Karnataka Elections 2018 : ರಾಜರಾಜೇಶ್ವರಿ ನಗರದ ಮತ ಎಣಿಕೆ ಆರಂಭ | Oneindia Kannada
ಬೆಂಗಳೂರು, ಮೇ 31: ಬಹುನಿರೀಕ್ಷಿತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಇಂದು(ಮೇ 31) ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭರ್ಜರಿ ಜಯ ದಾಖಲಿಸುವ ಮೂಲಕ ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಮರು ಆಯ್ಕೆಯಾಗಿದ್ದಾರೆ.
18 ಸುತ್ತುಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ಸಿನ ಮುನಿರತ್ನ 108064 ಮತಗಳನ್ನು ಪಡೆದರೆ, ಬಿಜೆಪಿಯ ತುಳಸಿ ಮುನಿರಾಜು ಗೌಡ 82572 ಮತಗಳು ಮತ್ತು ಜೆಡಿಎಸ್ ನ ರಾಮಚಂದ್ರ 60360 ಮತಗಳನ್ನು ಪಡೆದು ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ನಕಲಿ ಮತದಾರರ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಮೇ 12 ರಂದು ನಡೆಯಬೇಕಿದ್ದ ಈ ಕ್ಷೇತ್ರದ ಚುನಾವಣೆಯನ್ನು ಮೇ 28 ಕ್ಕೆ ಮುಂದೂಡಲಾಗಿತ್ತು.
ಸೋಮವಾರ ನಡೆದ ಶಾಂತಿಯುತ ಚುನಾವಣೆಯಲ್ಲಿ ಶೇ.53 ರಷ್ಟು ಮತದಾನ ದಾಖಲಾಗಿತ್ತು. ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೆ ಬೆಂಬಲ ನೀಡಲು ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಒಪ್ಪದ ಕಾರಣ ಮೂರೂ ಪಕ್ಷಗಳ ನಡುವಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಮುನಿರಾಜು ಗೌಡ ಸ್ಪರ್ಧಿಸುತ್ತಿದ್ದಾರೆ.
ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಒಟ್ಟು ಮತದಾರರ ಸಂಖ್ಯೆ 4,54,901 . ಪುರುಷ ಮತದಾರರ ಸಂಖ್ಯೆ 2,38,015, ಮಹಿಳಾ ಮತದಾರರ ಸಂಖ್ಯೆ 2,16,821, ತೃತೀಯ ಲಿಂಗಿಗಳು ಒಟ್ಟು 65.
9 ಸಾವಿರಕ್ಕೂ ಅಧಿಕ ನಕಲಿ ಮತದಾರರ ಚೀಟಿಯಿಂದಾಗಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಜಯ ಯಾರಿಗೆ ಒಲಿಯಲಿದೆ ಎಂಬುದು ಇಂದು ತಿಳಿಯಲಿದೆ. ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.
May 31, 2018, 1:34 pm IST
ಎಲ್ಲಾ ಸುತ್ತುಗಳ ಮತ ಎಣಿಕೆಯ ನಂತರ ಅಭ್ಯರ್ಥಿಗಳು ಪಡೆದ ಮತಗಳ ವಿವರ: ಕಾಂಗ್ರೆಸ್ಸಿನ ಮುನಿರತ್ನ 108064 ಮತಗಳು, ಬಿಜೆಪಿಯ ಮುನಿರಾಜು ಗೌಡ 82572 ಮತಗಳು ಮತ್ತು ಜೆಡಿಎಸ್ ನ ರಾಮಚಂದ್ರ 60360 ಮತಗಳು
May 31, 2018, 1:26 pm IST
ಪ್ರತಿಷ್ಠಿತ ರಾಜರಾಜೇಶ್ವರಿ ನಗರ ಕ್ಷೇತ್ರದ ಜನಪ್ರತಿನಿಧಿಯಾಗಿ ಮುನಿರತ್ನ ಮರು ಆಯ್ಕೆ
May 31, 2018, 1:25 pm IST
ಮುನಿರತ್ನ ಗೆಲುವಿಗೆ ಎಲ್ಲೆಲ್ಲೂ ಸಂಭ್ರಮ ಆಚರಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುನಿರತ್ನ ಬೆಂಬಲಿಗರು
May 31, 2018, 1:24 pm IST
25492 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ ಮುನಿರತ್ನ
May 31, 2018, 1:22 pm IST
ರಾಜರಾಜೇಶ್ವರಿ ನಗರದಲ್ಲಿ 18 ಸುತ್ತುಗಳ ಮತ ಎಣಿಕೆ ಮುಕ್ತಾಯ. ಮುನಿರತ್ನಗೆ ಭರ್ಜರಿ ಗೆಲುವು.
