News X ಚುನಾವಣೋತ್ತರ ಸಮೀಕ್ಷೆ : ಬಿಜೆಪಿ ಅತಿದೊಡ್ಡ ಪಕ್ಷ
ಬೆಂಗಳೂರು, ಮೇ 12 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಶನಿವಾರ ಮತದಾನ ನಡೆಯಿತು. ಬೆಂಗಳೂರು ನಗರದ 2 ಕ್ಷೇತ್ರ ಹೊರತುಪಡಿಸಿ ರಾಜ್ಯದ 222 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಶೇ 73.07 ರಷ್ಟು ಮತದಾನವಾಗಿದೆ.
ಶನಿವಾರ ಸಂಜೆ ಮತದಾನ ಮುಗಿದ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಬಿಜೆಪಿ ಬಹುದೊಡ್ಡ ಪಕ್ಷವಾಗಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ನ್ಯೂಸ್ ಎಕ್ಸ್ ಸಮೀಕ್ಷೆಯ ಪ್ರಕಾರ ಬಿಜೆಪಿ 102-110 ಕ್ಷೇತ್ರಗಳಲ್ಲಿ ಜಯಗಳಿಸಲಿದೆ.
News X ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ 102-110 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದು, ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆಡಳಿತಾರೂಢ ಕಾಂಗ್ರೆಸ್ 72-78 ಸ್ಥಾನಗಳಿಸಲಿದೆ. ಜೆಡಿಎಸ್ ಪಕ್ಷ 35-39 ಸ್ಥಾನಗಳಲ್ಲಿ ಜಯಗಳಿಸಲಿದೆ. ಇತರೆ ಅಭ್ಯರ್ಥಿಗಳು 3-5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 113. ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಜಯನಗರ ಕ್ಷೇತ್ರಗಳ ಚುನಾವಣೆ ಇನ್ನೂ ಬಾಕಿ ಇದೆ. ಮೇ 15ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಮತಗಳಿಕೆಯ ವಿವರಗಳು
ನ್ಯೂಸ್ ಎಕ್ಸ್ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ 33.75. ಬಿಜೆಪಿ 36.09, ಜೆಡಿಎಸ್ 18.25 ಮತ್ತು ಇತರ ಅಭ್ಯರ್ಥಿಗಳು 11.91ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಬಿಜೆಪಿ 36.09ರಷ್ಟು ಮತಗಳನ್ನು ಪಡೆದು 102-110 ಸ್ಥಾನಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್ 33.75ರಷ್ಟು ಮತಗಳನ್ನು ಪಡೆಯಲಿದ್ದು 72-78 ಸ್ಥಾನಗಳನ್ನು ಪಡೆಯಲಿದೆ.

2013, 2018ರ ನಡುವಿನ ವ್ಯತ್ಯಾಸ
2013ರ ಮತ್ತು 2018ರ ನಡುವಿನ ಮತಗಳಿಕೆ ವ್ಯತ್ಯಾಸವನ್ನು ನ್ಯೂಸ್ ಎಕ್ಸ್ ವಿವರಿಸಿದೆ. ಬಿಜೆಪಿ ಈ ಬಾರಿ 36.09 ರಷ್ಟು ಮತಗಳಿಕೆ ಪಡೆದಿದೆ. 2013ರಲ್ಲಿ 19.89 ರಷ್ಟು ಮತ ಸಿಕ್ಕಿತ್ತು. ಶೇ +16.20ಯಷ್ಟಯ ವ್ಯತ್ಯಾಸವಾಗಿದೆ.
ಕಾಂಗ್ರೆಸ್ 33.75ರಷ್ಟು ಮತಗಳನ್ನು ಪಡೆಯಲಿದೆ. 2013ರಲ್ಲಿ 36.53ರಷ್ಟು ಮತಗಳನ್ನು ಪಡೆದಿತ್ತು. -02.84ನಷ್ಟು ಮತಗಳು ಕಡಿಮೆಯಾಗಿವೆ. ಜೆಡಿಎಸ್ 2013ರಲ್ಲಿ 20.19ರಷ್ಟು ಮತ ಪಡೆದಿತ್ತು. ಈ ಬಾರಿ 18.25ರಷ್ಟು ಮತಗಳು ಬರಲಿದ್ದು -01.94 ಮತಗಳು ವ್ಯತ್ಯಾಸವಾಗಿವೆ.
ಇತರ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ 11.91ರಷ್ಟು ಮತಗಳನ್ನು ಪಡೆಯಲಿದ್ದಾರೆ. 2013ರ ಚುನಾವಣೆಯಲ್ಲಿ 23.33ರಷ್ಟು ಮತಗಳನ್ನು ಪಡೆದಿದ್ದರು. ಈ ಬಾರಿ -11.42ರಷ್ಟು ಮತಗಳಿಗೆ ವ್ಯತ್ಯಾಸವಾಗಿದೆ.

ಯಡಿಯೂರಪ್ಪ ಅವರು ಕಾರಣ
2013ರ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ +66 ಸ್ಥಾನಗಳು ಹೆಚ್ಚಾಗಲಿದ್ದು 106 ಸ್ಥಾನಗಳನ್ನು ಪಕ್ಷ ಪಡೆಯಲಿದೆ. ಕಳೆದ ಬಾರಿಯ ಹಿನ್ನಡೆಗೆ ಯಡಿಯೂರಪ್ಪ ಅವರು ಓಟುಗಳನ್ನು ಒಡೆದಿದ್ದೇ ಕಾರಣವಾಗಿದೆ.
ಕಾಂಗ್ರೆಸ್ 2013ರಲ್ಲಿ 122 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ -47ರಷ್ಟು ಸೀಟುಗಳು ಈ ಚುನಾವಣೆಯಲ್ಲಿ ಕಡಿಮೆಯಾಗಲಿದ್ದು 75 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಲಾಗಿದೆ. ಜೆಡಿಎಸ್ ಕಳೆದ ಚುನಾವಣೆಯಲ್ಲಿ 40 ಸ್ಥಾನಗಳಲ್ಲಿ ಗೆದ್ದಿತ್ತು. ಈ ಬಾರಿ -3ಆಗಲಿದ್ದು, 37 ಸೀಟು ಗೆಲ್ಲುವ ನಿರೀಕ್ಷೆ ಇದೆ.

110 ಕ್ಷೇತ್ರದಲ್ಲಿ ಬಿಜೆಪಿ ಗೆಲುವು
ನ್ಯೂಸ್ ಎಕ್ಸ್ ನೀಡಿರುವ ಚುನಾವಣೋತ್ತರ ಸಮೀಕ್ಷ ಪ್ರಕಾರ ಬಿಜೆಪಿ 102-110, ಕಾಂಗ್ರೆಸ್ 72-78 ಮತ್ತು ಜೆಡಿಎಸ್ 35-39 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಇತರ ಅಭ್ಯರ್ಥಿಗಳು 3-5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ.
ಸಮೀಕ್ಷೆ ಪ್ರಕಾರ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಆಡಳಿತಾರೂಡ ಕಾಂಗ್ರೆಸ್ 72-78 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಲಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications