ಚಿಕ್ಕಮಗಳೂರು ಜಿಲ್ಲೆ ಚುನಾವಣೆ ಚಿತ್ರಣ ಅಂಕಿ ಅಂಶ

Posted By: ನಮ್ಮ ಪ್ರತಿನಿಧಿ
Subscribe to Oneindia Kannada

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಮಲೆನಾಡು ಮತ್ತು ಬಯಲುಸೀಮೆ ಭಾಗಗಳನ್ನ ಒಳಗೊಂಡಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಚಿತ್ರಣ, 2013ರ ಫಲಿತಾಂಶ ವಿಶ್ಲೇಷಣೆ, ಅಂಕಿ ಅಂಶಗಳು ಇಲ್ಲಿವೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಯ್ಯನಗಿರಿ ಪ್ರವಾಸಿ ತಾಣಗಳಾಗಿವೆ. ಇನ್ನು ಈ ಕ್ಷೇತ್ರದ ಚುನಾವಣಾ ಇತಿಹಾಸ ನೋಡುವುದಾದ್ರೆ ಚಿಕ್ಕಮಗಳೂರು ಕ್ಷೇತ್ರ ಮರುವಿಂಗಡನೆ ನಂತರ ಬೀರೂರು ಕ್ಷೇತ್ರದ ಸಖರಾಯಪಟ್ಟಣ ಈ ಕ್ಷೇತ್ರದ ವ್ಯಾಪ್ತಿಗೆ ಸೇರಿಕೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಪರಿಚಯ ಇಲ್ಲಿದೆ

ಈ ಕ್ಷೇತ್ರದಲ್ಲಿ 1952ರಲ್ಲಿ ನಡೆದ ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆ ಅಭ್ಯರ್ಥಿ ಜಯಗಳಿಸಿರುವುದು ಈ ಕ್ಷೇತ್ರದ ವಿಶೇಷತೆ. ದಿವಗಂತ ಸುಬ್ಬಮ್ಮ 2 ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1962ರಲ್ಲಿ ಮತ್ತೆ ಮರು ಆಯ್ಕೆಯಾಗಿದ್ರು. 1983ರಲ್ಲಿ ಜನತಪಕ್ಷದ ನಾರಾಯಣಗೌಡ ಆಯ್ಕೆಯಾದ್ರೆ, 1985ರಲ್ಲಿ ಐ.ಬಿ ಶಂಕರ್ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ರು. ನಂತರ 1989,1994,1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಗೀರ್ ಅಹಮ್ಮದ್ ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿದ್ದಾರೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು

ಇದ್ರಂತೆ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೀರ್ತಿಗೂ ಸಗೀರ್ ಅಹಮ್ಮದ್ ಪಾತ್ರರಾಗಿದ್ದಾರೆ. ಇನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ನಂತರ ಪಕ್ಷೇತರ ಮತ್ತು ಬಿಜೆಪಿ ಪಕ್ಷಗಳು ತನ್ನ ಅಸ್ಥಿತ್ವವನ್ನು ಪಡೆದುಕೊಂಡಿತ್ತು. 2004ರಿಂದ ಸತತವಾಗಿ ಮೂರು ಬಾರಿ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಜಯಗಳಿಸಿದ್ದಾರೆ. ದತ್ತಪೀಠದ ವಿಷಯದ ಆಧಾರ ಮೇಲೆ ಜಿಲ್ಲೆಯಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಸಾಧಿಸಿಕೊಂಡಿದೆ.

ಮೂಡಿಗೆರೆ ಕ್ಷೇತ್ರ ಚಿತ್ರಣ

ಮೂಡಿಗೆರೆ ಕ್ಷೇತ್ರ ಚಿತ್ರಣ

ಎಸ್.ಸಿ ಮೀಸಲು ಕ್ಷೇತ್ರವಾಗಿ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಹೊಂದಿದೆ. ಮಲೆನಾಡಿನ ಪ್ರದೇಶಗಳನ್ನು ಒಳಗೊಂಡಿರುವ ಮೂಡಿಗೆರೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಇನ್ನು ಈ ಕ್ಷೇತ್ರದಲ್ಲಿ ನಕ್ಸಲ್ ಪೀಡಿತ ಪ್ರದೇಶವೂ ಇದರ ವ್ಯಾಪ್ತಿಗೆ ಸೇರಿಕೊಳ್ಳುತ್ತದೆ. ಆದರೆ, ಸದ್ಯಕ್ಕೆ ಯಾವುದೇ ನಕ್ಸಲ್ ಚಟುವಟಿಕೆಗಳು ಕಂಡು ಬಂದಿಲ್ಲ.

