Karnataka Assembly Elections: ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಘಟಾನುಗಟಿಗಳು
ಬೆಂಗಳೂರು, ಏಪ್ರಿಲ್ 04: ಕರ್ನಾಟಕದಲ್ಲಿ ರಾಜಕಾರಣಿಗಳು, ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲ ಚಿತ್ತ ರಾಜ್ಯ ವಿಧಾನಸಭಾ ಚುನಾವಣೆಯತ್ತ ನೆಟ್ಟಿದೆ. ಚುನಾವಣೆಯಲ್ಲಿ ಹೊಸಬರಿಗೆ, ಕಾರ್ಯಕರ್ತರಿಗೂ ಟಿಕೆಟ್ ಲಭಿಸಿ ಕಡಿಮೆ ಅಂತರದಿಂದ ಸೋತರೆ ಅದು ಅಷ್ಟೊಂದು ದೊಡ್ಡ ವಿಷಯ ಅನ್ನಿಸದು.
ಆದರೆ ಪ್ರತಿಷ್ಠಿತ ಚನಾವಣಾ ಕಣದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸಾಕಷ್ಟು ಮತಗಳ ಅಂತರದಿಂದ ಸೋತರೆ ಅದು ದೊಡ್ಡ ಸೋಲಾಗಿ ಪರಿಣಮಿಸುತ್ತದೆ. ಆ ಸೋಲಿನ ದುಷ್ಪರಿಣಾಮ ಆಯಾಯ ಪಕ್ಷಗಳ ಮೇಲೂ ಆಗುತ್ತದೆ. ಈ ಹಿಂದಿನ 2018ರ ಚುನಾವಣೆಯಲ್ಲಿ ಈ ರೀತಿ ಸಾಕಷ್ಟು ಮತಗಳ ಅಂತರಗಳಿಂದ ಸೋತ ಘಟಾನುಗಟಿ ನಾಯಕರು ಯಾರು?, ಎಷ್ಟು ಅಂತರದಿಂದ ಮತ್ತು ಯಾರಿಂದ ಸೋಲು ಕಂಡರು, ಅವರ ಕ್ಷೇತ್ರ ಯಾವುದು? ಎಂಬೆಲ್ಲ ಮಾಹಿತಿಗಳು ಇಲ್ಲಿ ತಿಳಿಯೋಣ.

ಪ್ರಮುಖ ಪಕ್ಷಗಳಲ್ಲಿ ಹಿಂದಿನಿಂದ ಗುರುತಿಸಿಕೊಂಡ ಹಿರಿಯರು ಮತ್ತು ಪ್ರಭಾವಿ ಅಭ್ಯರ್ಥಿಗಳ ಸೋಲು ಅದು ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಮತ್ತು ಟಿಕೆಟ್ ಘೋಷಣೆ ಮೇಲೂ ಪ್ರತಿಕೂಲ ಪರಿಣಾಮ ಬಿಳುವುದು ಸಾಮಾನ್ಯ. ಹೀಗಾಗಿ ಟಿಕೆಟ್‌ಗಾಗಿ ಲಾಬಿ, ವಾಗ್ವಾದ, ಟೀಕೆಗಳು, ಅಭ್ಯರ್ಥಿಗಳ ಬಂಡಾಯ ಮತ್ತು ಪಕ್ಷಾಂತರ ಆರಂಭವಾಗುತ್ತದೆ. ಆ ಮೂಲಕ ಸೋತ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲುವಿನ ಅದೃಷ್ಟ ಪರೀಕ್ಷೆ ಮುಂದಾಗಲು ಯತ್ನಿಸುತ್ತಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಘಟಾನುಗಟಿ ನಾಯಕರನ್ನು ನೋಡುವುದಾದರೆ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಿಮ್ಮನೆ ರತ್ನಾಕರ ಅವರು ಬಿಜೆಪಿಯ ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿರುದ್ಧ ಬರೋಬ್ಬರಿ 21,955 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಹೀಗೆ ಚುನಾವಣೆಯಲ್ಲಿ ಸೋಲು ಕಂಡ ಪ್ರಮುಖ ಪಟ್ಟಿ ನಿಮ್ಮ ಮುಂದಿದೆ.

2018 ಪರಾಭವಗೊಂಡ ಪ್ರಮುಖರ ಪಟ್ಟಿ
| ಪರಾಜಿತ ಅಭ್ಯರ್ಥಿ | ಪಕ್ಷ | ಕ್ಷೇತ್ರ | ಸೋಲಿನ ಅಂತರ | ಗೆದ್ದ ಅಭ್ಯರ್ಥಿ |
| ಉಮಾಶ್ರೀ | ಕಾಂಗ್ರೆಸ್ | ತೇರದಾಳ | 21,113 | ಸಿದ್ದು ಸವದಿ |
| ಬಾಬೂರಾವ್ ಚಿಂಚನಸೂರು | ಕಾಂಗ್ರೆಸ್ | ಗುರುಮಿಠಕಲ್ | 24,480 | ನಾಡನಗೌಡ ಕಂಡಕೂರು |
| ಎಚ್. ಆಂಜನೇಯ | ಕಾಂಗ್ರೆಸ್ | ಹೊಳಲಕೆರೆ | 38,940 | ಎಂ.ಚಂದ್ರಪ್ಪ |
| ಶಾಮನೂರು ಮಲ್ಲಿಕಾರ್ಜುನ | ಕಾಂಗ್ರೆಸ್ | ದಾವಣಗೆರೆ ಉತ್ತರ | 4,071 | ಎಸ್.ಎ.ರವೀಂದ್ರನಾಥ್ |
| ಕಿಮ್ಮನೆ ರತ್ನಾಕರ | ಕಾಂಗ್ರೆಸ್ | ತೀರ್ಥಹಳ್ಳಿ | 21,955 | ಆರಗ ಜ್ಣಾನೇಂದ್ರ |
| ಮಧು ಬಂಗಾರಪ್ಪ | ಜೆಡಿಎಸ್ | ಸೊರಬ | 13,286 | ಕುಮಾರ್ ಬಂಗಾರಪ್ಪ |
| ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ | ಸಾಗರ | 8,039 | ಹರತಾಳು ಹಾಲಪ್ಪ |
| ಮೋಟಮ್ಮ | ಕಾಂಗ್ರೆಸ್ | ಮೂಡಿಗೆರೆ | 12,512 | ಎಂ.ಪಿ.ಕುಮಾರಸ್ವಾಮಿ |
| ಬಿ.ಎಲ್. ಶಂಕರ್ | ಕಾಂಗ್ರೆಸ್ | ಚಿಕ್ಕಮಗಳೂರು | 26,314 | ಸಿ.ಟಿ.ರವಿ |
| ವೈ.ಎಸ್.ವಿ.ದತ್ತಾ | ಜೆಡಿಎಸ್ | ಕಡೂರು | 15,372 | ಕೆ.ಎಸ್.ಪ್ರಕಾಶ್ |
| ರಮಾನಾಥ ರೈ | ಕಾಂಗ್ರೆಸ್ | ಬಂಟ್ವಳ | 15,971 | ಯು.ರಾಜೇಶ್ ನಾಯಕ್ |
| ಡಾ.ಎಚ್.ಸಿ.ಮಹದೇವಪ್ಪ | ಕಾಂಗ್ರೆಸ್ | ತಿ.ನರಸೀಪುರ | 28, 478 | ಅಶ್ವಿನ್ ಕುಮಾರ್ |












Click it and Unblock the Notifications