May 31, 2018, 1:10 pm IST
18 ನೇ ಸುತ್ತಿನ ಅಂತ್ಯದ ವೇಳೆಗೆ ಅಭ್ಯರ್ಥಿಗಳು ಪಡೆದ ಮತಗಳು: ಮುನಿರತ್ನ 108064, ಮುನಿರಾಜು ಗೌಡ 82572, ರಾಮಚಂದ್ರ 60360
May 31, 2018, 1:09 pm IST
18 ನೇ ಸುತ್ತಿನ ಮತದಾನ ಅಂತ್ಯ. 25494 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಮುನಿರತ್ನ
May 31, 2018, 1:00 pm IST
ರಾಜರಾಜೇಶ್ವರಿನಗರದಲ್ಲಿ ಹಣಬಲ ಗೆದ್ದಿದೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ ಮಾತನ್ನು ನಾನು ಖಂಡಿಸುತ್ತೇನೆ. ಆರ್ ಆರ್ ನಗರದಲ್ಲಿ ಗೆದ್ದಿದ್ದು ಅಭಿವೃದ್ಧಿ ಕಾರ್ಯವೇ ಹೊರತು ಹಣಬಲವಲ್ಲ-ಮುನಿರತ್ನ
May 31, 2018, 12:59 pm IST
ನನ್ನ ಎಲ್ಲಾ ಸಂಕಷ್ಟಗಳಲ್ಲೂ ನನ್ನೊಂದಿಗಿದ್ದ ಡಿ ಕೆ ಶಿವಕುಮಾರ್ ಅವರಿಗೆ ಮತ್ತು ಕಾಂಗ್ರೆಸ್ಸಿನ ಎಲ್ಲಾ ಶಾಸಕರಿಗೂ ನನ್ನ ಧನ್ಯವಾದಗಳು- ಮುನಿರತ್ನ
May 31, 2018, 12:57 pm IST
ನನ್ನನ್ನು ಆಶೀರ್ವಾದಿಸಿದ ತಾಯಿ ರಾಜರಾಜೇಶ್ವರಿಗೆ ನಾನು ನಮಿಸುತ್ತೇನೆ- ಮುನಿರತ್ನ
May 31, 2018, 12:57 pm IST
ಮತದಾರ ದೇವರುಗಳು ನೀಡಿದ ತೀರ್ಪಿಗೆ ನಾನು ತಲೆಬಾಗುತ್ತೇನೆ. ಅವರ ಋಣ ತೀರುಸುವ ಕೆಲಸ ಮಾಡುತ್ತೇನೆ- ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ
May 31, 2018, 12:47 pm IST
ಜನಸೇವೆ ಮಾಡಿದ್ದಕ್ಕೆ ಅವರಗೆ ಗೆಲುವು ಲಭಿಸಿದೆ. ಅವರು ಈ ಕ್ಷೇತ್ರದ ಜನರ ವಿಶ್ವಾಸವನ್ನು ಈ ಮೂಲಕ ಎತ್ತಿಹಿಡಿದಿದ್ದಾರೆ. ಮುನಿರತ್ನ ಅವರನ್ನು ಗೆಲ್ಲಿಸಿದ್ದಕ್ಕಾಗಿ ಈ ಕ್ಷೇತ್ರದ ಜನರಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ- ಡಿ.ಕೆ.ಶಿವಕುಮಾರ್, ಕನಕಪುರ ಕಾಂಗ್ರೆಸ್ ಶಾಸಕ
May 31, 2018, 12:41 pm IST
ನಾನು ಯಾರಿಗೂ ಯಾವುದೇ ಆಮಿಷವೊಡ್ಡಿಲ್ಲ. ಪ್ರಾಮಾಣಿಕವಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಅದಕ್ಕೆಂದೇ ನಾನು ಸೋತಿದ್ದೇನೆ. ತಪ್ಪು ನನ್ನದೋ ಜನರದ್ದೋ- ಹುಚ್ಚಾ ವೆಂಕಟ್, ಪಕ್ಷೇತರ ಅಭ್ಯರ್ಥಿ
May 31, 2018, 12:40 pm IST
ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಮುನಿರತ್ನ ಗೆದ್ದಿರುವುದು ಲೋಕಸಭಾ ಚುನಾವಣೆಯ ದಿಕ್ಸೂಚಿ- ಸಿದ್ದರಾಮಯ್ಯ
May 31, 2018, 12:38 pm IST
ಮುನಿರತ್ನ ಅವರ ಗೆಲುವನ್ನು ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಆಘಾತ ನೀಡುವಂತೆ ಡಿ ಕೆ ಶಿವಕುಮಾರ್ ಅವರ ಆಪ್ತರ ಮನೆ ಮೇಲೆ 5 ಕಡೆ ಸಿಬಿಐ ದಾಳಿ ನಡೆದಿದೆ.