ಇನ್ನು ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎಂದು ಈ ಹಿಂದೆ ಖ್ಯಾತಿ ಪಡೆದಿತ್ತು. 1952ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಿಮ್ಮಪ್ಪಬಾವಿ ಮೊದಲ ಬಾರಿ ಜಯಗಳಿಸಿದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮೋಟಮ್ಮ 3 ಬಾರಿ ಜಯಗಳಿಸಿ ಸಚಿವರಾಗಿಯೂ ಸೇವೆಯನ್ನ ಸಲ್ಲಿಸಿದ್ದಾರೆ. ಇನ್ನು ಉಳಿದಂತೆ ಜನತಾಪಕ್ಷ, ಜೆಡಿಎಸ್‍ಯಿಂದ ಬಿ.ಬಿ ನಿಂಗಯ್ಯ 3 ಬಾರಿ ಆಯ್ಕೆಯಾಗಿದ್ದಾರೆ.

2004ರಿಂದ ಬಿಜೆಪಿ ಅಭ್ಯರ್ಥಿ ಎಂ.ಪಿ ಕುಮಾರಸ್ವಾಮಿ 2 ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಕಳೆದ ಬಾರಿ ಬಿ.ಬಿ.ನಿಂಗಯ್ಯ ಜೆಡಿಎಸ್ ನಿಂದ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ರು. ಇನ್ನು ಕ್ಷೇತ್ರದಲ್ಲಿ ಕಳಸ- ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯವಿದ್ದು ಸಾವಿರಾರು ಭಕ್ತಾದಿಗಳು ಈ ಕ್ಷೇತ್ರ ಬಂದು ಹೋಗುತ್ತಿರುತ್ತಾರೆ.

ಕಡೂರು ಕ್ಷೇತ್ರ ಚಿತ್ರಣ

ಕಡೂರು ಕ್ಷೇತ್ರ ಚಿತ್ರಣ

ಜಿಲ್ಲೆಯಲ್ಲಿ ಅತಿದೊಡ್ಡ ಕ್ಷೇತ್ರ ಇದಾಗಿದ್ದು ಅತಿ ಹೆಚ್ಚು ಬರಪೀಡಿತ ತಾಲೂಕು ಕೂಡ ಇದೇ ಹಾಗಿದೆ. ಇಲ್ಲಿನ ಮತದಾರರ ಕೊಂಚ ವಿಭಿನ್ನವಾಗಿ ಅಲೋಚಿಸಿ ಜನಪರ ಕಾಳಜಿ ಹೊಂದಿರುವ ರಾಜಕಾರಣಿಯನ್ನ ಆಯ್ಕೆ ಮಾಡುತ್ತಾರೆ. ಇನ್ನು ಕ್ಷೇತ್ರ ಮರುವಿಂಗಡನೆ ನಂತರ ಬೀರೂರು ವಿಧಾನ ಸಭಾ ಕ್ಷೇತ್ರದ ಬೀರೂರು ಸೇರಿದಂತೆ ಅರ್ಧ ಭಾಗ ಕಡೂರಿಗೆ ಸೇರಿಕೊಂಡಿತ್ತು. ಇಲ್ಲಿ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರೋ ಇದಾಗಿದೆ. ಇನ್ನು ಇಲ್ಲಿ ಹೆಚ್ಚಾಗಿ ತೆಂಗು, ಈರುಳ್ಳಿ, ಮೆಕ್ಕೆಜೋಳ ಬೆಳೆಯನ್ನ ಬೆಳೆಯುತ್ತಾರೆ. ಕಳೆದ ಬಾರಿ ಚುನಾವಣೆಯಲ್ಲಿ ವೈಎಸ್ ವಿ ದತ್ತಾ 42 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ರು.

ಕಡೂರು ವಿಧಾನಸಭಾ ಕ್ಷೇತ್ರ ಮೂಲ ಸೌಕರ್ಯ ಕೊರತೆ, ಮಳೆಯಿಲ್ಲದೆ ಬೆಳೆ ಹಾನಿ, ದೀಪದ ಕೆಳಗೆ ಕತ್ತಲು ಎಂಬಂತೆ ಹತ್ತಾರು ಕಿಲೋ ಮೀಟರ್ ದೂರದಲ್ಲಿ ಕಾಡು ಮೇಡು, ಜೀವ ಜಲ ಆಗರ ಹೊಂದಿದ್ದರೂ ಕುಡಿಯುವ ನೀರಿನ ಕೊರತೆಯನ್ನು ನಗರ ಪ್ರದೇಶ ಇಂದಿಗೂ ಅನುಭವಿಸುತ್ತಿದೆ.

