ಕ್ಷೇತ್ರ ಪರಿಚಯ: ಗೊಮ್ಮಟ ನಗರಿಯಲ್ಲಿ ಜಿದ್ದಾಜಿದ್ದಿನ ಹೋರಾಟ

Posted By:
Subscribe to Oneindia Kannada

ಐತಿಹಾಸಿಕ ನಗರಿ ಶ್ರವಣ ಬೆಳಗೊಳ ಪ್ರಮುಖ ಜೈನ ಧಾರ್ಮಿಕ ಕೇಂದ್ರ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಒಂದು ಹೋಬಳಿಯಾಗಿದ್ದರೂ ವಿಧಾನಸಭಾ ಕ್ಷೇತ್ರವಾಗಿ ಬೆಳೆದಿದೆ.ಇಲ್ಲಿನ ವಿಂಧ್ಯಗಿರಿಯಲ್ಲಿ ಚಾವುಂಡರಾಯನಿಂದ ಸ್ಥಾಪಿಸಲಾಗಿರುವ ಗೊಮ್ಮಟ ಮೂರ್ತಿಯ ಏಕಶಿಲಾ ವಿಗ್ರಹ ವಿಶ್ವಪ್ರಸಿದ್ಧಿ.

ಈ ಬಾರಿ ಮಹಾಮಸ್ತಕಾಭಿಷೇಕಕ್ಕೆ ಸಜ್ಜಾಗುತ್ತಿರುವ ಈ ನಗರ ಪ್ರಮುಖ ವಿದ್ಯಾಕೇಂದ್ರವೂ ಹೌದು. ಈ ಬಾರಿ ಕೂಡಾ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಹೋರಾಟ ಸಾಧ್ಯತೆಯಿದೆ.

ಮಹಾಮಸ್ತಕಾಭಿಷೇಕ ಆಚರಣೆ ಸಿದ್ಧತೆಯಲ್ಲಿ ಉಭಯ ಪಕ್ಷಗಳು ಪಾಲ್ಗೊಳ್ಳುತ್ತಿವೆ. ಆದರೆ, ಈ ಬಾರಿಯೂ ತೆನೆ ಹೊತ್ತ ಮಹಿಳೆಯ ಪಕ್ಷಕ್ಕೆ ಗೊಮ್ಮಟನ ಕೃಪೆ ಸಿಗುವ ಲಕ್ಷಣಗಳಿವೆ.

Karnataka Assembly Election 2018: Shravanabelagola constituency profile

ಜೈನರ ಮಠದಿಂದ ಹಲವು ಶೈಕ್ಷಣಕ ಸಂಸ್ಥೆಗಳನ್ನು ನಡೆಸಲಾಗುತ್ತಿದ್ದು, ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಪದವಿ ಕಾಲೇಜುಗಳಿವೆ. ಜೈನ, ಶ್ರೀವೈಷ್ಣವ ಸಂಶೋಧನಾ ಕೇಂದ್ರಗಳಿವೆ.

ಹೆದ್ದಾರಿಗೆ ಹತ್ತಿರವಿದ್ದರೂ ರಾಜಧಾನಿಯಿಂದ ನೇರ ಬಸ್ ಸಂಪರ್ಕವಿಲ್ಲ. ಎಲ್ಲಿಂದ ಬಂದರೂ ಚನ್ನರಾಯಪಟ್ಟಣಕ್ಕೆ ಬಂದು ಅಲ್ಲಿಂದ ಶ್ರವಣಬೆಳಗೊಳ ತಲುಪಬೇಕು. ಹಾಸನದಿಂದ ಬೆಳಗೊಳವನ್ನು ಸಂಪರ್ಕಿಸುವ ರೈಲುಮಾರ್ಗ ಪೂರ್ಣಗೊಂಡಿದೆ. ಮಸ್ತಕಾಭಿಶೇಕದ ಹಿನ್ನಲೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಭರದಿಂದ ಸಾಗಿದೆ. ಇಲ್ಲಿ ಊಟ ವಸತಿ ಕೇಂದ್ರಗಳಿದ್ದರೂ ಉತ್ತಮ ಗುಣಮಟ್ಟದಲ್ಲಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ, ಜೈನ ಮತದಾರರನ್ನು ಒಲಿಸಿಕೊಂಡು ಜೆಡಿಎಸ್ ನ ಸಿ.ಎನ್ ಬಾಲಕೃಷ್ಣ ಅವರು (87,185) ಕಾಂಗ್ರೆಸ್ಸಿನ ಸಿ. ಎನ್ ಪುಟ್ಟೇಗೌಡ(63041) ವಿರುದ್ಧ 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಕೂಡಾ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಹೋರಾಟ ಸಾಧ್ಯತೆಯಿದೆ.

ಮಹಾಮಸ್ತಕಾಭಿಷೇಕ ಆಚರಣೆ ಸಿದ್ಧತೆಯಲ್ಲಿ ಉಭಯ ಪಕ್ಷಗಳು ಪಾಲ್ಗೊಳ್ಳುತ್ತಿವೆ. ಆದರೆ, ಈ ಬಾರಿಯೂ ತೆನೆ ಹೊತ್ತ ಮಹಿಳೆಯ ಪಕ್ಷಕ್ಕೆ ಗೊಮ್ಮಟನ ಕೃಪೆ ಸಿಗುವ ಲಕ್ಷಣಗಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Shravanabelagola assembly constituency of Hassan. Get election news from Shravanabelagola. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