Exit Poll : ಟೈಮ್ಸ್ ನೌ ಫಲಿತಾಂಶ ಪ್ರಕಟ, ಅತಂತ್ರ ವಿಧಾನಸಭೆ
ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭೆಯ 222 ಸ್ಥಾನಕ್ಕಾಗಿ ಮೇ.12 ರಂದು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಅಂತ್ಯ ಕಂಡಿದೆ. ಈಗ ಚುನಾವಣೋತ್ತರ ಸಮೀಕ್ಷೆ, ಫಲಿತಾಂಶದ ಕಾಲ ಆರಂಭವಾಗಿದೆ. ರಾಷ್ಟ್ರೀಯ ಸುದ್ದಿವಾಹಿನಿ ಟೈಮ್ಸ್ ನೌ 6.30ಕ್ಕೆ ಹಾಗೂ 7.45ಕ್ಕೆ ತನ್ನ ಎಕ್ಸಿಟ್ ಪೋಲ್ ಫಲಿತಾಂಶವನ್ನು ಪ್ರಕಟಿಸುತ್ತಿದೆ.
ಈ ಬಾರಿ ರಾಜ್ಯದಲ್ಲಿ ಒಟ್ಟು 5,00,15,895 (5 ಕೋಟಿ) ಮತದಾರರಿದ್ದಾರೆ. ಇದರಲ್ಲಿ 2,53,26,629 ಪುರುಷ ಮತದಾರರಾದರೆ, ಮಹಿಳಾ ಮತದಾರರ ಸಂಖ್ಯೆ 2,46,84,311. ಇನ್ನು 4,955 ತೃತೀಯ ಲಿಂಗಿ ಮತದಾರರೂ ರಾಜ್ಯದಲ್ಲಿದ್ದಾರೆ.
2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು 217. ಪಕ್ಷವಾರು: ಬಿಜೆಪಿ 222, ಕಾಂಗ್ರೆಸ್ 220, ಜೆಡಿಎಸ್ 199, ಬಿಎಸ್ಪಿ 18, ಇತರೆ 1963.
2013ರಲ್ಲಿ ಶೇ 71.45ರಷ್ಟು ಮಾತ್ರ ಮತದಾನ ದಾಖಲಾಗಿತ್ತು. ಕೊನೆ ಗಳಿಗೆಯಲ್ಲಿ ಮತದಾರರು ಕ್ಯೂನಲ್ಲಿ ಬಂದು ನಿಂತರೆ ರಾತ್ರಿ ಹತ್ತು ಗಂಟೆಯಾದರೂ ಮತದಾನ ಮಾಡುವ ಅವಕಾಶ ನೀಡಬೇಕಾಗುತ್ತದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳು ಮತದಾನಕ್ಕೂ 48 ಗಂಟೆಗಳಿಗೂ ಮುನ್ನ ಯಾವುದೇ ಸಮೀಕ್ಷೆ, ಫಲಿತಾಂಶ ಹೊರ ಹಾಕದಂತೆ ಚುನಾವಣಾ ಆಯೋಗ ನಿಯಮ ಜಾರಿಗೊಳಿಸಿತ್ತು. ಅದರಂತೆ, ಮತದಾನ ಪ್ರಕ್ರಿಯೆ ಮುಗಿದ ನಂತರ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಎಲ್ಲಾ ಮಾಧ್ಯಮಗಳು ಪ್ರಕಟಿಸಿದೆ.

2018ರಲ್ಲಿ ಟೈಮ್ಸ್ ನೌ ಟಿವಿ ವಾಹಿನಿ -ವಿಎಂಆರ್
* ಕಾಂಗ್ರೆಸ್ : 90-103
* ಬಿಜೆಪಿ : 80-93
* ಜೆಡಿಎಸ್: 31-39
* ಇತರೆ: 2-4

ಟೈಮ್ಸ್ ನೌ -ವಿಎಂಆರ್ ಶೇಕಡವಾರು ಮತಗಳಿಕೆ
2018 ಟೈಮ್ಸ್ ನೌ -ವಿಎಂಆರ್ ಶೇಕಡವಾರು ಮತಗಳಿಕೆ (ವೋಟ್ ಷೇರ್)
* ಕಾಂಗ್ರೆಸ್ : 38.4%
* ಬಿಜೆಪಿ : 34.6%
* ಜೆಡಿಎಸ್: 19.8%
* ಇತರೆ: 7.2%
****
ಟೈಮ್ಸ್ ನೌ -ವಿಎಂಆರ್ ಸ್ಥಾನ ವ್ಯತ್ಯಾಸ
ಬಿಜೆಪಿ : 48
ಕಾಂಗ್ರೆಸ್ : -24
ಜೆಡಿಎಸ್ ಪ್ಲಸ್ : -5
ಇತರೆ : -19

2013ರಲ್ಲಿ ಟೈಮ್ಸ್ ನೌ ಟಿವಿ ವಾಹಿನಿ ಎಕ್ಸಿಟ್ ಪೋಲ್
* ಕಾಂಗ್ರೆಸ್ : 132
* ಬಿಜೆಪಿ : 38
* ಜೆಡಿಎಸ್: 38
* ಇತರೆ: 15

ಪ್ರದೇಶವಾರು ಸೀಟು ಗಳಿಕೆ
ಸೆಂಟ್ರಲ್ ಕರ್ನಾಟಕ: ಬಿಜೆಪಿ 17, ಕಾಂಗ್ರೆಸ್ 12, ಜೆಡಿಎಸ್ ಪ್ಲಸ್ 5, ಇತರೆ 1
ಕರಾವಳಿ ಕರ್ನಾಟಕ: ಬಿಜೆಪಿ 8, ಕಾಂಗ್ರೆಸ್ 13
ಗ್ರೇಟರ್ ಬೆಂಗಳೂರು: ಬಿಜೆಪಿ 14, ಕಾಂಗ್ರೆಸ್ 14, ಜೆಡಿಎಸ್ +2
ಹೈದರಾಬಾದ್ ಕರ್ನಾಟಕ : ಬಿಜೆಪಿ 19, ಕಾಂಗ್ರೆಸ್ 12
ಮುಂಬೈ ಕರ್ನಾಟಕ : ಬಿಜೆಪಿ 23, ಕಾಂಗ್ರೆಸ್ 26, ಜೆಡಿಎಸ್ ಪ್ಲಸ್ 1
ಹಳೆ ಮೈಸೂರು: ಬಿಜೆಪಿ 7, ಕಾಂಗ್ರೆಸ್ 21, ಜೆಡಿಎಸ್ ಪ್ಲಸ್ 25, ಇತರೆ 2












Click it and Unblock the Notifications