"ಧುರಂಧರ್ 2" ನಿರ್ದೇಶಕ ಸೇಡು ತೀರಿಸಿಕೊಳ್ಳುವ ಆವೇಶದಲ್ಲಿದ್ದಾರೆ: ಟ್ರೈಲರ್ ನೋಡಿ ರಾಮ್ ಗೋಪಾಲ್ ವರ್ಮ ಮೆಚ್ಚುಗೆ
ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ 'ಧುರಂಧರ್ 2: ದಿ ರಿವೇಂಜ್' ಚಿತ್ರದ ಟ್ರೈಲರ್ ಬಗ್ಗೆ ಟಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ (ಆರ್‌ಜಿವಿ) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾರ್ಚ್ 7ರಂದು ಬಿಡುಗಡೆಯಾದ ಈ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಈಗ ಸಿನಿಮಾ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಈ ಟ್ರೈಲರ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವರ್ಮಾ, "ಇದು ಸ್ಟ್ರಾಟೋಸ್ಪಿಯರ್ ಲೆವೆಲ್‌ನಲ್ಲಿದೆ (ಅತ್ಯುನ್ನತ ಮಟ್ಟ), ನಿರ್ದೇಶಕ ಆದಿತ್ಯ ಧರ್ ಅವರು ಸೇಡು ತೀರಿಸಿಕೊಳ್ಳುವ ಆವೇಶದಲ್ಲಿದ್ದಾರೆ" ಎಂದು ಬಣ್ಣಿಸಿದ್ದಾರೆ.
ಈ ಹಿಂದೆ 'ಧುರಂಧರ್' ಮೊದಲ ಭಾಗ ಬಂದಾಗಲೂ ವರ್ಮಾ ಮೆಚ್ಚುಗೆ ಸೂಚಿಸಿದ್ದರು. "ಧುರಂಧರ್ ಕೇವಲ ಒಂದು ಸಿನಿಮಾವಲ್ಲ, ಇದು ಭಾರತೀಯ ಚಿತ್ರರಂಗದ ಭವಿಷ್ಯವನ್ನೇ ಬದಲಿಸುವ ಶಕ್ತಿ ಹೊಂದಿದೆ. ಇದು ಭಾರತೀಯ ಸಿನಿಮಾಗೆ ಹೊಸ ದಿಕ್ಕು ನೀಡಿದೆ" ಎಂದು ಹೇಳಿದ್ದರು. ಆದಿತ್ಯ ಧರ್ ಒಬ್ಬರೇ ಭಾರತೀಯ ಸಿನೆಮಾದ ಭವಿಷ್ಯವನ್ನು ಬದಲಿಸಿದ್ದಾರೆ" ಎಂದು ವರ್ಮಾ ಆಗ ಹೇಳಿದ್ದರು. ಈಗ ಆದಿತ್ಯ ಧರ್ ಅವರು ಕೇವಲ ದೃಶ್ಯಗಳನ್ನು ನಿರ್ದೇಶಿಸುವುದಿಲ್ಲ, ಬದಲಾಗಿ ಪ್ರೇಕ್ಷಕರ ಮನಸ್ಥಿತಿಯನ್ನು ಎಂಜಿನಿಯರಿಂಗ್ ಮಾಡುತ್ತಾರೆ. ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವುದಲ್ಲ, ಬದಲಾಗಿ ಗಮನವನ್ನು ಸೆಳೆದುಕೊಳ್ಳುವಂತೆ ಮಾಡುತ್ತದೆ ಎಂದು ವರ್ಮಾ ವಿಶ್ಲೇಷಿಸಿದ್ದಾರೆ.

