ಹಾಸನದಲ್ಲಿ ಬಿಜೆಪಿ ಇತಿಹಾಸ ಪ್ರೀತಂಗೌಡಗೆ ಜಯಭೇರಿ
ಹಾಸನ, ಮೇ 15 : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪ್ರಾಬಲ್ಯವಿರುವ ಹಾಸನದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊಸ ಇತಿಹಾಸ ನಿರ್ಮಿಸಿದೆ. ಎರಡು ದಶಕಗಳ ನಂತರ ಹಾಸನದಲ್ಲಿ ಕಮಲ ಅರಳಿದೆ. ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಅವರು ಭರ್ಜರಿ ಜಯಭೇರಿ ಬಾರಿಸಿದ್ದಾರೆ
1989ರ ನಂತರ ಹಾಸನದಲ್ಲಿ ಮತ್ತೆ ಖಾತೆ ಆರಂಭಿಸಿದ ಬಿಜೆಪಿ, ಹಾಸನದಲ್ಲಿ ಈ ಬಾರಿಯೂ ಜೆಡಿಎಸ್ ನ ಎಚ್ಎಸ್ ಪ್ರಕಾಶ್ ಹಾಗೂ ಕಾಂಗ್ರೆಸ್ಸಿನ ಎಚ್ .ಕೆ ಮಹೇಶ್ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಒಕ್ಕಲಿಗ ಹಾಗೂ ಒಕ್ಕಲಿಗ ಉಪಜಾತಿ ಮತಗಳನ್ನು ನೆಚ್ಚಿಕೊಂಡಿರುವ ಜೆಡಿಎಸ್ ಗೆ ಆಘಾತ ನೀಡಲು ಸಿದ್ದರಾಮಯ್ಯ ಅವರ ಸಂಪುಟದ ಸಚಿವ ಅರಕಲಗೂಡು ಮಂಜು ಅವರು ಭಾರಿ ಪ್ರಯತ್ನ ನಡೆಸಿದ್ದರು.
ಜತೆಗೆ ಲಿಂಗಾಯತ ಹಾಗೂ ಜೈನ ಮತಗಳನ್ನು ಸೆಳೆಯುವ ಯತ್ನವೂ ನಡೆದಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ನಡುವಿನ ತಿಕ್ಕಾಟದ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ.
ಈ ಸಮಯಕ್ಕೆ 12.08ಕ್ಕೆ ಬಿಜೆಪಿಯ ಅಭ್ಯರ್ಥಿ ಪ್ರೀತಂ ಗೌಡ ಅವರು 48157 ಮತಗಳನ್ನು ಗಳಿಸಿದರೆ, ಜೆಡಿಎಸ್ ನ ಎಚ್ ಎಸ್ ಪ್ರಕಾಶ್ ಅವರು 38037, ಕಾಂಗ್ರೆಸ್ಸಿನ ಎಚ್ ಕೆ ಮಹೇಶ್ ಅವರಿಗೆ 30575 ಮತಗಳು ಸಿಕ್ಕಿವೆ. ಇನ್ನೂ ಅಂತಿಮ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಬೇಕಿದೆ.












Click it and Unblock the Notifications