ನಟ್ಟು ಬೋಲ್ಟು ಟೈಟಾಗೇ ಇದೆ ಎಂದ ಸುದೀಪ್‌ಗೆ ಡಿಕೆ ಶಿವಕುಮಾರ್‌ ಖಡಕ್‌ ಕೌಂಟರ್‌

ಚಿತ್ರರಂಗದವರ ನಟ್ಟು ಬೋಲ್ಟ್‌ ಟೈಟ್‌ ಮಾಡೋದು ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನೀಡಿದ್ದ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಚಿತ್ರರಂಗದ ಹಲವರು ಆಗಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ನಟ ಕಿಚ್ಚ ಸುದೀಪ್‌ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ ಡಿಕೆ ಶಿವಕುಮಾರ್‌ ಅವರು ಹೇಳಿಕೆಗೆ ಖಡಕ್‌ ತಿರುಗೇಟು ನೀಡಿದ್ದರು. ಎಲ್ಲರ ನಟ್ಟು ಬೋಲ್ಟ್‌ ಸರಿಯಾಗಿಯೇ ಇದೆ ಎಂದು ಸುದೀಪ್‌ ಹೇಳಿದ್ದರು. ಕಿಚ್ಚನ ಹೇಳಿಕೆಗೆ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಚಿತ್ರರಂಗದ ಕಾರ್ಯಕ್ರಮಕ್ಕೆ ನಟ ನಟಿಯರೇ ಬರಲಿಲ್ಲ ಎಂಬ ವಿಚಾರವಾಗಿ ಗರಂ ಆಗಿದ್ದ ಡಿಕೆ ಶಿವಕಮಾರ್‌ ಅವರು, ಚಿತ್ರರಂಗದವರ ನಟ್ಟು ಬೋಲ್ಟ್‌ ಟೈಟ್‌ ಮಾಡೋದು ಗೊತ್ತಿದೆ ಎಂದು ಬಹಿರಂಗ ಎಚ್ಚರಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ನಟ ಕಿಚ್ಚ ಸುದೀಪ್‌, ನಟ್‌ ಬೋಲ್ಟ್‌ ಟೈಟ್‌ ಮಾಡಲು ಮೆಕ್ಯಾನಿಕ್‌ ಹತ್ತಿರ ಹೋಗಬೇಕು. ಯಾಕಂದ್ರೆ ಆ ಮೆಕ್ಯಾನಿಕ್‌ಗೆ ಮಾತ್ರವೇ ಕಾರಿನ ವಿಚಾರ ಚೆನ್ನಾಗಿ ಗೊತ್ತಿರುತ್ತೆ. ಅದೇ ರೀತಿ ಚಿತ್ರರಂಗದಲ್ಲಿರುವ ವಿಚಾರ ಚಿತ್ರರಂಗದವರಿಗೆ ಮಾತ್ರವೇ ಗೊತ್ತಿರುತ್ತೆ ಎಂದು ತಿರುಗೇಟು ನೀಡಿದ್ದರು.

dk-shivakumar-hits-back-at-kiccha-sudeep-over-nut-bolt-tight-comment

ಡಿಕೆ ಶಿವಕುಮಾರ್‌ ಅವರು ಯಾವರ್ಥದಲ್ಲಿ ಆ ಹೇಳಿಕೆ ಕೊಟ್ಟರೋ ಗೊತ್ತಿಲ್ಲ. ನನಗೆ ಅವರ ಮೇಲೆ ಬಹಳ ಗೌರವ ಇದೆ. ಆದರೆ ಅವರು ಆ ಹೇಳಿಕೆ ನೀಡುವ ಮುನ್ನ ಕೆಲ ಸತ್ಯಗಳನ್ನ ಅರ್ಥ ಮಾಡಿಕೊಳ್ಳಬೇಕಿತ್ತು. ಆಗ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತು, ಚಿತ್ರರಂಗದವರ ಮನಸ್ಸಿಗೆ ನೋವಾಗುತ್ತಿರಲಿಲ್ಲ. ಡಿಕೆ ಶಿವಕುಮಾರ್‌ ಅವರು ಯಾವ ಕಾರ್ಯಕ್ರಮಕ್ಕೆ ಕರೆದರೂ ನಾವೆಲ್ಲ ಹೋಗಿದ್ದೇವೆ. ಚಿತ್ರರಂಗದಲ್ಲಿ ನಾವೆಲ್ಲ ಗೌರವಸ್ಥರಿದ್ದೀವಿ, ನಾವು ಮೈ ಮಾರಿಕೊಂಡು ಬದುಕುತ್ತಿರುವ ವ್ಯಕ್ತಿಗಳಲ್ಲ ಎಂದು ಕಿಚ್ಚ ಹೇಳಿದ್ದರು.

ಅವರ ಬಾಯಲ್ಲಿ ನಟ್ಟು ಬೋಲ್ಟ್‌ ಎಂಬ ಮಾತು ಬಂದಿದೆ. ಆದರೆ ಎಲ್ಲರ ನಟ್ಟು ಬೋಲ್ಟ್‌ ಟೈಟೇ ಇದೆ. ಸಿನಿಮಾ ಕೂಡ ಒಂದು ಗೌರವವಾದ ಸ್ಥಳ. ನಾವು ಎಷ್ಟು ಗೌರವ ಕೊಡ್ತೀವೋ ಅಷ್ಟೇ ನಮಗೂ ಕೊಡಿ. ಅವರ ಪ್ರಕಾರ ಅಹಂ ಕೆಲವರಿಗೆ ಇರಬಹುದು. ಆದರೆ ಎಲ್ಲರಿಗೂ ಇಲ್ಲ. ಡಿಕೆ ಶಿವಕುಮಾರ್‌ ಅವರ ಮೇಲಿನ ಗೌರವದಿಂದಲೇ ನಾವೆಲ್ಲ ಈ ವಿಚಾರಕ್ಕೆ ಆಗ ಪ್ರತಿಕ್ರಿಯೆ ಕೊಡಲಿಲ್ಲ. ಅವರ ಹೇಳಿಕೆಯಿಂದ ನೋವಾಗಿದ್ದಂತೂ ನಿಜ ಎಂದು ಸುದೀಪ್ ಬೇಸರ ಹೊರಹಾಕಿದ್ದರು.

ಕಾಲವೇ ಉತ್ತರ ಕೊಡುತ್ತೆ ಎಂದ ಡಿಕೆಶಿ

ನಟ ಸುದೀಪ್‌ ಹೇಳಿಕೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾರಿಗೂ/ಯಾವನಿಗೂ ಉತ್ತರ ಕೊಡೋಕೆ ಇಷ್ಟ ಇಲ್ಲ. ನಾನು ಬಿಚ್ಚೋದು ಬೇಕಿಲ್ಲ. ನಾನೇನೂ ಅದರ ಬಗ್ಗೆ ಮಾತನಾಡುವುದು ಬೇಕಿಲ್ಲ. ಫಿಲಂ ಚೇಂಬರ್‌ಗೆ ಹೋಗಿ ನಿಮ್ಮ ದಾಖಲೆ ಹಾಗೂ ನಿಮ್ಮ ಹಿಸ್ಟರಿ ತೆಗೆದುಕೊಂಡು ಬನ್ನಿ, ಅವರಿಗೆಲ್ಲ ನಾನು ಉತ್ತರಿಸುವ ಅಗತ್ಯವಿಲ್ಲ, ಇದಕ್ಕೆಲ್ಲ ಕಾಲವೇ ಉತ್ತರ ಕೊಡುತ್ತೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+