Movie Ticket Price: ಇನ್ಮುಂದೆ ಎಲ್ಲ ಥಿಯೇಟರ್‌, ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದೇ ಟಿಕೆಟ್‌ ದರ, ಎಷ್ಟು?

ಸಿನಿಪ್ರಿಯರಿಗೆ ಕರ್ನಾಟಕ ಸರ್ಕಾರ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಇನ್ನು ಮುಂದೆ ನಿಶ್ಚಿಂತೆಯಾಗಿ ನಿಮ್ಮ ನೆಚ್ಚಿನ ಸಿನಿಮಾ ನೋಡಲು ಅವಕಾಶ ಕಲ್ಪಿಸಿದೆ. ಸ್ಟಾರ್‌ ಹೀರೋಗಳ ಸಿನಿಮಾ ರಿಲೀಸ್‌ ಆದಾಗ ಸಾಮಾನ್ಯವಾಗಿ ಟಿಕೆಟ್‌ ದರವನ್ನು ಮನಬಂದಂತೆ ಏರಿಸುತ್ತಿದ್ದರು. ಇದರಿಂದ ಪ್ರೇಕ್ಷಕರು ದುಬಾರಿ ಹಣ ಟಿಕೆಟ್‌ಗಾಗಿ ಖರ್ಚು ಮಾಡಬೇಕಿತ್ತು. ಇನ್ನು ಮುಂದೆ ರಾಜ್ಯದ ಎಲ್ಲ ಥಿಯೇಟರ್‌ಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಎಲ್ಲ ಸಿನಿಮಾ ಭಾಷೆಯ ಸಿನಿಮಾಗಳಿಗೆ ಒಂದೇ ರೀತಿಯ ಟಿಕೆಟ್‌ ದರ ನಿಗದಿ ಮಾಡುವ ಸಂಬಂಧ ರಾಜ್ಯ ಸರ್ಕಾರವೇ ಆದೇಶ ಹೊರಡಿಸಿದೆ.

ಹೌದು, ಕರ್ನಾಟಕದಲ್ಲಿ ತುಂಬಾ ಹೈಪ್‌ ಇರುವ ಸ್ಟಾರ್‌ ನಟರ ಸಿನಿಮಾಗಳ ರಿಲೀಸ್‌ ವೇಳೆ ಟಿಕೆಟ್‌ ದರವನ್ನು 2000 ರೂಪಾಯಿಗೂ ಹೆಚ್ಚು ಏರಿಸಿರುವ ಉದಾಹರಣೆಗಳಿವೆ. ಇನ್ನು ಪರಭಾಷೆಯ ಸಿನಿಮಾಗಳಿಗೂ ಮನಬಂದಂತೆ ಟಿಕೆಟ್‌ ದರ ಏರಿಸಲಾಗುತ್ತಿತ್ತು. ದುಬಾರಿ ಟಿಕೆಟ್‌ ದರಕ್ಕೆ ಹೆದರಿ ಕೆಲವರು ಚಿತ್ರಮಂದಿರಗಳತ್ತ ಬರಲು ಹಿಂದೇಟು ಹಾಕುತ್ತಿದ್ದರು. ಮಲ್ಟಿಪ್ಲೆಕ್ಸ್‌ಗಳಲ್ಲೂ ಆಡಿದ್ದೇ ಆಟ ಎನ್ನುವಂತೆ ದರ ನಿಗದಿ ಮಾಡುತ್ತಿದ್ದರು. ಹೀಗಾಗಿ ಹೊರರಾಜ್ಯಗಳಂತೆ ಕರ್ನಾಟಕದಲ್ಲೂ ಒಂದೇ ರೀತಿಯ ಟಿಕೆಟ್‌ ದರ ನಿಗದಿ ಮಾಡುವಂತೆ ಆಗ್ರಹ ಕೇಳಿಬಂದಿತ್ತು. ಇದಕ್ಕೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ.

karnataka-govt-caps-movie-ticket-prices-at-200-rupees-across-all-theatres-multiplexes

