗೆ ಅರ್ಜಿ ಸಲ್ಲಿಸಬಹುದು. ಅಥವಾ ಜನಸೇವಕ ಯೋಜನೆ ಅಡಿ ನಿಮ್ಮ ಮನೆಬಾಗಿಲಿಗೆ ಸಿಬ್ಬಂದಿಯನ್ನು ಕರೆಯಿಸಿ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಕಾರ್ಡ್
ಬ್ಯಾಂಕ್ ಪಾಸ್‌ಬುಕ್
ಫೋಟೋ

ವಿಧವಾ ಪಿಂಚಣಿ

ವಿಧವಾ ಪಿಂಚಣಿ

18 ವರ್ಷ ದಾಟಿದ ವಿಧವೆಯರಿಗೆ ಈ ಪಿಂಚಣಿ ಸೌಲಭ್ಯ ಇದೆ. ಸರಕಾರದಿಂದ ತಿಂಗಳಿಗೆ 600 ರೂ ಸಹಾಯಧನ ಸಿಗುತ್ತದೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಅಡಿಯಲ್ಲಿ ನಿರ್ಗತಿಕ ವಿಧವಾ ಪಿಂಚಣಿ ಯೋಜನೆ ಜಾರಿಯಲ್ಲಿದೆ. ಇದನ್ನೂ ಕೂಡ ಜನಸೇವಕ ಯೋಜನೆ ಅಡಿ ಪಡೆಯಬಹುದು. ಸರಕಾರಿ ಕಚೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕವೂ ಪಿಂಚಣಿಗೆ ಅರ್ಜಿ ಹಾಕಬಹುದು.

ಇಲ್ಲಿ ಮದುವೆಯಾಗಿ ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ಯೋಜನೆ ಅನ್ವಯವಾಗುತ್ತದೆ. ಅದರೆ, ವಿಧವೆಯಾಗಿ ಮತ್ತೆ ಎರಡನೆ ಮದುವೆಯಾದವರಿಗೆ ಈ ಯೋಜನೆ ಅನ್ವಯ ಆಗಲ್ಲ.

ವಿಧವಾ ಪಿಂಚಣಿಗೆ ದಾಖಲೆಗಳು

ವಿಧವಾ ಪಿಂಚಣಿಗೆ ದಾಖಲೆಗಳು

* ಫೋಟೋ
* ಆಧಾರ್ ಕಾರ್ಡ್
* ವೋಟರ್ ಐಡಿ
* ವಯಸ್ಸಿನ ಪ್ರಮಾಣಪತ್ರ
* ವಿಧವಾ ಪ್ರಮಾಣಪತ್ರ
* ಬ್ಯಾಂಕ್ ಪಾಸ್‌ಬುಕ್

(ಒನ್ಇಂಡಿಯಾ ಸುದ್ದಿ)

English summary
Central and state governments are providing support for widows, senior citizens through their various schemes. Can a single person get both old age pension and Widow pension?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X