ಬಿಜೆಪಿ ಮುನ್ನಡೆ: ಮಾರುಕಟ್ಟೆ ಸೂಚ್ಯಂಕದಲ್ಲಿ ಏರಿಕೆ

ಬೆಂಗಳೂರು, ಮೇ 15: ಕರ್ನಾಟಕ ಚುನಾವಣಾ ಫಲಿತಾಂಶ ದೇಶದ ಮಾರುಕಟ್ಟೆ ಸೂಚ್ಯಂಕದ ಮೇಲೆ ಪರಿಣಾಮ ಬೀರಿದೆ.

ಬಿಜೆಪಿ ಮುನ್ನಡೆ ಸಾಧಿಸುತ್ತಿರುವಂತೆ ಸೆನ್ಸೆಕ್ಸ್ ಸುಮಾರು 400 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ. ನಿಫ್ಟಿ 10900ರ ಗಡಿ ದಾಟಿದೆ. ಹೀಗಾಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಯಾವ ಪಕ್ಷ ಬರಲಿದೆ ಎನ್ನುವುದು ಮಾರುಕಟ್ಟೆ ಸಂವೇದಿ ಸೂಚ್ಯಂಕದ ಮೇಲೆ ಪರಿಣಾಮ ಬೀರಲಿರುವುದು ಖಚಿತವಾಗಿತ್ತು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಬಿಜೆಪಿ ದೊಡ್ಡ ಮಟ್ಟದ ಮುನ್ನಡೆ ಕಾಯ್ದುಕೊಂಡಿರುವುದರಿಂದ ಸಹಜವಾಗಿಯೇ ಮಾರುಕಟ್ಟೆಯ ಸೂಚ್ಯಂಕ ಮೇಲ್ಮಟ್ಟಕ್ಕೆ ಜಿಗಿದಿದೆ.

Karnataka Election Results 2018 sensex points jumped

ಈ ವರ್ಷದ ಜನವರಿಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ 36,443 ತಲುಪಿದ್ದು ಗರಿಷ್ಠ ಸಾಧನೆಯಾಗಿತ್ತು. ಇನ್ನೂ 500 ಅಂಕಗಳನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾದರೆ ಸೆನ್ಸೆಕ್ಸ್ ಗರಿಷ್ಠ ಮಟ್ಟವನ್ನು ತಲುಪಬಹುದು.

ಆದರೆ, ಕರ್ನಾಟಕ ಚುನಾವಣಾ ಫಲಿತಾಂಶವು ಸ್ಟಾಕ್ ಮಾರ್ಕೆಟ್ ಮೇಲೆ ಪರಿಣಾಮ ಬೀರುವ ಅವಧಿ ಅಲ್ಪಮಟ್ಟದ್ದಾಗಿರಲಿದೆ. ಫಲಿತಾಂಶ ಅಂತಿಮವಾಗಿ ಹೊರಬಿದ್ದ ಬಳಿಕ ಅದರ ಪರಿಣಾಮ ತಗ್ಗಲಿದೆ ಎಂದು ಪರಿಣತರು ಹೇಳಿದ್ದಾರೆ.

ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಪವರ್ ಗ್ರಿಡ್ ಕಾರ್ಪ್, ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಶೇ 1.5 ರಿಂದ 3ರವರೆಗೆ ಏರಿಕೆಯಾಗಿದೆ.

ಸೆನ್ಸೆಕ್ಸ್ 35,556.71 ಸೂಚ್ಯಂಕದೊಂದಿಗೆ ದಿನ ಆರಂಭಿಸಿತ್ತು. 436 ಅಂಕಗಳಷ್ಟು ಜಿಗಿತ ಕಂಡಿರುವ ಸೆನ್ಸೆಕ್ಸ್ ಮೂರು ತಿಂಗಳಲ್ಲಿಯೇ ಅಧಿಕ ಮಟ್ಟಕ್ಕೆ ತಲುಪಿದೆ. ನಿಫ್ಟಿ 122 ಪಾಯಿಂಟ್‌ ಹೆಚ್ಚಳ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+