• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀಲಿ ನಿಲುವಂಗಿ, ಕೈ ಹಾಗೂ ಸೊಂಟದಲ್ಲಿ ಹರಿತವಾದ ಅಸ್ತ್ರ ಈ ನಿಹಾಂಗ್‌ಗಳು ಯಾರು?

|
Google Oneindia Kannada News

ಚಂಡೀಗಢ, ಅಕ್ಟೋಬರ್ 16: ನಿಹಾಂಗ್ ಎಂಬುದು ಸಿಖ್ ತೀವ್ರವಾದಿ ಹೋರಾಟಗಾರರ ಗುಂಪು. ನೀಲಿ ನಿಲುವಂಗಿ, ಉಕ್ಕಿನ ಕೋಟ್​ ತೊಡುವ ಇವರು ಸದಾ ತಮ್ಮ ಬಳಿ ಕತ್ತಿ ಇಟ್ಟುಕೊಂಡಿರುತ್ತಾರೆ. ಅಲಂಕೃತ ಪೇಟಗಳನ್ನು ಧರಿಸಿರುತ್ತಾರೆ.

ನಿಹಾಂಗ್ ಭಾರತದಲ್ಲಿ ಹುಟ್ಟಿಕೊಂಡ ಸಶಸ್ತ್ರ ಸಿಖ್ ಯೋಧರ ಪಡೆ. ಈ ನಿಹಾಂಗ್‌ಗಳು ಫತೇಹ್ ಸಿಂಗ್, ಗುರು ಹರಗೋಬಿಂದ್ ಆರಂಭಿಸಿದ "ಅಕಾಲಿ" ಯಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ದೆಹಲಿಯಾಚೆಗಿನ ಸಿಂಘುಗಡಿಯಲ್ಲಿ ಇಂದು ನಡೆದ ಭೀಕರ ಕೊಲೆ ಪ್ರಕರಣದಲ್ಲಿ ಪಂಜಾಬ್‌ನ ನಿಹಾಂಗ್ ಸಿಖ್ಖರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ನಿಹಂಗ್ ಸಿಖ್ ಸಮುದಾಯದ ಕೆಲ ರೋಚಕ ಅಂಶಗಳು ಇಲ್ಲಿವೆ.