ಚಿತ್ರವು ಕೇವಲ ದೊಡ್ಡ ಮಟ್ಟದ ದೃಶ್ಯ ವೈಭವವಷ್ಟೇ ಅಲ್ಲ, ಪ್ರೇಕ್ಷಕರ ಮನಸ್ಸಿನ ಮೇಲೆ ಪ್ರಭಾವ ಬೀರುವ ಹೊಸ ದೃಷ್ಟಿಕೋನವನ್ನು ನೀಡುತ್ತದೆ ಎಂದಿದ್ದಾರೆ. ನಿರ್ದೇಶಕರು ಇಲ್ಲಿ ದೃಶ್ಯಗಳನ್ನು ಮಾತ್ರ ನಿರ್ದೇಶಿಸುವುದಿಲ್ಲ, ಪಾತ್ರಗಳ ಮನಸ್ಥಿತಿಯನ್ನೂ ಹಾಗೂ ಪ್ರೇಕ್ಷಕರ ಅನುಭವವನ್ನೂ ರೂಪಿಸುತ್ತಾರೆ ಎಂದು ಅವರು ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ಭಾರೀ ಕುತೂಹಲ ಮೂಡಿಸಿರುವ ಈ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದೆ.
ಬುಕಿಂಗ್‌ನಲ್ಲೂ ದಾಖಲೆ
"ಧುರಂಧರ್ 2: ದಿ ರಿವೇಂಜ್" ಚಿತ್ರದ ಮುಂಗಡ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನವೇ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಲಿದ್ದರೂ, ಮಾರ್ಚ್ 18ರಂದು ಆರಂಭವಾದ ಮುಂಗಡ ಬುಕಿಂಗ್ ಮೂಲಕ ಚಿತ್ರವು ಈಗಾಗಲೇ 8.06 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ. ಟ್ರೈಲರ್ ಬಿಡುಗಡೆಯಾದ ಕೇವಲ 24 ಗಂಟೆಯೊಳಗೆ ಈ ಮೈಲಿಗಲ್ಲು ತಲುಪಿದೆ. ಒಟ್ಟು ಕಲೆಕ್ಷನ್‌ನಲ್ಲಿ ಹಿಂದಿ ಆವೃತ್ತಿಯದ್ದೇ ಸಿಂಹಪಾಲು ಇದ್ದು, 7.95 ಕೋಟಿ ರೂ. ಗಳಿಸಿದೆ. ಬಾಕಿ ಮೊತ್ತ ದಕ್ಷಿಣ ಭಾರತದ ಭಾಷೆಗಳಿಂದ ಬಂದಿದೆ. ಈ ಆರಂಭಿಕ ಕಲೆಕ್ಷನ್‌ನಿಂದಾಗಿ, ಸಿನಿಮಾ ಬಿಡುಗಡೆಗೆ 12 ದಿನಗಳು ಬಾಕಿ ಇರುವಾಗಲೇ 2026ರ 5ನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ "ಧುರಂಧರ್ 2" ಪಾತ್ರವಾಗಿದೆ.
ಮುಂಗಡ ಬುಕಿಂಗ್ ಆರಂಭವಾದ ಕೇವಲ ಎರಡು ಗಂಟೆಗಳಲ್ಲಿ 4 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿವೆ. ಕೇವಲ ಒಂದೇ ದಿನದಲ್ಲಿ ಚಿತ್ರವು ಒಟ್ಟು 1,26,623 ಟಿಕೆಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಮೂಲ ಹಿಂದಿ ಆವೃತ್ತಿಯು ಅತಿ ಹೆಚ್ಚು ಬೇಡಿಕೆ ಹೊಂದಿದ್ದು, ಇಲ್ಲಿಯವರೆಗೆ 1,20,618 ಟಿಕೆಟ್‌ಗಳು ಬಿಕರಿಯಾಗಿವೆ. ದಕ್ಷಿಣ ಭಾರತದ ವಿವಿಧ ಭಾಷೆಗಳ ಪೇಯ್ಡ್ ಪ್ರಿವ್ಯೂಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸುಮಾರು 6,000ಕ್ಕೂ ಅಧಿಕ ಟಿಕೆಟ್‌ಗಳು ಇಲ್ಲಿ ಮಾರಾಟವಾಗಿವೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications