ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜರಾಜೇಶ್ವರಿ ನಗರ ಫಲಿತಾಂಶ: ಮುನಿರತ್ನಗೆ ಭರ್ಜರಿ ಜಯ

|
Google Oneindia Kannada News

Recommended Video

      Karnataka Elections 2018 : ರಾಜರಾಜೇಶ್ವರಿ ನಗರದ ಮತ ಎಣಿಕೆ ಆರಂಭ | Oneindia Kannada

      ಬೆಂಗಳೂರು, ಮೇ 31: ಬಹುನಿರೀಕ್ಷಿತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಇಂದು(ಮೇ 31) ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭರ್ಜರಿ ಜಯ ದಾಖಲಿಸುವ ಮೂಲಕ ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಮರು ಆಯ್ಕೆಯಾಗಿದ್ದಾರೆ.

      18 ಸುತ್ತುಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ಸಿನ ಮುನಿರತ್ನ 108064 ಮತಗಳನ್ನು ಪಡೆದರೆ, ಬಿಜೆಪಿಯ ತುಳಸಿ ಮುನಿರಾಜು ಗೌಡ 82572 ಮತಗಳು ಮತ್ತು ಜೆಡಿಎಸ್ ನ ರಾಮಚಂದ್ರ 60360 ಮತಗಳನ್ನು ಪಡೆದು ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

      ನಕಲಿ ಮತದಾರರ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಮೇ 12 ರಂದು ನಡೆಯಬೇಕಿದ್ದ ಈ ಕ್ಷೇತ್ರದ ಚುನಾವಣೆಯನ್ನು ಮೇ 28 ಕ್ಕೆ ಮುಂದೂಡಲಾಗಿತ್ತು.

      ಸೋಮವಾರ ನಡೆದ ಶಾಂತಿಯುತ ಚುನಾವಣೆಯಲ್ಲಿ ಶೇ.53 ರಷ್ಟು ಮತದಾನ ದಾಖಲಾಗಿತ್ತು. ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೆ ಬೆಂಬಲ ನೀಡಲು ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಒಪ್ಪದ ಕಾರಣ ಮೂರೂ ಪಕ್ಷಗಳ ನಡುವಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಮುನಿರಾಜು ಗೌಡ ಸ್ಪರ್ಧಿಸುತ್ತಿದ್ದಾರೆ.

      ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಒಟ್ಟು ಮತದಾರರ ಸಂಖ್ಯೆ 4,54,901 . ಪುರುಷ ಮತದಾರರ ಸಂಖ್ಯೆ 2,38,015, ಮಹಿಳಾ ಮತದಾರರ ಸಂಖ್ಯೆ 2,16,821, ತೃತೀಯ ಲಿಂಗಿಗಳು ಒಟ್ಟು 65.

      Karnataka Election Results, Trends 2018: Rajarajeshwari Nagar: LIVE Updates

      9 ಸಾವಿರಕ್ಕೂ ಅಧಿಕ ನಕಲಿ ಮತದಾರರ ಚೀಟಿಯಿಂದಾಗಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಜಯ ಯಾರಿಗೆ ಒಲಿಯಲಿದೆ ಎಂಬುದು ಇಂದು ತಿಳಿಯಲಿದೆ. ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

      Newest FirstOldest First
      1:34 PM, 31 May

      ಎಲ್ಲಾ ಸುತ್ತುಗಳ ಮತ ಎಣಿಕೆಯ ನಂತರ ಅಭ್ಯರ್ಥಿಗಳು ಪಡೆದ ಮತಗಳ ವಿವರ: ಕಾಂಗ್ರೆಸ್ಸಿನ ಮುನಿರತ್ನ 108064 ಮತಗಳು, ಬಿಜೆಪಿಯ ಮುನಿರಾಜು ಗೌಡ 82572 ಮತಗಳು ಮತ್ತು ಜೆಡಿಎಸ್ ನ ರಾಮಚಂದ್ರ 60360 ಮತಗಳು
      1:26 PM, 31 May

      ಪ್ರತಿಷ್ಠಿತ ರಾಜರಾಜೇಶ್ವರಿ ನಗರ ಕ್ಷೇತ್ರದ ಜನಪ್ರತಿನಿಧಿಯಾಗಿ ಮುನಿರತ್ನ ಮರು ಆಯ್ಕೆ
      1:25 PM, 31 May

      ಮುನಿರತ್ನ ಗೆಲುವಿಗೆ ಎಲ್ಲೆಲ್ಲೂ ಸಂಭ್ರಮ ಆಚರಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುನಿರತ್ನ ಬೆಂಬಲಿಗರು
      1:24 PM, 31 May

      25492 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ ಮುನಿರತ್ನ
      1:22 PM, 31 May

      ರಾಜರಾಜೇಶ್ವರಿ ನಗರದಲ್ಲಿ 18 ಸುತ್ತುಗಳ ಮತ ಎಣಿಕೆ ಮುಕ್ತಾಯ. ಮುನಿರತ್ನಗೆ ಭರ್ಜರಿ ಗೆಲುವು.
      1:10 PM, 31 May

      18 ನೇ ಸುತ್ತಿನ ಅಂತ್ಯದ ವೇಳೆಗೆ ಅಭ್ಯರ್ಥಿಗಳು ಪಡೆದ ಮತಗಳು: ಮುನಿರತ್ನ 108064, ಮುನಿರಾಜು ಗೌಡ 82572, ರಾಮಚಂದ್ರ 60360
      1:09 PM, 31 May

      18 ನೇ ಸುತ್ತಿನ ಮತದಾನ ಅಂತ್ಯ. 25494 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಮುನಿರತ್ನ
      Advertisement
      1:00 PM, 31 May

      ರಾಜರಾಜೇಶ್ವರಿನಗರದಲ್ಲಿ ಹಣಬಲ ಗೆದ್ದಿದೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ ಮಾತನ್ನು ನಾನು ಖಂಡಿಸುತ್ತೇನೆ. ಆರ್ ಆರ್ ನಗರದಲ್ಲಿ ಗೆದ್ದಿದ್ದು ಅಭಿವೃದ್ಧಿ ಕಾರ್ಯವೇ ಹೊರತು ಹಣಬಲವಲ್ಲ-ಮುನಿರತ್ನ
      12:59 PM, 31 May

      ನನ್ನ ಎಲ್ಲಾ ಸಂಕಷ್ಟಗಳಲ್ಲೂ ನನ್ನೊಂದಿಗಿದ್ದ ಡಿ ಕೆ ಶಿವಕುಮಾರ್ ಅವರಿಗೆ ಮತ್ತು ಕಾಂಗ್ರೆಸ್ಸಿನ ಎಲ್ಲಾ ಶಾಸಕರಿಗೂ ನನ್ನ ಧನ್ಯವಾದಗಳು- ಮುನಿರತ್ನ
      12:57 PM, 31 May

      ನನ್ನನ್ನು ಆಶೀರ್ವಾದಿಸಿದ ತಾಯಿ ರಾಜರಾಜೇಶ್ವರಿಗೆ ನಾನು ನಮಿಸುತ್ತೇನೆ- ಮುನಿರತ್ನ
      12:57 PM, 31 May

      ಮತದಾರ ದೇವರುಗಳು ನೀಡಿದ ತೀರ್ಪಿಗೆ ನಾನು ತಲೆಬಾಗುತ್ತೇನೆ. ಅವರ ಋಣ ತೀರುಸುವ ಕೆಲಸ ಮಾಡುತ್ತೇನೆ- ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ
      12:47 PM, 31 May

      ಜನಸೇವೆ ಮಾಡಿದ್ದಕ್ಕೆ ಅವರಗೆ ಗೆಲುವು ಲಭಿಸಿದೆ. ಅವರು ಈ ಕ್ಷೇತ್ರದ ಜನರ ವಿಶ್ವಾಸವನ್ನು ಈ ಮೂಲಕ ಎತ್ತಿಹಿಡಿದಿದ್ದಾರೆ. ಮುನಿರತ್ನ ಅವರನ್ನು ಗೆಲ್ಲಿಸಿದ್ದಕ್ಕಾಗಿ ಈ ಕ್ಷೇತ್ರದ ಜನರಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ- ಡಿ.ಕೆ.ಶಿವಕುಮಾರ್, ಕನಕಪುರ ಕಾಂಗ್ರೆಸ್ ಶಾಸಕ
      Advertisement
      12:41 PM, 31 May

      ನಾನು ಯಾರಿಗೂ ಯಾವುದೇ ಆಮಿಷವೊಡ್ಡಿಲ್ಲ. ಪ್ರಾಮಾಣಿಕವಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಅದಕ್ಕೆಂದೇ ನಾನು ಸೋತಿದ್ದೇನೆ. ತಪ್ಪು ನನ್ನದೋ ಜನರದ್ದೋ- ಹುಚ್ಚಾ ವೆಂಕಟ್, ಪಕ್ಷೇತರ ಅಭ್ಯರ್ಥಿ
      12:40 PM, 31 May

      ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಮುನಿರತ್ನ ಗೆದ್ದಿರುವುದು ಲೋಕಸಭಾ ಚುನಾವಣೆಯ ದಿಕ್ಸೂಚಿ- ಸಿದ್ದರಾಮಯ್ಯ
      12:38 PM, 31 May

      ಮುನಿರತ್ನ ಅವರ ಗೆಲುವನ್ನು ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಆಘಾತ ನೀಡುವಂತೆ ಡಿ ಕೆ ಶಿವಕುಮಾರ್ ಅವರ ಆಪ್ತರ ಮನೆ ಮೇಲೆ 5 ಕಡೆ ಸಿಬಿಐ ದಾಳಿ ನಡೆದಿದೆ.
      12:37 PM, 31 May

      ಮುನಿರತ್ನ ಅವರು ಗೆಲುವು ಸಾಧಿಸುವುದು ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ.
      12:30 PM, 31 May

      15 ನೇ ಸುತ್ತಿನ ಮತ ಎಣಿಕೆ ಅಂತ್ಯ. ಅಭ್ಯರ್ಥಿಗಳು ಇದುವರೆಗೂ ಪಡೆದ ಒಟ್ಟು ಮತಗಳು ಕಾಂಗ್ರೆಸ್ಸಿನ ಮುನಿರತ್ನ 103195, ಬಿಜೆಪಿಯ ಮುನಿರಾಜು ಗೌಡ 69,769,ಜೆಡಿಎಸ್ ನ ರಾಮಚಂದ್ರ 54289
      12:29 PM, 31 May

      15 ನೇ ಸುತ್ತಿನ ಮತ ಎಣಿಕೆ ಅಂತ್ಯ. ಮತ್ತೆ ಭಾರೀ ಮುನ್ನಡೆ ಕಾಯ್ದುಕೊಂಡ ಮುನಿರತ್ನ
      12:15 PM, 31 May

      ನಾವು ರಾಜರಾಜೇಶ್ವರಿನಗರ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ. ಬೆಂಗಳೂರಿನ ಜನರು ನಮಗೆ ಆಶೀರ್ವಾದ ನೀಡಿದ್ದಾರೆ- ದಿನೇಶ್ ಗುಂಡೂರಾವ್, ಗಾಂಧಿನಗರ ಕಾಂಗ್ರೆಸ್ ಶಾಸಕ
      12:08 PM, 31 May

