ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಸಾಗರದಲ್ಲಿ ಹಾಲಪ್ಪ ಜಯಭೇರಿ
ಬೆಂಗಳೂರು, ಮೇ 06: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರ ಅಭಿಪ್ರಾಯ ಸಂಗ್ರಹ ಮಾಡುವ ಉದ್ದೇಶದಿಂದ ಒನ್ಇಂಡಿಯಾ ತನ್ನ ಫೇಸ್ ಬುಕ್ ಪುಟದಲ್ಲಿ ಫೇಸ್ಬುಕ್ ಲೈವ್ ಪೋಲ್ ನಡೆಸುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆಸಿದ ಸಮೀಕ್ಷೆ ಫಲಿತಾಂಶ ಇಲ್ಲಿದೆ.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ಸಿಗ ಕಾಗೋಡು ತಿಮ್ಮಪ್ಪ ಅವರು ಈ ಬಾರಿ ಕೂಡಾ ಕಣಕ್ಕಿಳಿದಿದ್ದಾರೆ. ಹಿಂದೆ ಬಿಜೆಪಿಯಲ್ಲಿದ್ದ ಬೇಳೂರು ಗೋಪಾಲಕೃಷ್ಣ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ ಸೋಲು ಕಂಡಿದ್ದರು. ಈ ಬಾರಿ ಟಿಕೆಟ್ ವಂಚಿತರಾಗಿ, ಕಾಂಗ್ರೆಸ್ ಸೇರಿಕೊಂಡು, ತಮ್ಮ ಮಾವ ಕಾಗೋಡು ತಿಮ್ಮಪ್ಪ ಪರ ಪ್ರಚಾರ ನಡೆಸಿದ್ದಾರೆ.
ಈ ಬಾರಿ ಬಿಜೆಪಿಯ ಹರತಾಳು ಹಾಲಪ್ಪ ಹಾಗೂ ಜೆಡಿಎಸ್ ನಿಂದ ಎಂ.ಬಿ ಗಿರೀಶ್ ಗೌಡ ಇನ್ನಿತರ ಸ್ಪರ್ಧಿಗಳಾಗಿ ಕಣದಲ್ಲಿದ್ದಾರೆ.

ಫೇಸ್ಬುಕ್ ಲೈವ್ ಮತದಾನ: ಇದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಆಯ್ಕೆಗಳನ್ನು ನೀಡಲಾಗಿರುತ್ತದೆ. ಉದಾಹರಣೆಗೆ ಚಾಮುಂಡೇಶ್ವರಿ ಕ್ಷೇತ್ರದ ಲೈವ್ ಪೋಲ್ ನಲ್ಲಿ ಮೂವರು ಪ್ರಮುಖ ಅಭ್ಯರ್ಥಿಗಳಿಗೂ ಪ್ರತ್ಯೇಕ ಚಿಹ್ನೆ(ಎಮೋಜಿ) ಬಳಸಲಾಗಿದೆ. ವೀಕ್ಷಕರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಸರಿ ಹೊಂದುವ ಎಮೋಜಿಯನ್ನು ಒತ್ತುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು.
ಫಲಿತಾಂಶ: ಸುಮಾರು ಒಂದು ಗಂಟೆ ಅವಧಿಯ ಚುಟುಕು ಸಮೀಕ್ಷೆ ಇದಾಗಿತ್ತು. ನೂರಾರು ಮಂದಿ ಸಮೀಕ್ಷೆ ತಲುಪಿದ್ದು, ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಗಮನಿಸಿ ಅಭ್ಯರ್ಥಿಗಳಿಗೆ ನೀಡಿರುವ ಎಮೋಜಿಗಳನ್ನು ಒತ್ತಿದರೆ ಮಾತ್ರ ನಿಮ್ಮ ಮತ ಲೆಕ್ಕಕ್ಕೆ ಸಿಗಲಿದೆ.
ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರಿಗೆ 94 ಮತಗಳು ಲಭಿಸಿದ್ದರೆ, ಕಾಂಗ್ರೆಸ್ಸಿನ ಕಾಗೋಡು ತಿಮ್ಮಪ್ಪ ಅವರಿಗೆ 21 ಮತಗಳು ಸಿಕ್ಕಿವೆ. ಇನ್ನು ಜೆಡಿಎಸ್ ಎಂ.ಬಿ ಗಿರೀಶ್ ಗೌಡ ಅವರಿಗೆ 34 ಮತಗಳು ಬಂದಿದೆ.












Click it and Unblock the Notifications