ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ ಸಿದ್ದರಾಮಯ್ಯ

Recommended Video

      40 ವರ್ಷಗಳ ನಂತರ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಿ ಇತಿಹಾಸ ಸೃಷ್ಟಿಸಿದ ಸಿದ್ದರಾಮಯ್ಯ

      ಬೆಂಗಳೂರು, ಮಾರ್ಚ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಇತಿಹಾಸ ಸೃಷ್ಟಿಸಿದ್ದಾರೆ. ಮುಖ್ಯಮಂತ್ರಿಯಾಗಿ ನಿರಂತರ 5 ವರ್ಷ ಪೂರೈಸಿದ ಕರ್ನಾಟಕದ ಕೇವಲ 3ನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಅದರಲ್ಲೂ ಕಳೆದ 40 ವರ್ಷಗಳಲ್ಲಿ ಸಂಪೂರ್ಣ ಐದು ವರ್ಷ ಪೂರೈಸಿದ ಮೊದಲ ಮುಖ್ಯಮಂತ್ರಿ ಎಂಬ ಶ್ರೇಯಸ್ಸನ್ನೂ ಸಿದ್ದರಾಮಯ್ಯ ಸಂಪಾದಿಸಿದ್ದಾರೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

      ಕರ್ನಾಟಕದಲ್ಲಿ ಮೇ 12ರಂದು ಚುನಾವಣೆ ನಡೆಯಲಿದ್ದು, 2013ರ ಮೇನಲ್ಲಿ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯ ತಮ್ಮ 5 ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದಾರೆ. ಈ ಮೂಲಕ ಕಳೆದ 40 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಮುಖ್ಯಮಂತ್ರಿಯಾಗಿ ಗುರುತಿಸಿಕೊಳ್ಳಲಿದ್ದಾರೆ.

      ಕೊನೆಯ ಬಾರಿಗೆ 5 ವರ್ಷ ಪೂರೈಸಿದ ಮುಖ್ಯಮಂತ್ರಿ ಅಂದರೆ ಅದು ಡಿ. ದೇವರಾಜ ಅರಸು ಮಾತ್ರ. ಬರೋಬ್ಬರಿ 40 ವರ್ಷಗಳ ಹಿಂದೆ ಅಂದರೆ 1972-77ರ ಅವಧಿಯಲ್ಲಿ ಸಂಪೂರ್ಣ ಐದು ವರ್ಷ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು.

      Siddaramaiah creates history, completes 5 year term after 40 years

      1999ರಿಂದ 2004ರ ವರೆಗೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣಾ ಅವರಿಗೆ ತಮ್ಮ ಅವಧಿ ಪೂರೈಸುವ ಉತ್ತಮ ಅವಕಾಶ ಇತ್ತಾದರೂ ಅವರು ಅವಧಿಪೂರ್ವ ಚುನಾವಣೆ ಎದುರಿಸಲು ನಿರ್ಧರಿಸಿದ್ದರಿಂದ ಕೆಲವೇ ತಿಂಗಳುಗಳ ಅಂತರದಲ್ಲಿ ಅವರು 5 ವರ್ಷ ಪೂರೈಸಲಾಗಿಲ್ಲ.

      ಇದೀಗ ಸಿದ್ದರಾಮಯ್ಯ ತಮ್ಮ ಅವಧಿ ಪೂರೈಸಿ, ಕಳೆದ 40 ವರ್ಷಗಳಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ.

      ಇನ್ನು ಕರ್ನಾಟಕದಲ್ಲಿ ಸತತ ಐದು ವರ್ಷ ಪೂರೈಸಿದ ಮುಖ್ಯಮಂತ್ರಿಗಳೆಂದರೆ ಎಸ್.ನಿಜಲಿಂಗಪ್ಪ, ಡಿ. ದೇವರಾಜ ಅರಸು ಮತ್ತು ಇದೀಗ ಸಿದ್ದರಾಮಯ್ಯ ಮಾತ್ರ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+