ವಿಡಿಯೋ: ಉಪೇಂದ್ರ ಕನಸಿನ ಕರ್ನಾಟಕ ಹೇಗಿರಬೇಕು ಅಂದರೆ...

Posted By:
Subscribe to Oneindia Kannada
   ಉಪೇಂದ್ರ ಕನಸಿನ ಕರ್ನಾಟಕ ಹೇಗಿರಬೇಕು ಅಂದರೆ | Oneindia Kannada

   ಮತ್ತೊಂದು ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಇದ್ದೀವಿ. ಇಂಥ ಸನ್ನಿವೇಶದಲ್ಲಿ 'ನಾವು' ಕಾಣಬೇಕು ಅಂದುಕೊಂಡಿರುವ ಕರ್ನಾಟಕದ ಬಗ್ಗೆ ನಟ- ನಿರ್ದೇಶಕ ಉಪೇಂದ್ರ ತಮ್ಮ ಕನಸನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರ ಸ್ವಲ್ಪ ಡಿಫರೆಂಟ್ ಅಲ್ಲವಾ, ಹೀಗೇ ಆಗೇ ಆಗುತ್ತದೆ ಎಂಬ ವಿಶ್ವಾಸ ಕೂಡ ವ್ಯಕ್ತಪಡಿಸಿದ್ದಾರೆ.

   "ಈಗಾಗಲೇ ಸಿನಿಮಾದಲ್ಲಿ ನನ್ನ ಕನಸಿನ ಕರ್ನಾಟಕ ಹೇಗಿರಬೇಕು ಎಂಬುದನ್ನು ತೋರಿಸಿಬಿಟ್ಟಿದ್ದೀನಿ. ನೀವು ಅದೇ ಕ್ಲಿಪ್ಪಿಂಗ್ಸ್ ನ ಬಳಸಿಕೊಳ್ಳಬಹುದು" ಅಂತಲೇ ಮಾತಿಗೆ ಶುರು ಮಾಡಿದರು ನಟ- ನಿರ್ದೇಶಕ ಉಪೇಂದ್ರ. ಆದರೆ ಆ ನಂತರ ಒನ್ಇಂಡಿಯಾ ಕನ್ನಡ "ನನ್ನ ಕನಸಿನ ಕರ್ನಾಟಕ" ಅಭಿಯಾನದ ಬಗ್ಗೆ ತಮ್ಮ ಕನಸುಗಳನ್ನು ಹಂಚಿಕೊಂಡರು.

   'ನನ್ನ ಕನಸಿನ ಕರ್ನಾಟಕ' : ವಿಡಿಯೋ ಮಾಡಿ ಕಳಿಸಿ

   ಸಂಪೂರ್ಣ ಬೆಳವಣಿಗೆ ಆಗಿರುವ ಕರ್ನಾಟಕ. ಡೆವಲಪೆಡ್ ಕರ್ನಾಟಕ. ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಆಗಿರುವ ಕರ್ನಾಟಕ. ಟೂರಿಸಂನಲ್ಲಿ ಅದ್ಭುತ ಆಗಿರುವ ಕರ್ನಾಟಕ. ಇಡೀ ಇಂಡಿಯಾ, ಫಾರಿನ್ ನವರು ಇಲ್ಲಿ ಬಂದು ನೋಡಬೇಕು ಅನ್ನಿಸುವಂಥ ಕರ್ನಾಟಕ. ಸುಂದರವಾದ ಕರ್ನಾಟಕ, ಶ್ರೀಮಂತವಾದ ಕರ್ನಾಟಕ.

   Video: Upendra shares his dream about Karnataka

   ಎಲ್ಲರಿಗೂ ಉದ್ಯೋಗ ಇರುವಂಥ ಕರ್ನಾಟಕ, ಎಲ್ಲರಿಗೂ ಜ್ಞಾನ ಸಿಗುವಂಥ ಕರ್ನಾಟಕ. ಎಲ್ಲರೂ ಸುಖ-ಸಮೃದ್ಧಿಯಿಂದ ಬದುಕುವಂಥ ಕರ್ನಾಟಕ ಆಗೇ ಆಗುತ್ತದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Actor- director Upendra shares his dream about Karnataka. How it should be portrayed in global level and national level, he has big dream and already shown in his movie also.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