• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಂದಿಯ ತಾಣ ಚಿಕ್ಕಬಳ್ಳಾಪುರ ಜಿಲ್ಲೆ ಕ್ಷೇತ್ರ ಪರಿಚಯ

By Rajendra
|

ಕೋಲಾರ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದ ಚಿಕ್ಕಬಳ್ಳಾಪುರ 23.08.2007 ರಲ್ಲಿ ಹೊಸ ಜಿಲ್ಲೆಯಾಗಿ ಉದಯವಾಯಿತು. ಸರ್. ಎಂ. ವಿಶ್ವೇಶ್ವರಯ್ಯ ಜಿಲ್ಲೆ ಎಂದು ಹೊಸದಾಗಿ ನಾಮಕರಣ ಮಾಡಬೇಕೆಂದು ಜನ ಬಯಸಿದ್ದರಾದರೂ ಅದು ಸಾಧ್ಯವಾಗಲಿಲ್ಲ. ಚಿಕ್ಕಬಳ್ಳಾಪುರದ ಮೆಣಸಿನಕಾಯಿ ತನ್ನದೇ ಆದ ರುಚಿ, ಖಾರ, ಸ್ವಾದಕ್ಕೆ ಜನಪ್ರಿಯವಾಗಿದೆ.

ಜಿಲ್ಲೆಯಲ್ಲಿ ತಂಪು ಹವಾಗುಣದ ನಂದಿ ಬೆಟ್ಟವೂ ಇದೆ ಜೊತೆಗೆ ಭಯಬೀಳಿಸುವ ಟಿಪ್ಪು ಡ್ರಾಪ್ ಸಹ ಇದೆ. ಇಲ್ಲಿನ ಪರಿಸ್ಥಿಯೂ ಇದೇ ರೀತಿ ಇದೆ. ಎಲ್ಲವೂ ಇದ್ದಂತೆ ಏನೂ ಇಲ್ಲದಂತೆ ಭಾಸವಾಗುತ್ತದೆ. ಆದರೆ ಜನ ಮಾತ್ರ ಕೂಲಾಗಿ ತಮ್ಮ ಪಾಡಿಗೆ ತಾವಿದ್ದಾರೆ. ಇದ್ದಷ್ಟರಲ್ಲೇ ಸುಖಕಾಣುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ನೀರಿನ ಸಮಸ್ಯೆ ಇದ್ದರೂ ರೈತರು ಹೈನುಗಾರಿಕೆ, ರೇಶ್ಮೆಹುಳು ಸಾಕಣೆ ಹಾಗೂ ತೋಟಗಾರಿಕೆಯಲ್ಲಿ ಪ್ರಗತಿ ಕಂಡಿದ್ದಾರೆ. ಬೆಂಗಳೂರಿನಿಂದ ಕೇವಲ 58 ಕಿ.ಮೀ ದೂರದಲ್ಲಿದ್ದರೂ ಮೂಲ ಸೌಲಭ್ಯಗಳಿಂದ ಬಹಳಷ್ಟು ವಂಚನಗೆ ಒಳಗಾಗ ಜಿಲ್ಲೆ ಎಂದೇ ಹೇಳಬೇಕು.

Chikkaballapur District

ಒಂದು ಕಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ವೃಷಭಾವತಿ ನದಿಯ ಉಗಮ ಸ್ಥಾನ ನಂದಿಬೆಟ್ಟ ಎಂದರೆ ಇಂದಿನ ಯುವ ಪೀಳಿಗೆ ನಂಬುದು ಕಷ್ಟ. ಅಯ್ಯೋ ಚರಂಡಿಯನ್ನು ನದಿ ಅಂತಾರಲ್ಲಪ್ಪಾ ಎಂದೇ ಭಾವಿಸುತ್ತಾರೆ. ಜಿಲ್ಲೆಯನ್ನು ನಕಶಿಖಾಂತ ಕಾಡುತ್ತಿರುವುದು ಕುಡಿಯುವ ನೀರಿನ ಸಮಸ್ಯೆ.

ಕೊಳವೆ ಬಾವಿಗಳನ್ನೇ ನೆಚ್ಚಿಕೊಂಡ ಇಲ್ಲಿನ ರೈತರು ಲಕ್ಷಾಂತರ ಖರ್ಚು ಮಾಡಿ ಪಾತಾಳದಲ್ಲಿ ಅಡಗಿರುವ ಗಂಗೆಯನ್ನು ಮೇಲಕ್ಕೆ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕೆಲವರು ಯಶಸ್ಸು ಕಂಡರೆ ಇನ್ನೂ ಕೆಲವರು ಮರಳಿ ಯತ್ನವ ಮಾಡಿ ಸೋತು ಸುಣ್ಣವಾಗಿದ್ದಾರೆ.

ಜಿಲ್ಲೆಯ ಜನ ಶಾಶ್ವತ ನೀರಾವರಿ ಯೋಜನೆಗಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಬಾರಿಯಾದರೂ ಕೇವಲ ಬಾಯಿ ಮಾತಿಗೆ ಸೀಮಿತವಾಗದೆ ಎತ್ತಿನ ಹೊಳೆ ಹರಿಸಿದರೆ ಜನ ಆಜನ್ಮ ಪರ್ಯಂತ ಋಣವಾಗಿರುತ್ತಾರೆ.