ಸಿಖ್ ಇತಿಹಾಸಕಾರ ಡಾ.ಬಲ್ವಂತ್ ಸಿಂಗ್ ಧಿಲ್ಲೋನ್ ಅವರು ತಮ್ಮ ಕೃತಿಯೊಂದರಲ್ಲಿ ಈ ನಿಹಾಂಗ್ ಸಿಖ್ಖರನ್ನು ಉಲ್ಲೇಖಿಸಿ ಬರೆದಿದ್ದಾರೆ. ಅದರಲ್ಲಿ ನಿಹಾಂಗ್ ಎಂದರೆ "ವ್ಯುತ್ಪತ್ತಿಯಲ್ಲಿ ಪರ್ಷಿಯನ್ ಭಾಷೆಯಲ್ಲಿ ನಿಹಾಂಗ್ ಎಂದರೆ ಮೊಸಳೆ, ಕತ್ತಿ ಮತ್ತು ಲೇಖನಿ ಎಂಬ ಅರ್ಥವಿದೆ. ಆದರೆ ನಿಹಂಕ್ ಎಂಬ ಪದ ನಿಶ್ಶಾಂಕ್ ಎಂಬ ಸಂಸ್ಕೃತ ಪದವನ್ನು ಹೋಲುತ್ತಿದ್ದು, ನಿಶ್ಮಾಂಕ್ ಎಂದರೆ ಭಯವಿಲ್ಲದ, ಕಳಂಕವಿಲ್ಲದ, ಶುದ್ಧ ಎಂದರ್ಥ. ಲೌಕಿಕ ಲಾಭಗಳು ಮತ್ತು ಸೌಕರ್ಯಗಳಿಗೆ ನಿರಾತಂಕ ಮತ್ತು ಅಸಡ್ಡೆಯ ವ್ಯಕ್ತಿ ಎಂಬ ಅರ್ಥ ಕೂಡ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ನೀಲಿ ನಿಲುವಂಗಿ, ಕೈಯಲ್ಲಿ- ಸೊಂಟದಲ್ಲಿ ಹರಿತವಾದ ಅಸ್ತ್ರ, ತಲೆಯಲ್ಲಿ ಪೇಟ ಇದು ನಿಹಾಂಗ್ ಸಿಖ್ಖರ ವೇಶಭೂಷಣ. ತಮ್ಮ ಈ ವಿಶೇಷ ವೇಷಭೂಷಣಗಳಿಂದಲೇ ನಿಹಾಂಗ್ ಸಿಖ್ಖರು ಎಲ್ಲರ ಗಮನ ಸೆಳೆಯುತ್ತಾರೆ. ಇವರಿಗೆ ತಮ್ಮ ಧರ್ಮ ಮತ್ತು ಧರ್ಮ ಗ್ರಂಥ ಎಂದರೆ ಅತೀವ ಗೌರವ, ಭಕ್ತಿ ಮತ್ತು ಪೂಜ್ಯನೀಯತೆ. ಹೀಗಾಗಿಯೇ ಅವರು ಇಂತಹ ಸೂಕ್ಷ್ಮ ವಿಚಾರಗಳಲ್ಲಿ ತುಂಬಾ ಕ್ರೂರವಾಗಿಯೇ ವರ್ತಿಸುತ್ತಾರೆ ಎಂಬ ಮಾತಿದೆ.

 ನಿಹಾಂಗ್‌ಗಳ ಪಾತ್ರ

ನಿಹಾಂಗ್‌ಗಳ ಪಾತ್ರ

ನಿಹಾಂಗ್ ಸಿಖ್ ಇತಿಹಾಸದಲ್ಲಿ ನಿಹಾಂಗ್‌ಗಳ ಪಾತ್ರ ಏನಿದೆ ಎಂಬುದನ್ನು ನೋಡೋಣ. ಅವರಿಲ್ಲದ ಸಿಖ್ ಇತಿಹಾಸ ಅಪೂರ್ಣ ಎಂದೇ ಹೇಳಬಹುದು. ಸಿಖ್ ಇತಿಹಾಸದಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದು, ಗುರುದ್ವಾರಗಳನ್ನು ರಕ್ಷಿಸಿದರು, ಜನರನ್ನು ರಕ್ಷಿಸಿದರು. 18 ನೇ ಶತಮಾನದ ಮಧ್ಯದಲ್ಲಿ ಅಫ್ಘಾನ್ ಆಕ್ರಮಣಕಾರ ಅಹ್ಮದ್ ಶಾ ಅಬ್ದಾಲಿಯ ಪುನರಾವರ್ತಿತ ದಾಳಿಯ ಸಂದರ್ಭದಲ್ಲಿ ಸಿಖ್ಖರನ್ನು ರಕ್ಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಅವರು ಮಹಾರಾಜ ರಂಜಿತ್ ಸಿಂಗ್ ಅವರ ಸೈನ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದರು. ಅವರು ಅಮೃತಸರದ ಅಕಲ್ ಬುಂಗಾದಲ್ಲಿ (ಸಿಖ್ಖರ ಧಾರ್ಮಿಕ ವ್ಯವಹಾರಗಳ ಮೇಲೆ ಹಿಡಿತ ಸಾಧಿಸಿದ್ದರು.

