ಪಬ್ಲಿಕ್ ಟಿವಿ ಸಮೀಕ್ಷೆ : ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ 19 ಸ್ಥಾನ
ಬೆಂಗಳೂರು, ಮೇ 02 : 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಪಬ್ಲಿಕ್ ಟಿವಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಮುಂದುವರೆಯಲಿದ್ದು, ಪಕ್ಷ 19 ಸ್ಥಾನಗಳಲ್ಲಿ ಜಯಗಳಿಸಲಿದೆ.
ಪಬ್ಲಿಕ್ ಟಿವಿ ಬುಧವಾರ ರಾತ್ರಿ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶದ ಪ್ರಕಾರ ಅತಂತ್ರ ವಿಧಾನಸಭೆ ರಚನೆಯಾಗಲಿದ್ದು, ಕಾಂಗ್ರೆಸ್ 95-100ಸ್ಥಾನಗಳಲ್ಲಿ ಜಯಗಳಿಸಲಿದೆ.
ಹಳೆ ಮೈಸೂರು ಭಾಗದಲ್ಲಿ 61 ಕ್ಷೇತ್ರಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರು. ಜೆಡಿಎಸ್ ಪಕ್ಷವನ್ನು ತನ್ನ ಭದ್ರ ನೆಲೆಯನ್ನು ಈ ಭಾಗದಲ್ಲಿ ಹೊಂದಿದೆ. ಚುನಾವಣಾ ಪೂರ್ವ ಸಮೀಕ್ಷೆಯಂತೆ ಜೆಡಿಎಸ್ 19 ಸ್ಥಾನಗಳಲ್ಲಿ ಜಯಗಳಿಸಲಿದೆ.

ಯಾವ ಪಕ್ಷಕ್ಕೆ ಎಷ್ಟು ಸೀಟು? : ಹಳೆ ಮೈಸೂರು ಭಾಗದ 61 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಲ್ಲಿ ಸಮಬಲದ ಹೋರಾಟ ನಡೆಯಲಿದೆ.
ಜೆಡಿಎಸ್ - 19
ಕಾಂಗ್ರೆಸ್ - 17
ಬಿಜೆಪಿ - 5 ಸ್ಥಾನಗಳನ್ನು ಪಡೆಯಲಿವೆ. 20 ಕ್ಷೇತ್ರಗಳು ಸಮಬಲದ ಹೋರಾಟಕ್ಕೆ ಸಾಕ್ಷಿಯಾಗಲಿವೆ.












Click it and Unblock the Notifications