ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂದಗಿ ಕ್ಷೇತ್ರ: ಬಿಜೆಪಿ-ಜೆಡಿಎಸ್ ನಡುವೆ ಹಣಾಹಣಿ?!

|
Google Oneindia Kannada News

ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪಡಖೇ ಸೆರೆಸಿಕ್ಕ ದೇವರನಾವದಗಿ ದೇವಾಲಯವಿರುವುದು ಸೀಮದಗಿ ತಾಲೂಕಿನಲ್ಲೇ. ವಿಜಯಪುರದ ಪ್ರಸಿದ್ಧ ತಾಣಗಳಲ್ಲಿ ಸಿಂದಗಿಯೂ ಒಂದು.

12 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ಇಲ್ಲಿನ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ.

ಇದು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು.

Karnataka Assembly Election 2018: Sindagi Constituency Profile

ಉರ್ದು, ಮರಾಠಿ ಮಿಶ್ರಿತ ಕನ್ನಡವನ್ನು ಮಾತನಾಡಿದರೂ ಇಲ್ಲಿನ ಬಹುಸಂಖ್ಯಾತ ಜನರಾಡುವ ಭಾಷೆ ಕನ್ನಡವೇ. ಜೋಳ, ಶೇಂಗಾ, ಈರುಳ್ಳಿ, ಸೂರ್ಯಕಾಂತಿ, ದಾಳಿಂಬೆ ಮುಂತಾದವುಗಳು ಇಲ್ಲಿನ ಮಣ್ಣಿನಲ್ಲಿ ಹೇರಳವಾಗಿ ಬೆಳೆಯುತ್ತವೆ.

ಇಲ್ಲಿಮ ಲಾವಣಿ ಪದ, ಡೊಳ್ಳು ಕುಣಿತ, ಗೀಗೀ ಪದಗಳು ಕರ್ನಾಟಕದ ಜಾನಪದ ಪರಂಪರೆಗೆ ವಿಶೇಷ ಮೆರಗು ನೀಡಿವೆ. ಇಲ್ಲಿನ ಸಾಕ್ಷರತೆಯ ಪ್ರಮಾಣ ಶೇ.67.

ಇನ್ನು ಇಲ್ಲಿನ ರಾಜಕೀಯದ ಬಗ್ಗೆ ಮಾತನಾಡುವುದಾದರೆ, 2013 ರಲ್ಲಿ ಮಾಜಿ ಸಚಿವ ಎಂ.ಸಿ.ಮನಗೂಳಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋತಿದ್ದರು. ಬಿಜೆಪಿ ಪ್ರಭಾವ ಹೆಚ್ಚಿಲ್ಲದಿದ್ದರೂ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದರು.

ಆದರೆ ಈ ಚುನಾವಣೆಯಲ್ಲೂ ಇದಕ್ಕೆ ಅವಕಾಶ ಮಾಡಿಕೊಡಬಾರದೆಂದು ಮನಗೂಳಿ ಈಗಿನಿಂದಲೇ ತಂತ್ರ ರೂಪಿಸುತ್ತಿದ್ದು, ಈ ಬಾರಿ ಬಿಜೆಪಿ, ಜೆಡಿಎಸ್ ಮಧ್ಯೆ ಪ್ರಬಲ ಸ್ಪರ್ಧೆ ಏರ್ಪಡಲಿದೆ.

ರಮೇಶ ಭುಸನೂರ 37834 ಮತಗಳನ್ನು ಪಡೆದಿದ್ದರೆ, 37082 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ನ ಎಂ.ಸಿ.ಮನಗೂಳಿ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದರು.

English summary
Karnataka Assembly Election 2018: Read all about Sindagi assembly constituency of Vijayapura district. Get election news from Sindagi. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X