May 31, 2018, 12:37 pm IST
ಮುನಿರತ್ನ ಅವರು ಗೆಲುವು ಸಾಧಿಸುವುದು ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ.
May 31, 2018, 12:30 pm IST
15 ನೇ ಸುತ್ತಿನ ಮತ ಎಣಿಕೆ ಅಂತ್ಯ. ಅಭ್ಯರ್ಥಿಗಳು ಇದುವರೆಗೂ ಪಡೆದ ಒಟ್ಟು ಮತಗಳು ಕಾಂಗ್ರೆಸ್ಸಿನ ಮುನಿರತ್ನ 103195, ಬಿಜೆಪಿಯ ಮುನಿರಾಜು ಗೌಡ 69,769,ಜೆಡಿಎಸ್ ನ ರಾಮಚಂದ್ರ 54289
May 31, 2018, 12:29 pm IST
15 ನೇ ಸುತ್ತಿನ ಮತ ಎಣಿಕೆ ಅಂತ್ಯ. ಮತ್ತೆ ಭಾರೀ ಮುನ್ನಡೆ ಕಾಯ್ದುಕೊಂಡ ಮುನಿರತ್ನ
May 31, 2018, 12:15 pm IST
ನಾವು ರಾಜರಾಜೇಶ್ವರಿನಗರ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ. ಬೆಂಗಳೂರಿನ ಜನರು ನಮಗೆ ಆಶೀರ್ವಾದ ನೀಡಿದ್ದಾರೆ- ದಿನೇಶ್ ಗುಂಡೂರಾವ್, ಗಾಂಧಿನಗರ ಕಾಂಗ್ರೆಸ್ ಶಾಸಕ
We won the RR Nagar seat with huge margin, the people of Bengaluru have blessed us- Dinesh Gundu Rao, Congress on trends showing Party leading from RR Nagar #Karnatakapic.twitter.com/MWuj5OaIz5
— Oneindia Kannada (@OneindiaKannada) May 31, 2018
May 31, 2018, 11:30 am IST
12 ನೇ ಸುತ್ತಿನಲ್ಲೂ ಭಾರೀ ಮುನ್ನಡೆ ಕಾಯ್ದುಕೊಂಡ ಮುನಿರತ್ನ
May 31, 2018, 11:28 am IST
11ನೇ ಸುತ್ತಿನ ಅಂತ್ಯದ ವೇಳೆಗೆ ಅಭ್ಯರ್ಥಿಗಳು ಪಡೆದ ಮತಗಳು: ಕಾಂಗ್ರೆಸ್ ಮುನಿರತ್ನ 84,908, ಬಿಜೆಪಿಯ ಮುನಿರಾಜು ಗೌಡ 38357, ಜೆಡಿಎಸ್ ನ ರಾಮಚಂದ್ರ 29519
May 31, 2018, 11:26 am IST
ಇದುವರೆಗೆ ಹುಚ್ಚಾ ವೆಂಕಟ್ ಗೆ 445 ಮತಗಳು, ನೋಟಾ ಮತಗಳು 1533
May 31, 2018, 11:23 am IST
ಮೊದಲ ಸುತ್ತಿನಿಂದಲೂ ಭಾರೀ ಅಂತರದ ಮುನ್ನಡೆ ಕಾಯ್ದುಕೊಂಡಿರುವ ಮುನಿರತ್ನ. ಈಗಾಗಲೇ ಮುನಿರತ್ನ ಅಭಿಮಾನಿಗಳಿಂದ ಆರಂಭವಾಗಿರುವ ಹರ್ಷೋಧ್ಘಾರ
READ MORE
5:56 AM, 31 May
ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ. ಮಧ್ಯಾಹ್ನದ ಹೊತ್ತಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಭವಿಷ್ಯ ನಿರ್ಧಾರ.