1849 ರಲ್ಲಿ, ಸಿಖ್ ಸಾಮ್ರಾಜ್ಯದ ಪತನದ ನಂತರ ಸಮುದಾಯದ ಮೇಲೆ ಅವರ ಶಕ್ತಿಯುತ ಹಿಡಿತ ಕಡಿಮೆಯಾಯಿತು ಎನ್ನಲಾಗಿದೆ.
 ಅಕಾಲಿ ಎಂದೂ ಕರೆಯುತ್ತಾರೆ

ಅಕಾಲಿ ಎಂದೂ ಕರೆಯುತ್ತಾರೆ

ಅಕಾಲಿಗಳು ಎಂದೂ ಕರೆಯಲ್ಪಡುವ ನಿಹಾಂಗ್‌ಗಳು, ಗಮನಾರ್ಹ ಸಂಖ್ಯೆಯ ಎದುರಾಳಿಗಳನ್ನು ಎದುರಿಸಿದಾಗಲೂ ಯುದ್ಧಗಳನ್ನು ಗೆದ್ದ ಗಮನಾರ್ಹ ಇತಿಹಾಸವನ್ನು ಹೊಂದಿದ್ದಾರೆ. ಅವರನ್ನು ಸಿಖ್ಖರ ಮಿಲಿಟರಿ ಪಡೆ ಎಂದೂ ಗೌರವಿಸಲಾಗುತ್ತದೆ.

ಪಂಜಾಬ್ ಇತಿಹಾಸದಲ್ಲಿ ಒಂದು ಪ್ರಸಿದ್ಧ ಮಾತಿದೆ. ಬಾಗಿಲಿನಲ್ಲಿ ನಿಹಾಂಗ್ ಯೋಧನಿದ್ದರೆ ಮನೆಯೊಳಗೆ ಮಹಿಳೆ ಸುರಕ್ಷಿತವಾಗಿದ್ದಾಳೆ ಎಂದೇ ಅರ್ಥ.. ಭಯವಿಲ್ಲದೇ ಬಾಗಿಲು ತೆರೆಯಿರಿ ಎಂದು ಹೇಳಲಾಗುತ್ತದೆ. ಇದು ಪಂಜಾಬಿನಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಸಿಖ್ ಸಮುದಾಯ ನಿಹಂಗ್‌ರಿಗೆ ಇಂಥದೊಂದು ಬಹುದೊಡ್ಡ ಗೌರವ ನೀಡುತ್ತಿದೆ. ಸಿಖ್ ಸಮುದಾಯದ ವಿಶ್ವಾಸ ಮತ್ತು ನಂಬಿಕೆಯನ್ನು ನಿಹಾಂಗ್ ಕಳೆದುಕೊಂಡಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಮೇಲಿನ ವಿಶ್ವಾಸ ಮತ್ತು ನಂಬಿಕೆಯ ಅಡಿಪಾಯ ಅಲುಗಾಡ ತೊಡಗಿದೆ.
 ಚೆಕ್‌ಪೋಸ್ಟ್‌ ಬಳಿ ಅಧಿಕಾರಿ ಕೈ ಕತ್ತರಿಸಿದ್ದರು

