'ಕಾಂಗ್ರೆಸ್‌ನಲ್ಲಿ ಮಿಮಿಕ್ರಿ ಕಲಾವಿದರಿಗೆ ಭಾರಿ ಬೇಡಿಕೆ!'
ಬೆಂಗಳೂರು, ಮೇ 19: ವಿಶ್ವಾಸಮತ ಪ್ರಕ್ರಿಯೆ ಆರಂಭವಾಗುವ ಮುನ್ನ ಬಿಜೆಪಿಯು ತಮ್ಮ ಶಾಸಕರನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ತನ್ನ ಆರೋಪಗಳಿಗೆ ಸಂಬಂಧಿಸಿದಂತೆ ಆಡಿಯೊ ಟೇಪ್‌ಗಳನ್ನು ಬಿಡುಗಡೆ ಮಾಡಿದೆ.
ಈ ಆರೋಪಗಳನ್ನು ಬಿಜೆಪಿ ನಿರಾಕರಿಸಿದ್ದು, ಪಕ್ಷಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕಾಂಗ್ರೆಸ್ ಇವುಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರತಿ ಆರೋಪ ಮಾಡಿದೆ.
ಈ ಸಂಬಂಧ ಎರಡು ಟ್ವೀಟ್‌ಗಳನ್ನು ಮಾಡಿರುವ ಬಿಜೆಪಿ ಸಂಸದ ಡಿ.ವಿ. ಸದಾನಂದಗೌಡ ಅವರು, ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಿಮಿಕ್ರಿ ಕಲಾವಿದರಿಗೆ ಬೇಡಿಕೆ ಇದೆ ಎಂದು ವ್ಯಂಗ್ಯವಾಡಿದ್ದಾರೆ.
Mimicry Audio’s prepared just to build fake records “Terror “ Comedian at the helm of affairs . all anticipating defeat on floor . Dirty tricks department has new boss
— Sadananda Gowda (@DVSBJP) 19 May 2018
ಕಾಂಗ್ರೆಸ್‌ನ ಡರ್ಟಿ ಟ್ರಿಕ್ ವಿಭಾಗಕ್ಕೆ ಹೊಸ ಬಾಸ್ ಸಿಕ್ಕಿದ್ದಾರೆ. ಅವರೆಲ್ಲರಿಗೂ ಸೋಲು ಅನುಭವಿಸುವುದು ತಿಳಿದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಲು ಮಿಮಿಕ್ರಿ ಆಡಿಯೊಗಳನ್ನು ತಯಾರಿಸಲಾಗಿದೆ ಎಂದು ಸದಾನಂದಗೌಡ ಆರೋಪಿಸಿದ್ದಾರೆ.

ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷದ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಅವರು ಶುಕ್ರವಾರ ಆಡಿಯೊ ಬಿಡುಗಡೆ ಮಾಡಿದ್ದರು.
ಶನಿವಾರ ಮತ್ತೊಂದು ಆಡಿಯೊ ಟೇಪ್ ಬಿಡುಗಡೆ ಮಾಡಿದ ಉಗ್ರಪ್ಪ ಅವರು, ಕಾಂಗ್ರೆಸ್ ಶಾಸಕರ ಪತ್ನಿಗೆ ಕರೆ ಮಾಡಿದ್ದ ಬಿಜೆಪಿ ನಾಯಕರು ಸಚಿವ ಸ್ಥಾನ, ಹಣದ ಆಮಿಷ ಒಡ್ಡಿದ್ದಾರೆ. ಅದು ಬೇಡವೆಂದರೆ 15 ಕೋಟಿ ನೀಡುವುದಾಗಿ ಮಾತುಕತೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications