ಸಿ ಫೋರ್ 3 ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯ ಕೈ ಪಡೆಗೆ ಗೆಲುವು

ಬೆಂಗಳೂರು, ಏಪ್ರಿಲ್ 30: ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಕಾವು ಈಗ ಬಲವಾಗಿ ಮೂರು ಪಕ್ಷಗಳನ್ನು ತಟ್ಟುವ ಕಾಲ ಬಂದಿದೆ.ಚುನಾವಣಾ ಪೂರ್ವ ಹಾಗೂ ಎಕ್ಸಿಟ್ ಪೋಲ್ ಸಮೀಕ್ಷೆಗಳತ್ತ ಜನರು ಕುತೂಹಲದಿಂದ ನೋಡುತ್ತಿರುವ ಸಮಯದಲ್ಲಿ ಸಿಫೋರ್ ತನ್ನ ಮೂರನೇ ಸಮೀಕ್ಷೆಯನ್ನು ಇಂದು ಪ್ರಕಟಿಸಿದೆ.

ಸಿಫೋರ್ ಸಂಸ್ಥೆ ನೀಡಿದ ಚುನಾವಣಾ ಪೂರ್ವ ಸಮೀಕ್ಷೆಯತ್ತ ಗಮನ ಹರಿಸಿದರೆ, 2017ರಲ್ಲಿ ಹಾಗೂ 2018ರಲ್ಲಿ ಪ್ರಕಟಿಸಿದ ಎರಡೂ ಸಮೀಕ್ಷೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. 2013ರಿಂದ 2018ರ ತನಕ ಸಿಫೋರ್ ನೀಡಿರುವ ಸಮೀಕ್ಷೆಗಳು ಶೇ99ರಷ್ಟು ನಿಖರವಾಗಿ ಬಂದಿದ್ದನ್ನು ಸ್ಮರಿಸಬಹುದು. ಮೂರನೇ ಸಮೀಕ್ಷೆ ಶೇ 95ರಷ್ಟು ನಿಖರವಾಗಿದೆ ಎಂದು ಸಂಸ್ಥೆ ಹೇಳಿದೆ.

ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಅಧಿಕಾರ ಸ್ಥಾಪಿಸಲಿದೆ. ಕಾಂಗ್ರೆಸ್ ಪಕ್ಷವು ಭರ್ಜರಿ ಬಹುಮತ ಪಡೆಯಲಿದ್ದು, ಸ್ವಂತ ಬಲದಿಂದ ಪೀಠಕ್ಕೇರಲಿದೆ ಎಂದು ಸಿ ಫೋರ್ ಸಂಸ್ಥೆ ಮೂರನೇ ಬಾರಿಗೆ ಪ್ರಕಟಿಸಿದೆ.

2017 ಹಾಗೂ 2018ರಲ್ಲಿ ಪ್ರಕಟವಾದ ಎರಡು ಸಿಫೋರ್ ಸಮೀಕ್ಷೆಯ ತುಲನಾತ್ಮಕ ವರದಿ ಮುಂದಿದೆ...

2017ರಲ್ಲಿನ ಸಮೀಕ್ಷೆ

2017ರಲ್ಲಿನ ಸಮೀಕ್ಷೆ

2017ರ ಜುಲೈ 19ರಿಂದ ಆಗಸ್ಟ್ 10ರವರೆಗೆ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ.
* ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಸಂದರ್ಶನ
* ಈ ಪೈಕಿ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳ ವಿವಿಧ ಧರ್ಮ, ಜಾತಿಯ ಜನರನ್ನು ಮಾತನಾಡಿಸಿ ಸಮೀಕ್ಷೆ ವರದಿ ಪ್ರಕಟಿಸಲಾಗಿತ್ತು.

2017ರ ಸಮೀಕ್ಷೆ
ಕಾಂಗ್ರೆಸ್ -120-132
ಬಿಜೆಪಿ : 60-72
ಜೆಡಿಎಸ್ : 20-30
ಇತರೆ : 1-7

2018ರ ಮಾರ್ಚ್ ನಲ್ಲಿ ನಡೆದ ಸಮೀಕ್ಷೆ

2018ರ ಮಾರ್ಚ್ ನಲ್ಲಿ ನಡೆದ ಸಮೀಕ್ಷೆ

2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ. ಈ ಪೈಕಿ 326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ. 326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ.

2018ರ ಮಾರ್ಚ್ ಸಮೀಕ್ಷೆ
ಕಾಂಗ್ರೆಸ್ : 126
ಬಿಜೆಪಿ : 70
ಜೆಡಿಎಸ್ : 27-40
ಇತರೆ : 1

ಸಿಫೋರ್ ಸಮೀಕ್ಷೆ 2018

ಸಿಫೋರ್ ಸಮೀಕ್ಷೆ 2018

2018ರ ಏಪ್ರಿಲ್ 20 ರಿಂದ 30ರ ಅವಧಿಯಲ್ಲಿ ಸುಮಾರು 6,247 ಮತದಾರರನ್ನು ಸಂದರ್ಶಿಸಿ, 61 ವಿಧಾನಸಭಾ ಕ್ಷೇತಗಳಲ್ಲಿ ಅಭಿಪ್ರಾಯ, ಮಾಹಿತಿ ಕಲೆ ಹಾಕಿ, ವಿವಿಧ ಸ್ತರ, ಜಾತಿ, ಪಂಗಡಗಳನ್ನು ಸಂದರ್ಶಿಸಿ ಸಮೀಕ್ಷೆ ತಯಾರಿಸಲಾಗಿದೆ. ಶೇ 95ರಷ್ಟು ನಿಖರತೆ 2% ದೋಷ ನಿರೀಕ್ಷಿಸಬಹುದು ಎಂದು ಸಿಫೋರ್ ಸಂಸ್ಥೆ ಹೇಳಿದೆ.

2018ರ ಏಪ್ರಿಲ್ ಸಮೀಕ್ಷೆ
ಕಾಂಗ್ರೆಸ್ : 118-128
ಬಿಜೆಪಿ : 63-73
ಜೆಡಿಎಸ್ :29-36
ಇತರೆ : 2-7

ಶೇಕಡಾವಾರು ಮತಗಳ ಹೋಲಿಕೆ

ಶೇಕಡಾವಾರು ಮತಗಳ ಹೋಲಿಕೆ

2017: ಸಿ ಫೋರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಂತೆ ಶೇಕಡಾವಾರು ಮತಗಳು ಯಾವ ಯಾವ ಪಕ್ಷಗಳಿಗೆ ಎಷ್ಟೆಷ್ಟು ಸಿಗಬಹುದು ಎಂಬ ಲೆಕ್ಕ ಇಲ್ಲಿದೆ ಕಾಂಗ್ರೆಸ್‌ : ಶೇ 43
ಬಿಜೆಪಿ : ಶೇ 32
ಜೆಡಿಎಸ್‌ : ಶೇ 17
ಇತರ ಪಕ್ಷಗಳಿಗೆ ಶೇ 8 ಸಿಗುವ ನಿರೀಕ್ಷೆಗಳಿವೆ.

***
2018ರ ಮಾರ್ಚ್ ತಿಂಗಳಿನಲ್ಲಿ ನಡೆಸಿದ ಸಮೀಕ್ಷೆಯಂತೆ
* ಕಾಂಗ್ರೆಸ್ ತನ್ನ ಮತಗಳಿಕೆಯನ್ನು ಶೇಕಡಾ 9ರಷ್ಟು ಹೆಚ್ಚಿಸಿಕೊಂಡು, ಶೇಕಡಾ 46 ಮತಗಳನ್ನು ಪಡೆಯಲಿದೆ
* ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ ಶೇಕಡಾ 31 ಮತ್ತು ಶೇಕಡಾ 16 ಮತಗಳನ್ನು ಪಡೆಯಲಿದೆ.
***

