ಹೋಲೋಗ್ರಾಂ ಕೊರತೆ: 1 ಲಕ್ಷ ಹೊಸ ಮತದಾರರಿಗಿಲ್ಲ ವೋಟರ್ ಐಡಿ

ಬೆಂಗಳೂರು, ಏಪ್ರಿಲ್ 26: ಮೊದಲ ಬಾರಿಯ ಮತದಾರರನ್ನು ಮತದಾನ ಮಾಡುವಂತೆ ಪ್ರೇರೇಪಿಸಲು ಚುನಾವಣಾ ಆಯೋಗ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಆದರೆ ಹೋಲೋಗ್ರಾಂ ಪೂರೈಕೆಯಲ್ಲಾದ ಕೊರತೆಯಿಂದ ಒಂದು ಲಕ್ಷ ಹೊಸ ಮತದಾರರು ಈವರೆಗೂ ಗುರುತಿನ ಚೀಟಿ ಪಡೆದುಕೊಂಡಿಲ್ಲ.

ಮೊದಲ ಬಾರಿಗೆ ಮತದಾನ ಮಾಡುವ ಆಸೆ ಹೊಂದಿರುವ ಹೊಸ ಮತದಾರರಿಗೆ ಚುನಾವಣಾ ಆಯೋಗವೇ ತಣ್ಣೀರು ಹಾಕುತ್ತಿರುವಂತೆ ಕಾಣುತ್ತಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನವರು ಹೊಸ ಮತದಾರರಿದ್ದಾರೆ, ಅಲ್ಲದೆ, ಮತದಾರರ ಪಟ್ಟಿಯಲ್ಲಿನ ಹೆಸರು ಬದಲಾವಣೆ, ವಿಳಾಸ ಬದಲಾವಣೆ ಸೇರಿ ಇನ್ನಿತರೆ ಕಾರಣಗಳಿಗಾಗಿ 1.5 ಲಕ್ಷಕ್ಕೂ ಹೆಚ್ಚಿನವರು ಅರ್ಜಿ ಸಲ್ಲಿಸಿದ್ದಾರೆ.

ಒಟ್ಟಾರೆ 4.5 ಲಕ್ಷಕ್ಕೂ ಹೆಚ್ಚಿನವರಿಗೆ ಹೊಸದಾಗಿ ಮತದಾರರ ಚೀಟಿ ನೀಡಬೇಕಿದೆ. ಅದರಲ್ಲಿ ಈಗಾಗಲೇ 3.5 ಲಕ್ಷಕ್ಕೂ ಹೆಚ್ಚಿನವರಿಗೆ ಗುರುತಿನ ಚೀಟಿ ನೀಡಲಾಗಿದ್ದು, ಉಳಿದ ಒಂದು ಲಕ್ಷ ಮತದಾರರಿಗೆ ಗುರುತಿನ ಚೀಟಿ ಲಭ್ಯವಾಗಿಲ್ಲ. ಬೆಂಗಳೂರು ದಕ್ಷಿಣ , ಪದ್ಮನಾಭನಗರ, ಯಶವಂತಪುರ ಸೇರಿ ಇನ್ನಿತರ ಕಡೆಗಳಲ್ಲಿ ಹೋಲೋಗ್ರಾಂ ಕೊರತೆ ಉಂಟಾಗಿದೆ.

One lakh new voters may not get voter ID cards

ಈ ಬಗ್ಗೆ ಕೇಂದ್ರಗಳ ಸಿಬ್ಬಂದಿಯನ್ನು ಕೇಳಿದರೆ, ಹೋಲೋಗ್ರಾಂ ಕೊರತೆಯಿದೆ. ಹೀಗಾಗಿ ಹೊಸದಾಗಿ ಮತದಾರರ ಚೀಟಿ ನೀಡಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಚುನಾವಣಾ ಅಧಿಕಾರಿಗಳು ಹೋಲೋಗ್ರಾಂ ಕೊರತೆಯುಂಟಾಗಿಲ್ಲ. ನಿಗದಿತ ಎಲ್ಲ ಕೇಂದ್ರಗಳಿಗೂ ಹೋಲೋಗ್ರಾಂ ಪೂರೈಸಲಾಗಿದೆ ಎಂದು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+