ಕುರುಬರು, ಲಿಂಗಾಯತರಲ್ಲದೆ, ಮುಸ್ಲಿಮರು, ಉಪ್ಪಾರರು, ಅಲ್ಪಸಂಖ್ಯಾತರು ಈ ಕ್ಷೇತ್ರದಲ್ಲಿದ್ದಾರೆ. ಕಡೂರಿನ ಪಟ್ಟಣ ಪುರಸಭೆ ಜೆಡಿಎಸ್ ವಶದಲ್ಲಿದ್ದರೆ, ತಾಲೂಕು ಪಂಚಾಯಿತಿ ಮೇಲೆ ಕಾಂಗ್ರೆಸ್ ಪ್ರಭುತ್ವ ಹೊಂದಿದೆ.

ಶೃಂಗೇರಿ ಕ್ಷೇತ್ರ

ಶೃಂಗೇರಿ ಕ್ಷೇತ್ರ

ಜಿಲ್ಲೆಯಲ್ಲಿ ಅತಿ ಹೆಚ್ಚು ಮಲೆನಾಡಿನ ಭಾಗವನ್ನ ಒಳಗೊಂಡಿರುವ ಕ್ಷೇತ್ರ ಇದು. ಇನ್ನು ಇಲ್ಲಿ ನಕ್ಸಲ್ ಪೀಡಿತ ಪ್ರದೇಶಗಳು ಹೆಚ್ಚಾಗಿದ್ದು ನಕ್ಸಲ್ ಚಟುವಟಿಕೆ ಕೂಡ ಆಗಾಗ ನಡೆಯುತ್ತಿರುತ್ತದೆ. ಈ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ನಂತರದಲ್ಲಿ ಜೆಡಿಎಸ್, ಪಕ್ಷೇತರ, ಸದ್ಯ ಬಿಜೆಪಿ ತನ್ನ ಪ್ರಾಬಲ್ಯ ಪಡೆದುಕೊಂಡಿದೆ. ಬಿಜೆಪಿ ಅಭ್ಯರ್ಥಿ ಡಿ.ಎನ್ ಜೀವರಾಜ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಿಂದ ಡಿ.ಬಿ ಚಂದ್ರೇಗೌಡ 1 ಸಲ, ಜನತಾಪಕ್ಷದಿಂದ ಗೋವಿಂದೇಗೌಡ್ರು 2 ಸಲ, ಕಾಂಗ್ರೆಸ್ ನಿಂದ ಶಾಮಣ್ಣ 1 ಸಲ, ರಾಮಣ್ಣಗೌಡ ಒಂದು ಸಲ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರವೂ ಒಕ್ಕಲಿಗ ಜನಾಂಗದವರೇ ಹೆಚ್ಚಾಗಿರುವ ಕಾರಣ ಜಾತಿ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ.

ಸಣ್ಣ ಕೈಗಾರಿಕೆಗೆ ಒತ್ತು ನೀಡದ ಕಾರಣ, ಆರ್ಥಿಕ ಬೆಳವಣಿಗೆ ಇನ್ನೂ ಆಗಿಲ್ಲ. ಧಾರ್ಮಿಕ ಕೇಂದ್ರವಾಗಿ ಮಾತ್ರ ಕ್ಷೇತ್ರವನ್ನು ಕಾಣುತ್ತಿರುವುದು ಪೂರಕ ಹಾಗೂ ಮಾರಕ ಅಂಶಗಳಾಗಿವೆ.