ಅದರಂತೆ ರಾಜ್ಯದಲ್ಲಿರುವ ಎಲ್ಲ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ ₹200ಕ್ಕೆ ನಿಗದಿ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ನಿಯಮವು ಕನ್ನಡ ಸೇರಿದಂತೆ ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ವಯವಾಗುತ್ತದೆ. ಎಲ್ಲ ಪ್ರದರ್ಶನಗಳಲ್ಲಿ ಮನರಂಜನಾ ತೆರಿಗೆಯನ್ನೂ ಒಳಗೊಂಡಂತೆ ಗರಿಷ್ಠ 200 ರೂಪಾಯಿ ಅಷ್ಟೇ ನಿಗದಿ ಮಾಡಬೇಕು. ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚು ವಿಧಿಸಿದರೆ ಆ ಥಿಯೇಟರ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಟಿಕೆಟ್ ದರ ₹200 ಮೀರುವಂತಿಲ್ಲ

ಈ ಆದೇಶವನ್ನು ಕರ್ನಾಟಕ ಸಿನಿಮಾ ನಿಯಮಾವಳಿ ತಿದ್ದುಪಡಿ ಮೂಲಕ ಜಾರಿಗೆ ತರಲಾಗಿದೆ. ಇನ್ನು ಮುಂದೆ ಯಾವುದೇ ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್‌ನಲ್ಲಿ ಯವುದೇ ಭಾಷೆಯ ಟಿಕೆಟ್ ದರ ₹200 ಮೀರುವಂತಿಲ್ಲ. ಹಿಂದಿನ ಕೆಲವು ವರ್ಷಗಳಲ್ಲಿ ವಿಶೇಷ ಪ್ರದರ್ಶನಗಳು ಹಾಗೂ ಇತರೆ ನೆಪದಲ್ಲಿ ಟಿಕೆಟ್ ದರಗಳು ₹600ರಿಂದ ₹700ರವರೆಗೆ ತಲುಪಿದ್ದವು. ಕೆಲ ಸಿನಿಮಾಗಳ ಮೊದಲ ದಿನದ ಪ್ರದರ್ಶನಕ್ಕೆ ಸಾವಿರಾರು ರೂಪಾಯಿವರೆಗೆ ಟಿಕೆಟ್‌ ದರ ನಿಗದಿ ಮಾಡಿದ್ದರು. ಇದರ ವಿರುದ್ಧ ಸಿನಿಮಾ ಪ್ರೇಕ್ಷಕರು ಹಾಗೂ ಕನ್ನಡ ಚಿತ್ರರಂಗದ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಏಕರೂಪದ ಟಿಕೆಟ್‌ ದರ ನಿಗದಿ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಕೊನೆಗೂ ಈ ನಿಯಮ ರಾಜ್ಯಾದ್ಯಂತ ಜಾರಿಯಾಗುತ್ತಿದೆ.

karnataka-govt-caps-movie-ticket-prices-at-200-rupees-across-all-theatres-multiplexes

ಈ ಟಿಕೆಟ್ ದರ ನಿಗದಿಯಿಂದ ಸಿನಿಮಾ ಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಲಿದ್ದು, ಮಧ್ಯಮ ಬಜೆಟ್, ಸಣ್ಣ ಚಿತ್ರಗಳಿಗೂ ನಿರೀಕ್ಷಿತ ಲಾಭದಾಯಕ ಎನ್ನಲಾಗಿದೆ. ಟಿಕೆಟ್ ದರ ನಿಯಂತ್ರಣದಿಂದ ಕನ್ನಡ ಚಿತ್ರೋದ್ಯಮಕ್ಕೂ ಉತ್ತಮ ವಾತಾವರಣ ಸಿಗಲಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಲು, ಟಿಕೆಟ್ ದರ ಕಡಿತಗೊಳಿಸಲು, ಹಾಗೂ ಇಂಡಸ್ಟ್ರಿಗೆ ಪ್ರೋತ್ಸಾಹ ಕೊಡಲು ರಾಜ್ಯ ಸರ್ಕಾರ ಈ ಮಹತ್ವದ ನಿರ್ಣಯ ತೆಗೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+