ಯಾವುದೇ ಖಾತೆ ನಿರೀಕ್ಷಿಸಬೇಡಿ: ಡಿಕೆಶಿಗೆ ಸ್ವಾಮೀಜಿ ಸಲಹೆ

Recommended Video

      ಕಾಡು ಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿಗಳಿಂದ ಡಿ ಕೆ ಶಿಯ ಭವಿಷ್ಯ | Oneindia Kannada

      ಬೆಂಗಳೂರು, ಜೂನ್ 15: ಇಂಥದ್ದೇ ಖಾತೆ ಬೇಕು ಎನ್ನುವ ಅಪೇಕ್ಷೆ ಪಡುವುದು ಬೇಡ ದೊರೆತ ಖಾತೆಯಲ್ಲಿ ನಿಷ್ಠೆಯಿಂದ ಮುಂದುವರೆಯಿರಿ ಎಂದು ಕಾಡು ಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.

      ಶಿವಕುಮಾರ್ ಅವರಿಗೆ ತಮ್ಮ ಪಾಲಿಗೆ ಬರುವ ಖಾತೆಯನ್ನು ಅವರು ಸ್ವೀಕರಿಸಲಿ, ಇಂಥದ್ದೇ ಖಾತೆ ಬೇಕು ಎಂದು ಕೇಳುವುದು ಬೇಡ, ಇರುವ ಖಾತೆಯಲ್ಲೇ ಮುಂದುವರೆಯಲಿ, ಯಾವ ಖಾತೆಯಾದರೂ ಕಾಯಕವೇ ಕೈಲಾಸ ಎಂದು ಕೆಲಸ ಮಾಡಲಿ, ಹಾಗೆ ಮಾಡಿದರೆ ಮುಂದೊಂದು ದಿನ ಅವರು ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

      ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕೆಲವು ಶಾಸಕರು ತಮಗೆ ಸಚಿವ ಸ್ಥಾನ ನೀಡಲಿಲ್ಲ ಎಂದು ಬೇಸರ ಮಾಡಿಕೊಂಡರೆ ಇನ್ನೂ ಸಚಿವ ಸ್ಥಾನ ದೊರೆತವರೂ ಕೂಡ ನೀಡಿರುವ ಖಾತೆ ಬೇಡ ಬೇರೆಯೇ ಖಾತೆ ಬೇಕು, ತಾವು ಕೇಳಿದ ಖಾತೆಯನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ.

      Shivayogi seer advices DKS to dont expect more

      ಸಿದ್ದೇಶ್ವರ ಮಠವು ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿದೆ. ಇರುವ ಸ್ಥಾನದಲ್ಲಿಯೇ ಅವರು ಸಾಧನೆ ಮಾಡಬೇಕು, ಖಾತೆ ಯಾವುದಾದರೂ ಕಾಯಕ ಒಂದೇ, ಅವರು ಸಿದ್ದೇಶ್ವರ ಮಠದಲ್ಲಿ ಮಗನಾಗಿ ಬೆಳೆದಿದ್ದಾರೆ ಅವರಿಗೆ ದೇವರ ಆಶೀರ್ವಾದವಿದೆ ಎಲ್ಲದೂ ಒಳ್ಳೆಯದೇ ಆಗಲಿದೆ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+