ತರೀಕೆರೆ ಕ್ಷೇತ್ರ

ತರೀಕೆರೆ ಕ್ಷೇತ್ರ

ತರೀಕೆರೆ ಕ್ಷೇತ್ರವು ಅರೆಮಲೆನಾಡಿನ ಪ್ರದೇಶವಾಗಿದೆ. ಚುನಾವಣೆಯ ವಿಷಯದಲ್ಲಿ ಇಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ. ಲಿಂಗಾಯಿತ ಹಾಗೂ ಕುರುಬ ಸಮುದಾಯದ ಜನರೇ ಹೆಚ್ಚಾಗಿರುವ ಕ್ಷೇತ್ರ ಇದಾಗಿದೆ. ಈ ಕ್ಷೇತ್ರವು ಕಾಂಗ್ರೆಸ್ ಪಕ್ಷ ಭದ್ರಕೋಟೆಯಾಗಿತ್ತು. 1985ರಲ್ಲಿ ಜನತಾಪಕ್ಷದಿಂದ ನೀಲಕಂಠಪ್ಪ ಶಾಸಕರಾಗಿ ಪ್ರಥಮ ಭಾರಿ ಆಯ್ಕೆಯಾದ್ರು. ನಂತರದ ಕಾಂಗ್ರೆಸ್‍ಪಕ್ಷದಿಂದ ಮತ್ತೆ ಶಾಸಕರಾಗಿ ಆಯ್ಕೆಯಾಗಿ 2 ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2 ಬಾರಿ ಕಾಂಗ್ರೆಸ್ ಪಕ್ಷದಿಂದ ಹೆಚ್.ಆರ್.ರಾಜು ಆಯ್ಕೆಯಾಗಿದ್ರು. 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಎಸ್.ಎಂ.ನಾಗರಾಜ್ ಆಯ್ಕೆಯಾದ್ರು. ನಂತರ2004ರಲ್ಲಿ ಕಾಂಗ್ರೆಸ್ ಟಿ.ಹೆಚ್.ಶಿವಶಂಕರಪ್ಪ ಶಾಸಕರಾಗಿ ಆಯ್ಕೆಯಾಗಿ 2008ರಲ್ಲಿ ಬಿಜೆಪಿ ಅಭ್ಯರ್ಥಿ ಡಿ,ಎಸ್ ಸುರೇಶ್ ಪ್ರಥಮ ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಶ್ರೀನಿವಾಸ್ ಪ್ರಥಮಬಾರಿ ಆಯ್ಕೆಯಾಗಿದ್ದಾರೆ

ಜಾತಿವಾರು ಮತಗಳ ಅಂಕಿ-ಸಂಖ್ಯೆ ಎಷ್ಟಿದೆ?

ಜಾತಿವಾರು ಮತಗಳ ಅಂಕಿ-ಸಂಖ್ಯೆ ಎಷ್ಟಿದೆ?

ಅ) ಚಿಕ್ಕಮಗಳೂರು ಕ್ಷೇತ್ರ : (ಒಟ್ಟು ಮತದಾರರು 1.79 ಲಕ್ಷ)
ಎಸ್ಸಿ, ಎಸ್ಟಿ - 60ಸಾವಿರ
ಲಿಂಗಾಯತ - 30 ಸಾವಿರ
ಕುರುಬ - 25 ಸಾವಿರ
ಮುಸ್ಲಿಂ - 16ಸಾವಿರ
ದೇವಾಂಗ - 10 ಸಾವಿರ

****

ಆ) ಶೃಂಗೇರಿ ಕ್ಷೇತ್ರ (ಒಟ್ಟು ಮತದಾರರು 1.37 ಲಕ್ಷ)
ಒಕ್ಕಲಿಗರು - 35 ಸಾವಿರ
ಬ್ರಾಹ್ಮಣರು - 33 ಸಾವಿರ
ಪರಿಶಿಷ್ಟ ಜಾತಿ, ಪಂಗಡ - 30ಸಾವಿರ
ಅಲ್ಪಸಂಖ್ಯಾತರು -13 ಸಾವಿರ

****

ಇ) ತರೀಕೆರೆ ಕ್ಷೇತ್ರ (ಒಟ್ಟು ಮತದಾರರು 1.53 ಲಕ್ಷ)
ಲಿಂಗಾಯತ-33 ಸಾವಿರ
ಎಸ್ಸಿ, ಎಸ್ಟಿ-30ಸಾವಿರ
ಕುರುಬ-25ಸಾವಿರ
ಲಂಬಾಣಿ-15ಸಾವಿರ
ಮುಸ್ಲಿಂ-10ಸಾವಿರ

****

ಕಡೂರು ಕ್ಷೇತ್ರ (ಒಟ್ಟು ಮತದಾರರು 1.78 ಲಕ್ಷ)
ಲಿಂಗಾಯತ-46 ಸಾವಿರ
ಕುರುಬ-38ಸಾವಿರ
ಉಪ್ಪಾರರು-16ಸಾವಿರ
ಲಂಬಾಣಿ-16ಸಾವಿರ
ತೆಲುಗು ಗೌಡ -13ಸಾವಿರ
ಮುಸ್ಲಿಂ-10ಸಾವಿರ

