ಕಾಫಿ ನಾಡು ಕೊಡಗು ಮತ್ತೊಮ್ಮೆ ಕೇಸರಿಮಯ.!
'ಬಿಜೆಪಿಯ ಭದ್ರಕೋಟೆ' ಎಂದೇ ಖ್ಯಾತಿ ಗಳಿಸಿರುವ ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಕಮಲ ಅರಳಿದೆ. ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಈ ಬಾರಿ ಗೆಲುವಿನ ನಗೆ ಬೀರುವುದರೊಂದಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ. ಇನ್ನೂ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕೂಡ ಗೆಲುವಿನ ಪತಾಕೆ ಹಾರಿಸಿದ್ದಾರೆ.

ಕೊಡಗು ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ, ನೋಡಿ...
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
| ವಿರಾಜಪೇಟೆ | ಕೆ.ಜಿ.ಬೋಪಯ್ಯ | 77944 | ಬಿಜೆಪಿ | ಅರುಣ್ ಮಾಚಯ್ಯ | ಕಾಂಗ್ರೆಸ್ | 64591 |
| ಮಡಿಕೇರಿ | ಅಪ್ಪಚ್ಚು ರಂಜನ್ | 70631 | ಬಿಜೆಪಿ | ಬಿ.ಎ.ಜೀವಿಜಯ | ಜೆಡಿಎಸ್ | 54616 |












Click it and Unblock the Notifications