      ಯಾವುದೇ ತೀರ್ಪು ನೀಡಿದರೂ, ಅದು ಜನರ ತೀರ್ಮಾನ. ಆ ತೀರ್ಮಾನಕ್ಕೆ ನಾವು ತಲೆಬಾಗುತ್ತೇವೆ- ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
      12:02 PM, 31 May

      14 ನೇ ಸುತ್ತು ಮುಕ್ತಾಯ. ಹುಚ್ಚಾ ವೆಂಕಟ್ ಪಡೆದ ಮತಗಳು 604, ನೋಟಾ ಮತಗಳು 2061
      12:01 PM, 31 May

      14 ನೇ ಸುತ್ತಿನ ಮತ ಎಣಿಕೆ ಅಂತ್ಯ. ಅಭ್ಯರ್ಥಿಗಳು ಪಡೆದ ಮತಗಳು: ಕಾಂಗ್ರೆಸ್ಸಿನ ಮುನಿರತ್ನ 97440, ಬಿಜೆಪಿಯ ಮುನಿರಾಜುಗೌಡ 56278, ಜೆಡಿಎಸ್ ನ ರಾಮಚಂದ್ರ45345
      11:59 AM, 31 May

      14 ನೇ ಸುತ್ತಿನ ಮತ ಎಣಿಕೆ ಅಂತ್ಯ. ಭಾರೀ ಮುನ್ನಡೆ ಕಾಯ್ದುಕೊಂಡ ಮುನಿರತ್ನ
      11:47 AM, 31 May

      13ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಮುನಿರತ್ನ
      11:41 AM, 31 May

      ಮುನಿರತ್ನ ಗೆಲುವು ಸಾಧಿಸುತ್ತಿರುವು ಖಚಿತ ಎಂಬುದು ತಿಳಿಯುತ್ತಿದ್ದಂತೆಯೇ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
      11:39 AM, 31 May

      ಮುನಿರತ್ನ ಗೆಲುವು ಬಹುತೇಕ ಖಚಿತ ಎಂಬುದು ತಿಳಿಯುತ್ತಿದಂತೆಯೇ ಸಂಭ್ರಮ ಆಚರಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು
      11:30 AM, 31 May

      12 ನೇ ಸುತ್ತಿನಲ್ಲೂ ಭಾರೀ ಮುನ್ನಡೆ ಕಾಯ್ದುಕೊಂಡ ಮುನಿರತ್ನ
      11:28 AM, 31 May

      11ನೇ ಸುತ್ತಿನ ಅಂತ್ಯದ ವೇಳೆಗೆ ಅಭ್ಯರ್ಥಿಗಳು ಪಡೆದ ಮತಗಳು: ಕಾಂಗ್ರೆಸ್ ಮುನಿರತ್ನ 84,908, ಬಿಜೆಪಿಯ ಮುನಿರಾಜು ಗೌಡ 38357, ಜೆಡಿಎಸ್ ನ ರಾಮಚಂದ್ರ 29519
      11:26 AM, 31 May

      ಇದುವರೆಗೆ ಹುಚ್ಚಾ ವೆಂಕಟ್ ಗೆ 445 ಮತಗಳು, ನೋಟಾ ಮತಗಳು 1533
      11:23 AM, 31 May

      ಮೊದಲ ಸುತ್ತಿನಿಂದಲೂ ಭಾರೀ ಅಂತರದ ಮುನ್ನಡೆ ಕಾಯ್ದುಕೊಂಡಿರುವ ಮುನಿರತ್ನ. ಈಗಾಗಲೇ ಮುನಿರತ್ನ ಅಭಿಮಾನಿಗಳಿಂದ ಆರಂಭವಾಗಿರುವ ಹರ್ಷೋಧ್ಘಾರ
      READ MORE

      English summary
      Karnataka Election Results 2018: Rajarajeshwari Nagar. Live Updates in Kannada : Get latest Trends, Results, Rajarajeswhari Nagar assembly constituenciy. Polling held on May 28th and results to be announced on May 31st.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X