****

ಮೂಡಿಗೆರೆ ಕ್ಷೇತ್ರ (ಒಟ್ಟು ಮತದಾರರು-1.60 ಲಕ್ಷ)
ಒಕ್ಕಲಿಗ-45 ಸಾವಿರ
ಎಸ್ಸಿ-40ಸಾವಿರ
ಎಸ್ಟಿ-12 ಸಾವಿರ
ಮುಸ್ಲಿಂ-18ಸಾವಿರ
ಈಡಿಗ (ಬಿಲ್ಲವ)-12 ಸಾವಿರ

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಚಿಕ್ಕಮಗಳೂರು :
ಕಾಂಗ್ರೆಸ್ :

 • ಗಾಯಿತ್ರಿ ಶಾಂತೇಗೌಡ ಮಾಜಿ ಎಂಎಲ್ ಸಿ,
 • ಬಿ.ಎಲ್. ಶಂಕರ್, ಮಾಜಿ ಸಭಾಪತಿ,
 • ಎಂ.ಎಲ್.ಮೂರ್ತಿ ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ,
 • ಡಾ.ವಿಜಯ್ ಕುಮಾರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ

ಬಿಜೆಪಿ : ಶಾಸಕ ಸಿ.ಟಿ.ರವಿ
ಜೆಡಿಎಸ್ : ಜಿ.ಹೆಚ್.ಹರೀಶ್
****

ಕಡೂರು :
ಕಾಂಗ್ರೆಸ್ :

 • ಮಹೇಶ್ ವಡೇಯರ್ ಜಿ.ಪಂ ಸದಸ್ಯ
 • ಕೆ.ಬಿ.ಮಲ್ಲಿಕಾರ್ಜುನ್
 • ಧನಂಜಯ್
 • ಕಡೂರು ನಂಜಪ್ಪ ತೆಂಗು ನಾರು ಮಂಡಳಿ ಅಧ್ಯಕ್ಷ
 • ನಿರಂತರ ಗಣೇಶ್ ಎಸ್ಎಂ ಕೃಷ್ಣ ಸಂಬಂಧಿ

ಬಿಜೆಪಿ :

 • ಬೆಳ್ಳಿ ಪ್ರಕಾಶ್
 • ರೇಖಾ ಹುಲಿಯಪ್ಪ ಗೌಡ ಮಾಜಿ ಜಿ.ಪಂ ಅಧ್ಯಕ್ಷೆ
 • ಬೀರೂರು ದೇವರಾಜ್ ಹಿರಿಯ ಮುಖಂಡ
 • ಗಿರೀಶ್ ಉಪ್ಪಾರ್ ಸಮಾಜ ಸೇವಕ

ಜೆಡಿಎಸ್

ಹಾಲಿ ಶಾಸಕ ವೈಎಸ್ ವಿ ದತ್ತಾ....

ತರೀಕೆರೆ :
ಕಾಂಗ್ರೆಸ್ : ಹಾಲಿ ಶಾಸಕ ಜಿ.ಹೆಚ್.ಶ್ರೀನಿವಾಸ್,
ಬಿಜೆಪಿ : ಡಿ.ಎನ್.ಸುರೇಶ್ ಮಾಜಿ ಶಾಸಕ, ಗೋಪಿಕೃಷ್ಣ
ಜೆಡಿಎಸ್ : ಟಿ.ಹೆಚ್.ಶಿವಶಂಕರಪ್ಪ

ಈ) ಮೂಡಿಗೆರೆ : ಕಾಂಗ್ರೆಸ್ : ಮೋಟಮ್ಮ ಹಾಲಿ ಎಂಎಲ್ ಸಿ, ಸಂಸದ ಚಂದ್ರಪ್ಪ,
ಬಿಜೆಪಿ : ಕುಮಾರಸ್ವಾಮಿ ಮಾಜಿ ಶಾಸಕ, ದೀಪಕ್ ದೊಡ್ಡಯ್ಯ ಬಿಜೆಪಿ ಮುಖಂಡ, ಚೈತ್ರಶ್ರೀ ಜಿ.ಪಂ ಅಧ್ಯಕ್ಷೆ
ಜೆಡಿಎಸ್ : ಬಿ.ಬಿ.ನಿಂಗಯ್ಯ, ಹಾಲಿ ಶಾಸಕ