ಚೆಕ್‌ಪೋಸ್ಟ್‌ ಬಳಿ ಅಧಿಕಾರಿ ಕೈ ಕತ್ತರಿಸಿದ್ದರು

ಇದಕ್ಕೂ ಮೊದಲು 2020ರಲ್ಲಿ ಕೊರೊನಾ ಲಾಕ್ ಡೌನ್ ಹೇರಿದ್ದ ಸಂದರ್ಭದಲ್ಲಿ ಇದೇ ನಿಹಾಂಗ್ ಸಿಖ್ ಸಮುದಾಯಕ್ಕೆ ಸೇರಿದ್ದ ಇಬ್ಬರು ವ್ಯಕ್ತಿಗಳು ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ತಮ್ಮ ಕಾರಿಗೆ ದಾರಿ ಬಿಡಲಿಲ್ಲ ಎಂದು ಆಕ್ರೋಶಗೊಂಡು ಪೊಲೀಸ್ ಅಧಿಕಾರಿಯ ಕೈಯನ್ನೇ ಕತ್ತರಿಸಿ ಹಾಕಿದ್ದರು. ಈ ಘಟನೆ ಇಂದಿಗೂ ಹಸಿರಾಗಿಯೇ ಇದೆ. ಇದರ ನಡುವೆಯೇ ಇಂದು ಸಿಂಘು ಗಡಿಯಲ್ಲಿ ಪವಿತ್ರ ಗ್ರಂಥಕ್ಕೆ ಅಪಮಾನ ಮಾಡಿದ ಎಂದು ಆರೋಪಿಸಿ ಓರ್ವ ವ್ಯಕ್ತಿಯ ಕೈ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದರ ಹಿಂದೆಯೂ ನಿಹಂಗ್ ಸಿಖ್ಖರ ಪಾತ್ರವಿದೆ ಎಂದು ಹೇಳಲಾಗುತ್ತಿದೆ.

 ನಂಬಿಕೆ ಕಡಿಮೆಯಾಗುತ್ತಿದೆ

ನಂಬಿಕೆ ಕಡಿಮೆಯಾಗುತ್ತಿದೆ

ಕಳೆದ ಕೆಲವು ವರ್ಷಗಳಿಂದ ನಡೆದಿರುವ ಘಟನೆಗಳನ್ನು ನೋಡಿದರೆ ನಿಹಾಂಗ್ ಸಿಖ್ ಸಮುದಾಯದ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡಿದೆ. ಅದರಲ್ಲೂ ಪ್ರಮುಖವಾಗಿ ರೈತರ ಪ್ರತಿಭಟನೆ, ಕೆಂಪುಕೋಟೆಗೆ ಮುತ್ತಿಗೆ ಪ್ರಕರಣಗಳು ನಿಹಂಗ್ ರ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ದೆಹಲಿ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ ಮತ್ತು ಆ ಬಳಿಕ ಕೆಂಪುಕೋಟೆ ಮುತ್ತಿಗೆ ಸಂದರ್ಭದಲ್ಲಿ ತ್ರಿವರ್ಣಧ್ವಜವನ್ನು ಕೆಳಗಿಳಿಸಿ ಸಿಖ್ ಧ್ವಜ ಹಾರಿಸಿದ ಪ್ರಕರಣ ದೇಶದ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದೆ.

 ನಿಹಾಂಗ್ ಮುಖಂಡನ ಮಾತು

ನಿಹಾಂಗ್ ಮುಖಂಡನ ಮಾತು

ಸಿಂಘು ಗಡಿಯಲ್ಲಿ ನಡೆದ ಪ್ರತಿಭಟನೆ ವೇಳೆ ಇದೇ ನಿಹಾಂಗ್ ಸಿಖ್ ಮುಖಂಡನೋರ್ವ ಹೇಳಿದ್ದ ಮಾತು ವ್ಯಾಪಕ ವೈರಲ್ ಅಗಿತ್ತು. ನಮ್ಮ ಅಸ್ಥಿತ್ವಕ್ಕೆ ಧಕ್ಕೆ ಬಂದರೆ, ನಾವು ನಮ್ಮ ಸಹೋದರರನ್ನು ರಕ್ಷಿಸಲು ಮತ್ತು ಸಾಯಲು ಬಿಡಲು ಅಥವಾ ಕೊಲ್ಲಲು ಸಿದ್ಧರಿದ್ದೇವೆ. ಶಾಂತಿ, ನ್ಯಾಯ ಮತ್ತು ಘನತೆಗಾಗಿ ಈ ಹೋರಾಟ ನಡೆಸುತ್ತಿದ್ದೇವೆ. ತತ್ವಗಳ ಮೇಲೆ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

English summary
The killing of Lakhbir Singh, a Dalit labourer, near the farmers’ protest site on Haryana-Delhi Singhu border on Friday by a group of Nihang Sikhs has prompted outrage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X