5:56 AM, 31 May
ಕಾಂಗ್ರೆಸ್ನಿಂದ ಮುನಿರತ್ನ ನಾಯ್ಡು, ಬಿಜೆಪಿಯಿಂದ ತುಳಸಿ ಮುನಿರಾಜು ಗೌಡ ಮತ್ತು ಜೆಡಿಎಸ್ ನಿಂದ ಜಿ.ಎಚ್. ರಾಮಚಂದ್ರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
5:57 AM, 31 May
ಚುನಾವಣಾ ಕಣದಲ್ಲಿ ಒಟ್ಟು 14 ಜನ ಅಭ್ಯರ್ಥಿಗಳಿದ್ದಾರೆ. ಇಲ್ಲಿ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ. ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಸಹ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿದ್ದು ವಿಶೇಷ.
6:16 AM, 31 May
ಕ್ಷೇತ್ರದ ವ್ಯಾಪ್ತಿಯ ವಾರ್ಡ್ : ಲಕ್ಷ್ಮೀದೇವಿ ನಗರ, ಜಾಲಹಳ್ಳಿ, ಜೆ.ಪಿ.ಪಾರ್ಕ್, ಯಶವಂತಪುರ, ಎಚ್.ಎಂ.ಟಿ, ಲಗ್ಗೆರೆ, ಜ್ಞಾನ ಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ.
6:17 AM, 31 May
ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಮುನಿರತ್ನ. ಚಿತ್ರ ನಿರ್ಮಾನಪಕರೂ ಆಗಿರುವ ಇವರು 2013ರ ಚುನಾವಣೆಯಲ್ಲಿ 71,064 ಮತಗಳನ್ನು ಪಡೆದು ಜಯಗಳಿಸಿದ್ದರು.
6:23 AM, 31 May
ಆರ್ ಆರ್ ನಗರದ ಜ್ಞಾನಾಕ್ಷಿ ಶಾಲೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.
6:43 AM, 31 May
ಮತಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್. ಓರ್ವ ಡಿಸಿಪಿ, ನಾಲ್ವರು ಎಸಿಪಿ, 10 ಇನ್ಸ್ ಪೆಕ್ಟರ್ ಸೇರದಂತೆ 300 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ.
7:59 AM, 31 May
ಸ್ಟ್ರಾಂಗ್ ರೂಮ್ ತೆರೆದ ಚುನಾವಣಾಧಿಕಾರಿಗಳು. ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭ
8:03 AM, 31 May
ಶಾಸಕ ಆರ್ ಅಶೋಕ್, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಮತ್ತು ಪತಿ ಅವಿನಾಶ್, ಚಿತ್ರ ನಟ ಗಣೇಶ್ ಮತ್ತು ಪತ್ನಿ ಶಿಲ್ಪಾ ಗಣೇಶ್, ಚಿತ್ರ ನಟಿ ಅಮೂಲ್ಯ ಸೇರಿದಂತೆ ಹಲವು ಗಣ್ಯರು ಇದೇ ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ.
8:04 AM, 31 May
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭ
8:09 AM, 31 May
ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ಆರಂಭ
8:11 AM, 31 May
ಮೊದಲು 550 ಅಂಚೆ ಮತಗಳ ಎಣಿಕೆ ಆರಂಭಿಸಿದ ಅಧಿಕಾರಿಗಳು
8:13 AM, 31 May
ಒಟ್ಟು 18 ಸುತ್ತುಗಳಲ್ಲಿ ನಡೆಯಲಿರುವ ಮತ ಎಣಿಕೆ ಕಾರ್ಯ
8:38 AM, 31 May
ರಾಜರಾಜೇಶ್ವರಿ ನಗರ ಕ್ಷೇತ್ರದ ಮತ ಏಣಿಕೆ
ಒಟ್ಟು ಮತ ಚಲಾವಣೆ ಮಾಡಿದವರು 255842
8:38 AM, 31 May
ಒಟ್ಟು 550 ಅಂಚೆ ಮತಗಳ ಎಣಿಕೆ
ಅಂಚೆ ಮತ ಏಣಿಕೆಯಲ್ಲಿ, ಮೊದಲ ರೌಂಡ್ ನಲ್ಲಿ ಕಾಂಗ್ರೆಸ್ ನ ಮುನಿರತ್ನ ಮುನ್ನಡೆ