ಜಿಲ್ಲೆಯಲ್ಲಿ ಅತಿದೊಡ್ಡ ಸಮಸ್ಯೆ ಎಂದರೆ ನೀರಿನ ಸಮಸ್ಯೆ. ಇದು ಬಿಟ್ಟರೆ ಇನ್ನೇನು ಸಮಸ್ಯೆಗಳೇ ಇಲ್ಲ ಎನ್ನುವಂತಿಲ್ಲ. ರಾಜ್ಯದ ಉಳಿದ ಜಿಲ್ಲೆಗಳಲ್ಲಿರುವಂತೆ ಇಲ್ಲೂ ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿವೆ. ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ ಹಾಗೂ ಶಿಡ್ಲಘಟ್ಟ ಜಿಲ್ಲೆಯ ತಾಲೂಕುಗಳು.

ಪ್ರವಾಸಿ ತಾಣಗಳು: ಸರ್. ಎಂ. ವಿಶ್ವೇಶ್ವರಯ್ಯ ಅವರ ಹುಟ್ಟೂರು ಮುದ್ದೇನಹಳ್ಳಿ, ನಂದಿಬೆಟ್ಟ, ಚಿಂತಾಮಣಿಯ ಮುರುಗಮಲ್ಲ ದರ್ಗಾ, ಕೈವಾರ, ಕೈಲಾಸಗಿರಿ, ಆಲಂಬಗಿರಿಯ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ, ತಲಕಾಯಲ ಬೆಟ್ಟ, ವೀರಾಪುರ ದೇವಸ್ಥಾನ. ಗುಮ್ಮನಾಯಕನ ಪಾಳ್ಯದ ಏಳುಸುತ್ತಿನ ಕೋಟೆ (ಬಾಗೇಪಲ್ಲಿ), ದಕ್ಷಿಣ ಭಾರತದ ಜಲಿಯನ್ ವಾಲಾಭಾಗ್ ವಿದುರಾಶ್ವಥ, ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಎಚ್ ನರಸಿಂಹಯ್ಯ ಅವರ ಹುಟ್ಟೂರು ಹೊಸೂರು, ಸುರಸದ್ನಗಿರಿ ಬೆಟ್ಟ (ಗುಡಿಬಂಡೆ).

ವಿಧಾನಸಭಾ ತಾಲೂಕು/ಕ್ಷೇತ್ರಗಳು: ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು.

ಜಿಲ್ಲೆಯ ಜನಸಂಖ್ಯೆ: 1,254,377
ಸಾರಿಗೆ: ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 7 ಜಿಲ್ಲೆಯ ಮೂಲಕ ಹಾದುಹೋಗುತ್ತದೆ.
ಪ್ರಮುಖ ಸಮುದಾಯ: ಒಕ್ಕಲಿಗ

ಚಿಕ್ಕಬಳ್ಳಾಪುರ: ಕೆಪಿ ಬಚ್ಚೇಗೌಡ (ಜೆಡಿಎಸ್) 49774 ಮತಗಳು
ಬಾಗೇಪಲ್ಲಿ: ಎನ್ ಸಂಪಂಗಿ (ಕಾಂಗ್ರೆಸ್) 32244 ಮತಗಳು
ಗೌರಿಬಿದನೂರು: ಎನ್ಎಚ್ ಶಿವಶಂಕರ ರೆಡ್ಡಿ (ಕಾಂಗ್ರೆಸ್) 39127 ಮತಗಳು
ಶಿಡ್ಲಘಟ್ಟ: ವಿ ಮುನಿಯಪ್ಪ (ಕಾಂಗ್ರೆಸ್) 65939 ಮತಗಳು
ಚಿಂತಾಮಣಿ: ಎಂಸಿ ಸುಧಾಕರ್ (ಕಾಂಗ್ರೆಸ್) 58103 ಮತಗಳು

ಪ್ರಮುಖ ಸಮಸ್ಯೆಗಳು: ನೀರು ನೀರು ನೀರು. ರಸ್ತೆ ಸೌಲಭ್ಯಕ್ಕೆ ಪ್ರಾಮುಖ್ಯತೆ ನೀಡಿಲ್ಲ. ಒಳನಾಡಿನ ಸಾರಿಗೆ ವ್ಯವಸ್ಥೆ ತೀರಾ ಹದಗೆಟ್ಟಿದೆ. ಹೈನುಗಾರಿಕೆ ಹಾಗೂ ರೇಶ್ಮೆ ಬೆಳೆಗಾರರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಹೊಸ ಜಿಲ್ಲೆಯಾಗಿ ಐದು ವರ್ಷಗಳನ್ನು ಕಳೆದಿದ್ದರೂ ಇನ್ನೂ ಮೂಲ ಸೌಲಭ್ಯಗಳು ಸಿಕ್ಕಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly Election 2013 : Chikkaballapur District Assembly Constituency Profiles. Chikkaballapur district consists 8 Assembly constituencies: Gauribidanur, Bagepalli, Chikkaballapur, Yelahanka, Hosakote, Devanahalli, Doddaballapur, Nelamangala.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more