2018ರ ಏಪ್ರಿಲ್ ತಿಂಗಳಿನಲ್ಲಿ ನಡೆಸಿದ ಸಮೀಕ್ಷೆಯಂತೆ
* ಕಾಂಗ್ರೆಸ್ ತನ್ನ ಮತಗಳಿಕೆಯನ್ನು ಶೇಕಡಾ 18ರಷ್ಟು ಹೆಚ್ಚಿಸಿಕೊಂಡು, ಶೇಕಡಾ 45 ಮತಗಳನ್ನು ಪಡೆಯಲಿದೆ
* ಬಿಜೆಪಿ ಶೇ 12ರಷ್ಟು ಮತ ಹೆಚ್ಚಿಸಿಕೊಂಡು ಶೇ 32ರಷ್ಟು ಪಡೆಯಲಿದೆ.
* ಜೆಡಿಎಸ್ ಮೈನಸ್ 2% ಮತ ಕಳೆದುಕೊಂಡು ಶೇ 18ರಷ್ಟು ಗಳಿಸಲಿದೆ.
* ಇತರೆ ಮೈನಸ್ 18ರಂತೆ ಶೇ 5ರಷ್ಟು ಪಡೆಯಲಿದೆ.

2017ರಲ್ಲಿ ವಯೋಮಿತಿ ಆಧಾರ : ಕಾಂಗ್ರೆಸ್ ಫೇವರಿಟ್

2017ರಲ್ಲಿ ವಯೋಮಿತಿ ಆಧಾರ : ಕಾಂಗ್ರೆಸ್ ಫೇವರಿಟ್

2017ರ ಸಮೀಕ್ಷೆ ಯಾವ ವಯೋಮಿತಿಯವರು ಯಾರಿಗೆ ಮತ ಹಾಕುತ್ತಾರೆ
ಕಾಂಗ್ರೆಸ್ :
18-25 ವರ್ಷ : 42%,
26-35: 43%,
36-50: 44%
50 ವರ್ಷಕ್ಕಿಂತ ಮೇಲ್ಪಟ್ಟು:47%
***
ಬಿಜೆಪಿ :
18-25 ವರ್ಷ : 36%
26-35: 32%
36-50: 28%
50 ವರ್ಷಕ್ಕಿಂತ ಮೇಲ್ಪಟ್ಟು: 47%
****
ಜೆಡಿಎಸ್ :
18-25 ವರ್ಷ : 19%
26-35: 16%
36-50: 17%
50 ವರ್ಷಕ್ಕಿಂತ ಮೇಲ್ಪಟ್ಟು: 47%
***
ಇತರೆ
18-25 ವರ್ಷ : 3%
26-35: 9%
36-50: 11%
50 ವರ್ಷಕ್ಕಿಂತ ಮೇಲ್ಪಟ್ಟು: 7%

2018ರ ವಯೋಮಿತಿ ಆಧಾರದಲ್ಲೂ ಕೈ ಮೇಲುಗೈ

2018ರ ವಯೋಮಿತಿ ಆಧಾರದಲ್ಲೂ ಕೈ ಮೇಲುಗೈ

2018ರ ಸಮೀಕ್ಷೆ ಯಾವ ವಯೋಮಿತಿಯವರು ಯಾರಿಗೆ ಮತ ಹಾಕುತ್ತಾರೆ. (2017ರ ಸಮೀಕ್ಷೆ ಹೋಲಿಕೆ)
ಕಾಂಗ್ರೆಸ್ :
18-25 ವರ್ಷ : 45% (+3%)
26-35: 47% (+4%),
36-50: 42% (-2%)
50 ವರ್ಷಕ್ಕಿಂತ ಮೇಲ್ಪಟ್ಟು:49% (+2%)
***
ಬಿಜೆಪಿ :
18-25 ವರ್ಷ : 36%
26-35: 32%
36-50: 33% (+4%)
50 ವರ್ಷಕ್ಕಿಂತ ಮೇಲ್ಪಟ್ಟು: 26% (-21%)
****
ಜೆಡಿಎಸ್ :
18-25 ವರ್ಷ : 15% (-4%)
26-35: 17% (+1%)
36-50: 19% (+2%)
50 ವರ್ಷಕ್ಕಿಂತ ಮೇಲ್ಪಟ್ಟು: 20% (-27%)
***
ಇತರೆ
18-25 ವರ್ಷ : 4%(+1%)
26-35: 5% (-4%)
36-50: 6%(-5%)
50 ವರ್ಷಕ್ಕಿಂತ ಮೇಲ್ಪಟ್ಟು: 5% (-2%)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+