ಲಿಂಗಾಯತರ ಪ್ರೀತಿ ಯಡಿಯೂರಪ್ಪ ಕಡೆಗೆ? ಸಮೀಕ್ಷೆಯಲ್ಲಿ ಇದೆಯಾ ನೂನ್ಯತೆ?

Posted By:
Subscribe to Oneindia Kannada

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿ ಇದೀಗ ಪ್ರಕಟವಾಗಿದೆ. ಅದರ ಪ್ರಕಾರ ಲಿಂಗಾಯತರ ಪ್ರೀತಿ ಯಡಿಯೂರಪ್ಪ ಅವರ ಕಡೆಗೆ ಹೆಚ್ಚು ಇದೆ.

ಮುಖ್ಯಮಂತ್ರಿ ಯಾರಾಗಬೇಕು ಎಂದು ಲಿಂಗಾಯತರಿಗೆ ಕೇಳಲಾದ ಪ್ರಶ್ನೆಗೆ, 39% ಜನ ಲಿಂಗಾಯತರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ, 23% ಲಿಂಗಾಯತರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ. 17% ಲಿಂಗಾಯತರು ಕುಮಾರಸ್ವಾಮಿ ಪರ ಇದ್ದಾರೆ.

ಸಮೀಕ್ಷೆ 2018 : ಇಂಡಿಯಾ ಟುಡೇ ಅಭಿಮತ, ವಿಧಾನಸಭೆ ಅತಂತ್ರ

ಅಷ್ಟೆ ಅಲ್ಲದೆ ಲಿಂಗಾಯತ ಪ್ರತ್ಯೇಕ ಧರ್ಮ ವಿಷಯ ಈ ಬಾರಿಯ ಚುನಾವಣೆಯ ಮುಖ್ಯ ವಿಷಯವಾಗಲಿದೆಯೇ ಎಂಬ ಪ್ರಶ್ನೆಗೆ 52% ಮಂದಿ ಹೌದು ಎಂದಿದ್ದಾರೆ. ಆದರೆ ಈ ಸಮೀಕ್ಷೆಯಲ್ಲಿ ಸಣ್ಣ ಕೊರತೆ ಇದೆ.

Lingayatha people wants Yeddyurappa to be CM

ಈ ಲಿಂಗಾಯತ ಸಮೀಕ್ಷೆಯಲ್ಲಿ ಎದ್ದಿರುವ ಪ್ರಶ್ನೆ ಎಂದರೆ ಸಮೀಕ್ಷೆ ನಡೆಸುವಾಗ ವೀರಶೈವ ಅಥವಾ ಲಿಂಗಾಯತ ಎಂದು ವಿಭಾಗ ಮಾಡದೇ ಸಮೀಕ್ಷೆ ಮಾಡಿರುವುದು. ಸಮೀಕ್ಷೆ ಕೇವಲ ವೀರಶೈವ ಹಾಗೂ ಲಿಂಗಾಯತ ಎರಡನ್ನೂ ಒಂದೇ ಎಂದು ಪರಿಗಣಿಸಿ ಸಮೀಕ್ಷೆ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾದಲ್ಲಿ ಈ ಸಮೀಕ್ಷೆ ಸತ್ಯಕ್ಕೆ ಹತ್ತಿರ ಬಾರದೇ ಹೋಗುವ ಅಪಾಯ ಇದೆ.

ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?

ವೀರಶೈವ ಮತ್ತು ಲಿಂಗಾಯತ ಎರಡೂ ಪ್ರತ್ಯೇಕ ಗೊಂಡಿದ್ದು, ಪ್ರತ್ಯೇಕಗೊಳ್ಳುವುದು ಲಿಂಗಾಯತರ ಬೇಡಿಕೆ ಆಗಿತ್ತು, ಪ್ರತ್ಯೇಕತೆಗೆ ವೀರಶೈವರ ವಿರೋಧ ಇತ್ತು. ಆದರೆ ಈ ಸಮೀಕ್ಷೆ ವೀರಶೈವ ಹಾಗೂ ಲಿಂಗಾಯತ ಎರಡನ್ನೂ ಒಟ್ಟು ಮಾಡಿ ಸಮೀಕ್ಷೆ ನಡೆಸಿರುವುದು ಸರಿಯಾದ ಫಲಿತಾಂಶ ತಂದಿದೆ ಎಂದೇನು ಎನಿಸುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As per the India Today opinion poll on the Karnataka assembly elections 2018 opinion poll karnataka's Lingayath community people are still with BJP's leader Yeddyurappa. CM Siddaramaiah is the second option of them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