ಉ) ಶೃಂಗೇರಿ : ಕಾಂಗ್ರೆಸ್ : ರಾಜೇಗೌಡ ಮಾಜಿ ಜಿ.ಪಂ ಅಧ್ಯಕ್ಷ, ಸಚಿನ್ ಮೀಗಾ ಕಿಸಾನ್ ಅಧ್ಯಕ್ಷ
ಬಿಜೆಪಿ : ಡಿ.ಎನ್.ಜೀವರಾಜ್ ಹಾಲಿ ಶಾಸಕ
ಜೆಡಿಎಸ್ : ವೆಂಕಟೇಶ್ ಗೋವಿಂದೇಗೌಡ ಜೆಡಿಎಸ್ ಮುಖಂಡ

2013 ರ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು

2013 ರ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು

4) ಯಾರ ವಿರುದ್ಧ, ಎಷ್ಟು ಮಂದಿ ಸ್ಪರ್ಧಿಸಿದ್ರು.
ಅ) ಚಿಕ್ಕಮಗಳೂರು : ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಸೇರಿ 9 ಜನ ಸ್ಪರ್ಧಿಸಿದ್ರು
ಆ) ಕಡೂರು : ವೈಎಸ್ ವಿ ದತ್ತಾ ವಿರುದ್ಧ ಕಾಂಗ್ರೆಸ್, ಬಿಜೆಪಿ ಸೇರಿ 10 ಜನ ಸ್ಪರ್ಧಿಸಿದ್ರು
ಇ) ತರೀಕೆರೆ : ಜಿ.ಹೆಚ್. ಶ್ರೀನಿವಾಸ್ ವಿರುದ್ಧ ಬಿಜೆಪಿ, ಜೆಡಿಎಸ್ ಸೇರಿ 12 ಜನ ಸ್ಪರ್ಧಿಸಿದ್ರು
ಈ) ಮೂಡಿಗೆರೆ : ಬಿ.ಬಿ.ನಿಂಗಯ್ಯ ವಿರುದ್ಧ ಬಿಜೆಪಿ, ಜೆಡಿಎಸ್ ಸೇರಿ 6 ಜನ ಸ್ಪರ್ಧಿಸಿದ್ರು
ಉ) ಶೃಂಗೇರಿ : ಡಿ.ಎನ್.ಜೀವರಾಜ್ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಸೇರಿ 7 ಜನ ಸ್ಪರ್ಧಿಸಿದ್ರು

5) ಯಾರು ಎಷ್ಟು ಮತ್ತಗಳನ್ನ ಪಡೆದಿದ್ರು ಹಾಗೂ ಗೆಲುವಿನ ಅಂತರ :
ಅ) ಚಿಕ್ಕಮಗಳೂರು : ಸಿ.ಟಿ.ರವಿ, ಪಡೆದ ಒಟ್ಟು ಮತ : 58204, 10974 ಮತಗಳ ಗೆಲುವಿನ ಅಂತರದಿಂದ ಗೆಲುವು.

ಆ) ಕಡೂರು : ವೈಎಸ್ ವಿ ದತ್ತಾ, ಪಡೆದ ಒಟ್ಟು ಮತ : 68733, 42433 ಮತಗಳ ಗೆಲುವಿನ ಅಂತರದಿಂದ ಗೆಲುವು.

ಇ) ತರೀಕೆರೆ : ಜಿ.ಹೆಚ್. ಶ್ರೀನಿವಾಸ್, ಪಡೆದ ಒಟ್ಟು ಮತ : 35817, 899 ಮತಗಳ ಗೆಲುವಿನ ಅಂತರದಿಂದ ಗೆಲುವು.

ಈ) ಮೂಡಿಗೆರೆ : ಬಿ.ಬಿ.ನಿಂಗಯ್ಯ, ಪಡೆದ ಒಟ್ಟು ಮತ : 32417, 635 ಮತಗಳ ಗೆಲುವಿನ ಅಂತರದಿಂದ ಗೆಲುವು.

ಉ) ಶೃಂಗೇರಿ : ಡಿ.ಎನ್.ಜೀವರಾಜ್, ಪಡೆದ ಒಟ್ಟು ಮತ : 58402, 3452 ಮತಗಳ ಗೆಲುವಿನ ಅಂತರದಿಂದ ಗೆಲುವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
karnataka assembly election 2018, Chikkamagaluru district overall Political picture is here. Chikkamagaluru has five assembly constituencies Chikmagalur, Kadur, Tarikere, Mudigere, Sringeri. Out of which four are general and Mudigere is reserved(SC). In 2013 BJP and JDS shared two seats and Congress won in Tarikere

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