ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್ಲಿಕ್ ಟಿವಿ ಸಮೀಕ್ಷೆ : ಸಮ್ಮಿಶ್ರ ಸರ್ಕಾರ ರಚನೆ ಅಂತಾರೆ ಜನರು!

|
Google Oneindia Kannada News

ಬೆಂಗಳೂರು, ಮೇ 09 : ಪಬ್ಲಿಕ್ ಟಿವಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯದ 224 ಕ್ಷೇತ್ರಗಳಲ್ಲಿ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ಮಾಡಲಾಗಿದೆ. ಒಟ್ಟು 21,617 ಮಾದರಿಗಳನ್ನು ಪಡೆದುಕೊಂಡು ಸಮೀಕ್ಷೆಯ ಅಂತಿಮ ವರದಿಯನ್ನು ಸಿದ್ಧಪಡಿಸಲಾಗಿದೆ. ಅಂತಿಮ ವರದಿ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ಭಾರೀ ಪೈಪೋಟಿ ನಡೆದಿದೆ.

'ಜನ್ ಕಿ ಬಾತ್' ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ, ಬಿಜೆಪಿಗೆ ಮೇಲುಗೈ'ಜನ್ ಕಿ ಬಾತ್' ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ, ಬಿಜೆಪಿಗೆ ಮೇಲುಗೈ

ಸಮೀಕ್ಷೆ ವರದಿ ಪ್ರಕಾರ ಕಾಂಗ್ರೆಸ್ 89-94, ಬಿಜೆಪಿ 86-91, ಜೆಡಿಎಸ್ 38-43 ಮತ್ತು ಇತರ ಅಭ್ಯರ್ಥಿಗಳು 0-6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ವರದಿ ಪ್ರಕಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ (113) ಬರುವುದಿಲ್ಲ.

Public Tv pre-poll survey : People says coalition govt in Karnataka

ಚುನಾವಣೆ ಬಳಿಕ ಯಾವ ರೀತಿಯ ಸರ್ಕಾರ ರಚನೆಯಾಗಲಿದೆ? ಎಂದು ಸಮೀಕ್ಷೆಯಲ್ಲಿ ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಶೇ 61 ರಷ್ಟು ಜನರು ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?ಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಸಮೀಕ್ಷೆಯ ವರದಿಯ ಅಂಶಗಳು ಇಲ್ಲಿವೆ...

ಸಮಗ್ರ ಫಲಿತಾಂಶ : ಸಮಗ್ರ ಕರ್ನಾಟಕದ ಸಮೀಕ್ಷಾ ವರದಿಯಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಶೇ 26ರಷ್ಟು ಜನರು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು 61 ರಷ್ಟು ಜನರು, ಏನೂ ಹೇಳುವುದಿಲ್ಲ ಎಂದು ಶೇ 13ರಷ್ಟು ಜನರು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರ : ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 27 ಕ್ಷೇತ್ರಗಳಿವೆ (ಜಯನಗರ ಹೊರತುಪಡಿಸಿ). ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ 31.10ರಷ್ಟು ಜನರು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಬರಲಿದೆ ಎಂದು 52.20 ರಷ್ಟು ಜನರು ಏನೂ ಹೇಳಲ್ಲ ಎಂದು 17.70 ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈ ಕರ್ನಾಟಕ ಭಾಗದಲ್ಲಿ ಶೇ 68.30ರಷ್ಟು ಜನರು, ಹೈದರಾಬಾದ್ ಕರ್ನಾಟಕದಲ್ಲಿ 65.90 ರಷ್ಟು ಜನರು, ಮಧ್ಯ ಕರ್ನಾಟಕದಲ್ಲಿ ಶೇ 59.90ರಷ್ಟು ಜನರು, ಕರಾವಳಿ ಕರ್ನಾಟಕದಲ್ಲಿ ಶೇ 47.60ರಷ್ಟು ಜನರು, ಹಳೆ ಮೈಸೂರು ಭಾಗದಲ್ಲಿ 62.10 ರಷ್ಟು ಜನರು ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ.

English summary
Public Tv pre poll survey on Karnataka assembly elections 2018 has predicted a hung assembly in state. People of Karnataka said that coalition government will form in the state after elections. Karnataka assembly elections will be held on May 12, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X