#RajarajeshwariNagar ಫಲಿತಾಂಶ : ಕಾಂಗ್ರೆಸ್ ನ ಮುನಿರತ್ನ ಬಿಜೆಪಿಯ ಮುನಿರಾಜು ಗೌಡರಿಗಿಂತ 4 ಸಾವಿರ ಮತಗಳ ಅಂತರ ಕಾಪಾಡಿಕೊಂಡಿದ್ದಾರೆ. ಜೆಡಿಎಸ್ ನ ರಾಮಚಂದ್ರ 3ನೇ ಸ್ಥಾನದಲ್ಲಿ #KarnatakaElections2018
— Oneindia Kannada (@OneindiaKannada) May 31, 2018
8:40 AM, 31 May
ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಏಣಿಕಾ ಸ್ಥಳಕ್ಕೆ ಆಗಮನ
8:41 AM, 31 May
ಬಿಬಿಎಂಪಿ ಕಮಿಷನರ್ ಚುನಾವಣಾಧಿಕಾರಿ ಮಹೇಶ್ವರ ರಾವ್ ಆಗಮನ
8:44 AM, 31 May
ಮೊದಲ ಸುತ್ತಿನಲ್ಲಿ 9342 ಮತ ಪಡೆದು ಮುನ್ನಡೆ ಸಾಧಿಸಿದ ಮುನಿರತ್ನ
8:47 AM, 31 May
ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಅವರಿಗೆ 5220 ಮತಗಳು, ಜೆಡಿ ಎಸ್ ನ ರಾಮಚಂದ್ರ ಅವರಿಗೆ 1540 ಮತಗಳು
8:48 AM, 31 May
4122 ಮತಗಳ ಅಂತರದಲ್ಲಿ ಕಾಂಗ್ರೆಸ್ ನ ಮುನಿರತ್ನ ನಾಯ್ಡು ಮುನ್ನಡೆ
8:52 AM, 31 May
ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ್ ಗೆ 76 ಮತಗಳು
8:57 AM, 31 May
ಇದುವರೆಗೂ ನಡೆದ ಮತ ಎಣಿಕೆಯಲ್ಲಿ ಒಟ್ಟು 181 ನೋಟಾ ಮತಗಳ ಚಲಾವಣೆ
9:02 AM, 31 May
ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ಸಿನ ಮುನಿರತ್ನ ಮುನ್ನಡೆ
9:03 AM, 31 May
ಇದುವರೆಗೆ ಒಟ್ಟು 16581 ಮತಗಳನ್ನು ಪಡೆದ ಕಾಂಗ್ರೆಸ್ಸಿನ ಮುನಿರತ್ನ
9:04 AM, 31 May
ಬಿಜೆಪಿಯ ಮುನಿರಾಜು ಗೌಡ ಪಡೆದ ಮತಗಳು 7901, ಜೆಡಿಎಸ್ ಜಿ ಎಚ್ ರಾಮಚಂದ್ರ ಪಡೆದ ಮತಗಳು 3606
9:10 AM, 31 May
ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್ ನ ಮುನಿರತ್ನ ನಾಯ್ಡು 16581, ಬಿಜೆಪಿಯ ಮುನಿರಾಜು ಗೌಡ 7901, ಜೆಡಿಎಸ್ ನ ರಾಮಚಂದ್ರಪ್ಪ 3603, ಹುಚ್ಚ ವೆಂಕಟ್ 81, ನೋಟಾ ಮತಗಳು 322
9:14 AM, 31 May
ಎರಡನೇ ಸುತ್ತಿನ ಅಂತ್ಯದ ವೇಳೆಗೆ 8680 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಮುನಿರತ್ನ
9:17 AM, 31 May
ಮುನ್ನಡೆ ಕಾಯ್ದುಕೊಳ್ಳುತ್ತಿರುವ ಮುನಿರತ್ನ. ಕಾಂಗ್ರೆಸ್ ಪಾಳೇಯದಲ್ಲಿ ಮನೆ ಮಾಡಿದ ಸಂಭ್ರಮ
9:23 AM, 31 May
ಇದುವರೆಗಿನ ಮಾಹಿತಿ ಪ್ರಕಾರ ಕಾಂಗ್ರೆಸ್ ನ ಮುನಿರತ್ನ ಗೆ 25219 ಮತಗಳು, ಬಿಜೆಪಿಯ ಮುನಿರಾಜು ಗೌಡಗೆ 11868 ಮತಗಳು, ಜೆಡಿಎಸ್ ನ ರಾಮಚಂದ್ರ ಅವರಿಗೆ 4822 ಮತಗಳು ಲಭ್ಯವಾಗಿವೆ
9:24 AM, 31 May
ಮೂರನೇ ಸುತ್ತಿನ ಮತ ಎಣಿಕೆ ನಂತರ ಒಟ್ಟು 13351 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಮುನಿರತ್ನ.
Karnataka Election Results 2018: Rajarajeshwari Nagar. Live Updates in Kannada : Get latest Trends, Results, Rajarajeswhari Nagar assembly constituenciy. Polling held on May 28th and results to be announced on May 31st.