ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡಪಕ್ಷದ ಕೆಂಪು ಬಾವುಟ ಅಭ್ಯರ್ಥಿಗಳು ಕಣಕ್ಕೆ

By Mahesh
|
Google Oneindia Kannada News

Left parties to contest 30 seats in Karnataka Assembly
ಬೆಂಗಳೂರು, ಏ.16: ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯೂನಿಸ್ಟ್ ಪಕ್ಷ ಹಾಗೂ ಫಾರ್ವರ್ಡ್ ಬ್ಲಾಕ್ ಮೂರು ಎಡಪಕ್ಷಗಳು ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡಕ್ಕೆ ತನ್ನ 30 ಅಭ್ಯರ್ಥಿಗಳನ್ನು ಇಳಿಸುತ್ತಿದೆ. ಸಿಪಿಐ(ಎಂ)-16, ಸಿಪಿಐ-8 ಹಾಗೂ ಫಾರ್ವರ್ಡ್ ಬ್ಲಾಕ್- 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.

ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ಎಂಬ ಘೋಷಣೆಯೊಂದಿಗೆ ಎಡಪಕ್ಷಗಳು ಹೆಚ್ಚಿನ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದೆ. ಸಿಪಿಐ, ಸಿಪಿಎಂ ಹಾಗೂ ಫಾರ್ವರ್ಡ್ ಬ್ಲಾಕ್ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸುತ್ತಿದ್ದು, ಸಿಪಿಎಂ ನಾಯಕ ವಿ.ಜಿ.ಕೆ.ನಾಯರ್ ಹಾಗೂ ಫಾರ್ವರ್ಡ್ ಬ್ಲಾಕ್ ರಾಜ್ಯಾಧ್ಯಕ್ಷ ಜಿ.ಆರ್.ಶಿವಶಂಕರ್ ಸೋಮವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದರು.

ಉಳಿದ ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಲೋಕಸತ್ತ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ವಿ.ಜಿ.ಕೆ.ನಾಯರ್ ಹೇಳಿದರು.

ರಾಜ್ಯದಲ್ಲಿ ಎಡಪಕ್ಷಗಳು 80ರ ದಶಕದಲ್ಲಿ ಪ್ರಬಲವಾಗಿದ್ದವು. ಆದರೆ, ಕಾಲಾನಂತರ ದುರ್ಬಲವಾಯಿತು. ಅಂದಿನ ಬಲವನ್ನು ಮತ್ತೆ ಪಡೆಯಲು ಈ ಚುನಾವಣೆ ಅನುಕೂಲಕರವಾಗಿದೆ. ಆದ್ದರಿಂದ ಈ ಬಾರಿ ಹೆಚ್ಚಿನ ಸ್ಥಾನ ಗಳಿಸಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದಲ್ಲಿ ಬರೀ 5ಕ್ಷೇತ್ರದಲ್ಲಿ ಗೆದ್ದರೂ ಎಡಪಕ್ಷಗಳು ವಿಧಾನಸಭೆಯಲ್ಲಿ ಕಾರ್ಮಿಕರ ಪರ ದನಿ ಎತ್ತುವುದಕ್ಕೆ ನೆರವಾಗುತ್ತದೆ ಎಂದರು.

ಕ್ಷೇತ್ರ:ಅಭ್ಯರ್ಥಿಗಳ ಪಟ್ಟಿ
* ಆನೇಕಲ್:ಡಿ.ಮಾದೇಶ್
* ಬಾಗೇಪಲ್ಲಿ: ಜಿ.ವಿ.ಶ್ರೀರಾಮರೆಡ್ಡಿ
* ಗೌರಿಬಿದನೂರು:ಸಿ.ಸಿ.ಅಶ್ವತ್ಥಪ್ಪ
* ಚಿಂತಾಮಣಿ: ಸಿ.ಗೋಪಿನಾಥ್
* ಕೆ.ಜಿ.ಎಫ್:ಪಿ.ತಂಗರಾಜ್
* ದೊಡ್ಡಬಳ್ಳಾಪುರ: ಆರ್.ಚಂದ್ರ ತೇಜಸ್ವಿ
* ಕೆ.ಆರ್.ಪುರ: ಗೌರಮ್ಮ
* ಮಳವಳ್ಳಿ: ಕೆ.ಬಸವರಾಜ್
* ಮಂಗಳೂರು ದಕ್ಷಿಣ: ವಸಂತ ಆಚಾರ್ಯ
* ಮಂಗಳೂರು: ಕೃಷ್ಣಪ್ಪ ಸಾಲಿಯಾನ
* ಬೆಳ್ತಂಗಡಿ:ಬಿ.ಎಂ.ಭಟ್
* ಕಂಪ್ಲಿ:ಶಿವಶಂಕರ್
* ಹೊಸಪೇಟೆ:ಆರ್.ಭಾಸ್ಕರ್‌ರೆಡ್ಡಿ
* ಕನಕಗಿರಿ:ಎಂ.ಹುಲುಗಪ್ಪ
* ಬೈಂದೂರು: ಕೆ.ಶಂಕರ್
* ಗುಲ್ಬರ್ಗಾ ಗ್ರಾಮಾಂತರ: ಮಾರುತಿ ಮಾನ್ಪಡೆ
* ಮೂಡಿಗೆರೆ:ಸಾತಿ ಸುಂದರೇಶ್
* ಮುಳಬಾಗಿಲು: ಎನ್.ಅಂಬರೀಶ್
* ಮೊಳಕಾಲ್ಮೂರು: ಪಟೇಲ್ ಜಿ.ಪಾಪನಾಯಕ್
* ಸಿಂಧನೂರು: ಬಾಸುಮೀಯ
* ಬೀದರ್ ದಕ್ಷಿಣ: ಬಾಬುರಾವ್ ಹೊನ್ನ
* ಬಳ್ಳಾರಿ ನಗರ: ನಾಗಭೂಷಣ್ಣ ರಾವ್
* ಜೇವರ್ಗಿ: ಮಹೇಶ್‌ಕುಮಾರ್ ರಾಥೋಡ್
* ಸಂಡೂರು : ಹನುಮಂತಪ್ಪ
* ಅಳಂದ:ಭೀಮಾಸಿಂಗ್ ರಾಥೋಡ್
* ಚಿತ್ತಾಪುರ: ವಿಜಯಸಿಂಗ್ ಅರುಡಿ
* ಸೇಡಂ:ನಾಗೇಂದ್ರಪ್ಪ ಗುರುಡಿ

English summary
Three Left parties — Communist Party of India (Marxist), Communist Party of India (CPI) and Forward Bloc — will jointly field 30 candidates in the May 5 Karnataka Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X